ಪ್ರಭುತ್ವ ಚಳವಳಿಯನ್ನು ಛಿದ್ರಗೊಳಿಸುವ ಕುತಂತ್ರ ಮಾಡುತ್ತಿರುತ್ತದೆ: ಡಿ.ಎಚ್.ಪೂಜಾರ್

2 years ago

#government #plotting #crush #movement #DHPujar

ಕೊಪ್ಪಳ: ಆಳುವ ವರ್ಗ ಅಥವಾ ಪ್ರಭುತ್ವ, ಜನ ಚಳವಳಿಯನ್ನು ಹಿಮ್ಮೆಟ್ಟಿಸುವುದು ಮತ್ತು ಛಿದ್ರಗೊಳಿಸುವ ತಂತ್ರ ಕುತಂತ್ರದ ಕಾರ್ಯವನ್ನು ಎಲ್ಲಾ ಕಾಲಾವಧಿಯಲ್ಲಿ ಮಾಡುತ್ತಿರುತ್ತದೆ ಎಂದು ಡಿ.ಎಚ್.ಪೂಜಾರ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ದಿನಾಂಕ 30-11-2023 ತಾವರಗೇರದಲ್ಲಿ ಆನಂದ ಭಂಡಾರಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಕತ್ವ ಅಥವಾ ಕಾರ್ಯಕರ್ತರಲ್ಲಿ ಅಪನಂಬಿಕೆ ಮೂಡಿಸುವುದು, ಜಾತಿ ಉಪಜಾತಿಯ ಅಸ್ತ್ರದ ಮೂಲಕ ಚಳುವಳಿಗೆ ಪೆಟ್ಟು ಕೊಡುವ ಕಾರ್ಯ ನಡೆಸುವುದು ಇತ್ಯಾದಿಗಳನ್ನು ಪ್ರಭುತ್ವ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಇದಲ್ಲದೆ ಹೋರಾಟದಲ್ಲಿ ಗಟ್ಟಿಯಾದ ನಾಯಕತ್ವವನ್ನು ಭ್ರಷ್ಟಗೊಳಿಸುವ (ಮದ್ಯಪಾನಕ್ಕೆ ತಳ್ಳುವುದು ಸೇರಿದಂತೆ) ಅಥವಾ ನಕಲಿ ನಾಯಕತ್ವ ಬೆಳಸಿ, ಅಸಲಿ ನಾಯಕತ್ವವನ್ನು ಹಿಂದಕ್ಕಿಕ್ಕುವ ಕಾರ್ಯವನ್ನು ಆಳುವ ವರ್ಗ ನಿರಂತರವಾಗಿ ಮಾಡುತ್ತಿರುತ್ತದೆ. ಇಂತಹ ತಂತ್ರಕುತಂತ್ರವನ್ನು ಮೀರಿ ಕೂಡ ಚಳವಳಿ ಮುಂದುವರೆದರೆ, ಪ್ರಭುತ್ವ ದುರ್ದಾಳಿ ನಡೆಸಿ ಚಳವಳಿಯನ್ನು ಬಗ್ಗು ಬಡಿಯುತ್ತದೆ. ನಾಯಕತ್ವ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಮುನ್ನಡೆದರೆ ಮಾತ್ರ ಬಲಿಷ್ಠ ಚಳುವಳಿಯನ್ನು ಮುನ್ನಡೆಸಲು ಸಾಧ್ಯ ಎಂದರು.

ಇದೇ ಸಭೆಯಲ್ಲಿ ಹೋರಾಟದ ಬದುಕಿನೊಂದಿಗೆ ಕುಟುಂಬವನ್ನು ನಿರ್ಲಕ್ಷಿಸಿ ಪ್ರಾಣ ತ್ಯಾಗ ಮಾಡಿದ ಕುಟುಂಬಗಳ ಬೆನ್ನಿಗೆ ನಿಲ್ಲಲು ಎರಡು ಜಿಲ್ಲೆಯ ಸಮಾನ ಮನಸ್ಕರು ದೊಡ್ಡ ಸಮಾವೇಶ ನಡೆಸಿ ಪ್ರಮುಖ ನಿರ್ಣಯ ಕೈಗೊಳ್ಳುವ ಅಭಿಪ್ರಾಯ ವ್ಯಕ್ತವಾದವು.

ಕೊಪ್ಪಳ ರಾಯಚೂರ ಜಿಲ್ಲೆಯ ಆನಂದ ಭಂಡಾರಿಯವರ ಹೋರಾಟದ ಒಡನಾಡಿಗಳು ಮತ್ತು ಇತರರು ಭಾಗವಹಿಸಿದ್ದರು.

Leave a Reply