ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಜಾಹಿರಾತಿಗೆ ಅನುದಾನ ಮೀಸಲು

4 years ago

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಹಿಂದಿನ ವರ್ಷಗಳಂತೆ ಜಾಹಿರಾತು ಬಿಡುಗಡೆಗೆ ಅನುದಾನ ಮೀಸಲಿರಿಸುವಂತೆ ನೀಡಿದ್ದ ಮನವಿಯ ಹಿನ್ನೆಲೆಯಲ್ಲಿ ಇಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರನ್ನು ಮತ್ತು ವಿಶೇಷ ಆಯುಕ್ತ ಜಯರಾಮ್ ರಾಯಪುರರವರನ್ನು ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸತ್ಯನಾರಾಯಣ್ ನೇತೃತ್ವದ ಪತ್ರಕರ್ತರ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿತು.

ಸಂಘದ ಸದಸ್ಯರಾದ ಲಿಂಗರಾಜು ನೊಣವಿನಕೆರೆ, ಹುಲಿ ಅಮರ್ ನಾಥ್, ವಿಜಯಕುಮಾರ್, ನಾರಾಯಣ್, ಎಸ್.ನರಸಿಂಹಮೂರ್ತಿ, ಜಿ.ಎಸ್. ಮಹೇಶ್ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಪ್ರತಿ ವರ್ಷದಂತೆ ಈ ಸಾಲಿನಲ್ಲಿ ಅನುದಾನ ಇಡಲಾಗಿದೆ. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಸಮಾಜದ ಮೇಲೆ ಚಲ್ಲುವ ಮಾಧ್ಯಮವಾಗಿದೆ ಎಂದರು.

ಅಧ್ಯಕ್ಷ ಕೆ.ಸತ್ಯನಾರಾಯಣ್ ಮಾತನಾಡಿ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವ ಪಾತ್ರವಹಿಸಿದೆ. ಪತ್ರಿಕೆಗಳಿಗೆ ಜಾಹಿರಾತು ಮುಖ್ಯ. ಈ ನಿಟ್ಟನಲ್ಲಿ ಸರ್ಕಾರ ಮತ್ತು ಬಿಬಿಎಂಪಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಪ್ರತಿವರ್ಷ ಅನುದಾನ ಮೀಸಲು ಇಡಬೇಕು ನಮ್ಮ ಸಂಘ ಮನವಿ ಮಾಡಲಾಗಿದೆ. ಸಮಾಜದ ಅಂಕುಡೊಂಕುತಿದ್ದಲು ಮತ್ತು ಸಮಾಜದ ಅಭಿವೃದ್ದಿಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆ ಕೊಡುಗೆ ಅಪಾರ ಎಂದರು.

ತುಷಾರ್ ಗಿರಿನಾಥ್ ಮತ್ತು ಜಯರಾಮ್ ರಾಯಪುರ ಅವರಿಗೆ ಸಂಘದ ಪರವಾಗಿ ಅಭಿನಂದನೆ ತಿಳಿಸಲಾಯಿತು.

Leave a Reply