ವಿಮ್ಸ್ ಆಸ್ಪತ್ರೆಗೆ ಸೂಕ್ತ ಮೂಲ ಸೌಕರ್ಯ ಒದಗಿಸಿ: ಸಿಪಿಐ(ಎಂ) ಆಗ್ರಹ

4 years ago

ಬಳ್ಳಾರಿ: ವಿಜಯನಗರ  ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಯಲ್ಲಿ ವಿದ್ಯುತ್ ಇಲ್ಲದ ಕಾರಣ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಸಾವನಪ್ಪಿರುವ ದುರ್ಘಟನೆಯನ್ನು ಶೀಘ್ರವಾಗಿ ತನಿಖೆಗೆ ಒಳಪಡಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬಳ್ಳಾರಿ ತಾಲೂಕು ಸಮಿತಿಯು ಸರಕಾರವನ್ನು ಆಗ್ರಹಿಸಿದೆ.

ವಿಮ್ಸ್‌ ಗೆ ಬಳ್ಳಾರಿ ಜಿಲ್ಲೆಯ ನಗರ ಪ್ರದೇಶ ಮಾತ್ರವಲ್ಲದೇ, ಸುತ್ತಲಿನ ತಾಲೂಕುಗಳಿಂದ ಮತ್ತು ಅಕ್ಕಪಕ್ಕದ ಮೂರು ನಾಲ್ಕು ಜಿಲ್ಲೆಗಳಿಂದ ನೂರಾರು ಬಡ ಕುಟುಂಬದ ರೋಗಿಗಳು ವ್ಯೆದ್ಯಕೀಯ ಚಿಕಿತ್ಸೆಗಾಗಿ ಆಗಮಿಸುತ್ತಾರೆ.

ಕಳೆದ ಎರಡು ದಿನಗಳ ಹಿಂದೆ, 5 ಗಂಟೆಗಳಿಗೂ ಹೆಚ್ಚು ಸಮಯ ವಿದ್ಯುತ್ ಸರಬರಾಜು ನಿಂತ ಕಾರಣ ಹಾಗು ಅಲ್ಲಿರುವ ಹಳೆಯ ವಿದ್ಯುತ್ ಜನರೇಟರ್ ಕಾರ್ಯನಿರ್ವಹಿಸದ ಕಾರಣ ತುರ್ತು ವಿಭಾಗದ ಮೂರು ರೋಗಿಗಳಿಗೆ ಆಮ್ಲಜನಕ ಸರಬರಾಜು ಇಲ್ಲದೆ ಸಾವಿಗಿಡಾಗಿದ್ದಾರೆ.

ವಿಮ್ಸ್‌ ನಿರ್ದೇಶಕರು ಅವರು ಕಾಯಿಲೆಗಳಿಂದ ಮರಣ ಹೊಂದಿದ್ದಾರೆ ಎಂದು ರ್ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ವಿಮ್ಸ್‌ ನ ಕಟ್ಟಡ ಹಳೆಯದಾಗಿದ್ದು ದುರಸ್ತಿ ಮಾಡಲು ಮುಂದಾಗಬೇಕು ಮತ್ತು ವಿದ್ಯುತ್ ಜನರೇಟರ್ಗಳನ್ನು ಬದಲಾಯಿಸಬೇಕು. ಅಧಿಕಾರಿಗಳ ಬೇಜಾಬ್ದಾರಿಯು ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕಾರಣರಾದ ಎಲ್ಲರ ಮೇಲೆ ಕೂಡಲೇ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಮುಂದಾಳತ್ವ ವಹಿಸಬೇಕೆಂದು ಸಿಪಿಐಎಂ ಒತ್ತಾಯ ಮಾಡಿದೆ.

ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಪಾತ್ರ ಇದರಲ್ಲಿ ಬಹಳ ಮುಖ್ಯ. ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳದಿದ್ದರೆ ಸಿಪಿಐ(ಎಂ) ಪಕ್ಷ ಹೋರಾಟಕ್ಕೆ ಇಳಿಯುತ್ತದೆ ಎಂದು ಆಗ್ರಹಿಸಿದರು.

 

Leave a Reply