ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್!

5 years ago

ಹೈದರಾಬಾದ್: ಆಂಧ್ರದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಒಗಿಸುವ ಕಾರ್ಯಕ್ರಮವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ತರಲಿದೆ. ಜಗನ್ ಕಚೇರಿಯಲ್ಲಿ “ಸ್ವೇಚ್ಛ” ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಯೋಜನೆ ಜಾರಿಯಾಗಲಿದೆ.

ರಾಜ್ಯ ಸರ್ಕಾರ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯ ಮತ್ತು ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಓದುತ್ತಿರುವ ಸುಮಾರು 10 ಲಕ್ಷ ಯುವತಿಯರಿಗೆ ಪ್ರತಿ ತಿಂಗಳು 10 ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ನೀಡಲು ಉದ್ದೇಶಿಸಿದೆ.

ಋತುಚಕ್ರದ ವೇಳೆಯಲ್ಲಿ ಶಾಲಾಕಾಲೇಜುಳಿಗೆ ವಿದ್ಯಾರ್ಥಿನಿಯರ ಗೈರುಹಾಜರಿ ನಿಯಂತ್ರಿಸಲು ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿ ಎರಡು ತಿಂಗಳಿಗೊಮ್ಮೆ, ಅಧಿಕಾರಿಗಳು ರಾಜ್ಯಾದ್ಯಂತ 10,000ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ಗಳನ್ನು ಒದಗಿಸಲಿದ್ದಾರೆ.

ಜೊತೆಗೆ, ಸರ್ಕಾರ ಯುನಿಸೆಫ್, ವಾಶ್ ಮತ್ತು ಪಿ & ಜಿ ಸಹಯೋಗದೊಂದಿಗೆ ಋತುಚಕ್ರದ ಕುರಿತು, ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವದ ಕುರಿತು ವಿಶೇಷ ಜಾಗೃತಿ ತರಗತಿಗಳನ್ನು ಆಯೋಜಿಸುತ್ತಿದೆ.

Leave a Reply