ದೆಹಲಿ: ಗೂಗಲ್ ಒಡೆತನದ ಜಿಮೇಯ್ಲ್ ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡಿದೆ. ಭಾರತದಲ್ಲಿ ಕೂಡ ಕೆಲವು ಪ್ರದೇಶಗಳಲ್ಲಿ ಈ ಮೇಯ್ಲ್ ಮಾಡಲಾಗದೆ ನೆಟ್ಟಿಗರು ಪರದಾಡಿದ್ದಾರೆ ಎಂದು ವರದಿಯಾಗಿದೆ.
ಡೌನ್ ಡಿಟೆಕ್ಟರ್ ಪ್ರಕಾರ, 68%ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 18%ರಷ್ಟು ಸರ್ವರ್ ಸಂಪರ್ಕ ಸಮಸ್ಯೆಯಿದ್ದರೆ, 14%ರಷ್ಟು ಜನರಿಗೆ ಲಾಗಿನ್ ಸಮಸ್ಯೆ ಎದುರಾಗಿದೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಬಳಕೆದಾರರು ಜಿಮೇಲ್ ಗೆ ಲಾಗಿನ್ ಆಗಲು ಪ್ರಯತ್ನಿಸಿ ಸೋತಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.



