ಗ್ರೇಟರ್ ಬೆಂಗಳೂರು ಮಸೂದೆ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ: ಪದ್ಮನಾಭರೆಡ್ಡಿ

2 years ago

ಬೆಂಗಳೂರು ನಗರವನ್ನು ಛಿದ್ರಛಿದ್ರ ಮಾಡಬೇಡಿ: ವಿರೋಧ ಪಕ್ಷದ ಮಾಜಿ ನಾಯಕ

ಬೆಂಗಳೂರು: ರಾಜ್ಯ ಸರ್ಕಾರಕ್ಕೆ  ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲು ಅವಕಾಶವಿದೆಯೇ? ಮುಖ್ಯಮಂತ್ರಿಗಳು ಸಹ ಕಾನೂನು ಪದವಿ ಪಡೆದವರು, ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ರಾಜ್ಯ ಸರ್ಕಾರ ಆರ್ಟಿಕಲ್ 243ರ ಪ್ರಕಾರ ಪಾಲಿಕೆ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಹೇಳಿದರು.

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ರಚನೆ ಮಾಡಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದೆ. ಸಮಿತಿ ಸಹ ಮಾಡಿದೆ. ಬೆಂಗಳೂರುನಗರ ಛಿದ್ರಛಿದ್ರ ಮಾಡುವುದು ಬೇಡ, ಸಂವಿಧಾನದ ಪ್ರಕಾರ ಬೆಂಗಳೂರು ನಗರ ವಿಂಗಡಣೆ ಮಾಡಲು ಅವಕಾಶವನ್ನು ರಾಜ್ಯ ಸರ್ಕಾರ ಪಡೆದಿದೆ ಎಂದರು.

ಗ್ರೇಟರ್ ಬೆಂಗಳೂರು ರಚನೆ ನಿಯಾಮವಳಿ ಹಳೆಯ ಬಿಬಿಎಂಪಿ ನಿಯಾಮವಳಿ ಸಹ ಒಂದೇ ಆಗಿದೆ ಯಾವುದೇ ಬದಲಾವಣೆ ಇಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಂಗಡಣೆ ಮಾಡಬೇಡಿ. ಒಂದು ಕಡೆ ತೆರಿಗೆ ಹೆಚ್ಚಳ ಇನ್ನೊಂದು ಕಡೆ ತೆರಿಗೆ ಸಂಗ್ರಹ ಕಡಿಮೆ ಬರುತ್ತದೆ. ಪಾಲಿಕೆ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ವ್ಯತ್ಯಾಸ ಆಗಬಹುದು. ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆ ಎಂದರು.

ಅನ್ಯ ಭಾಷಿಗರಿಗೆ ಪಾಲಿಕೆ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಓಟ್ ಬ್ಯಾಂಕ್ ರಾಜಕೀಯ ಮಾಡಲು ಕಾಂಗ್ರೆಸ್ ಪಕ್ಷ ಕುತಂತ್ರ ಮಾಡುತ್ತಿದೆ. ಬಿ.ಎಸ್.ಪಾಟೀಲ್, ಸಿದ್ದಯ್ಯ, ರವೀಂದ್ರನ್ ಸಮಿತಿ ನೀಡಿರುವ ವರದಿಯಲ್ಲಿ ಲಂಡನ್ ಮಾದರಿ ಆಡಳಿತ ಬೆಂಗಳೂರಿನಲ್ಲಿ ತರುತ್ತೇವೆ ಎಂದು ಹೇಳಿದ್ದರು. ಲಂಡನ್ ನಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಹೆಚ್ಚಿನ ಅಧಿಕಾರ ನೀಡಿದ್ದಾರೆ. ಆದರೆ ಗ್ರೇಟರ್ ಬೆಂಗಳೂರು ವಿಷಯ ಪ್ರಸ್ತಾಪಿಸುವ ಮೂಲಕ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಕಡಿತ ಮಾಡಿದ್ದಾರೆ ಎಂದರು.

1ರಿಂದ 10ಪಾಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಾವ ಸಂವಿಧಾನ ಅನ್ವಯ ಮಾಡುತ್ತೀರಿ ಎಂದು ಸರ್ಕಾರ ತಿಳಿಸಬೇಕು. 5 ವರ್ಷಕ್ಕೊಮ್ಮೆ ಹೊಸ ಸರ್ಕಾರ ಬಂದ ನಂತರ ಬಿಬಿಎಂಪಿಯಲ್ಲಿ ನಿಯಾಮವಳಿ ಬದಲಾವಣೆಯಾಗುತ್ತಿದೆ. ಇದರಿಂದ ಆಡಳಿತ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

ಬೆಂಗಳೂರು ನಗರ ಬಿಜೆಪಿ ಭದ್ರಕೋಟೆ ಎಂದು ತಿಳಿದ ಕಾಂಗ್ರೆಸ್ ಪಕ್ಷ ಶಾಸಕರಿಗೆ ಬಿಬಿಎಂಪಿಯಲ್ಲಿ ಮತದಾನ ಮಾಡುವ ಹಕ್ಕು ಕೊಟ್ಟಿಲ್ಲ. ಗ್ರೇಟರ್ ಬೆಂಗಳೂರು ಮಸೂದೆ ಜಾರಿಗೆ ತರಲು ಸರ್ಕಾರಕ್ಕೆ ಅವಕಾಶವಿಲ್ಲ ಎಂದರು.

ಬಿಬಿಎಂಪಿ ಚುನಾವಣೆ ಮಾಡಬೇಡಿ ಎಂದು ಯಾವ ನ್ಯಾಯಾಲಯ ಹೇಳಿಲ್ಲ. ಆದರು ಸರ್ಕಾರ ಬಿಬಿಎಂಪಿ ಚುನಾವಣೆ ಮಾಡುತ್ತಿಲ್ಲ. ಮೀಸಲಾತಿ ಮಾಡಿದರೆ ಸಾಕು, ಚುನಾವಣೆ ಮಾಡಬಹುದು. ಆದರೂ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದಲ್ಲಿ ಕೇಸ್ ಇದೆ ಎಂದು ಸುಳ್ಳು ಹೇಳುತ್ತಿದೆ ಎಂದರು.

ಗ್ರೇಟರ್ ಬೆಂಗಳೂರು ಮಸೂದೆ ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು. ಸಂಪುಟದಲ್ಲಿ ನಿರ್ಣಯ ಮಾಡಿ ಕಳುಹಿಸಿದರೂ ರಾಜ್ಯಪಾಲರು ಸಂವಿಧಾನ ವಿರೋಧಿ ಮಸೂದೆಯನ್ನು ತಿರಸ್ಕಾರ ಮಾಡುವ ಸಾಧ್ಯತೆ ಇದೆ ಎಂದರು.

Leave a Reply