ಮನೆ, ಮನೆಗೆ ಉಚಿತ ಟಿ.ವಿ. ವಿತರಣಾ ಕಾರ್ಯಕ್ರಮ

3 years ago

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮನೋರಾಯನಪಾಳ್ಯ ವಾರ್ಡ್ ನಲ್ಲಿ ಪ್ರತಿ ಮನೆಗೆ ಶಾಸಕರ ನೇತೃತ್ವದಲ್ಲಿ ಉಚಿತ ಟಿ.ವಿ. ವಿತರಣಾ ಕಾರ್ಯಕ್ರಮ ನಡೆಯಿತು.

ಹೆಬ್ಬಾಳ ಶಾಸಕರ ಬೈರತಿ ಸುರೇಶ್, ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಸ್ಥಳೀಯ ನಿವಾಸಿಗಳಿಗೆ ಉಚಿತವಾಗಿ ಟಿ.ವಿ.ಗಳನ್ನು ವಿತರಿಸಿದರು.

ಭೈರತಿ ಸುರೇಶ್ ಮಾತನಾಡಿ, ನಮ್ಮ ವಿಧಾನಸಭಾ ಕ್ಷೇತ್ರ ಬಡವರು, ಮಧ್ಯಮವರ್ಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊರೋನ ಸಾಂಕ್ರಮಿಕ ಲಾಕ್ ಡೌನ್ ಸಂದರ್ಭದಲ್ಲಿ ಆನ್ ಲೈನ್ ತರಗತಿಗಳಿಗೆ ಮಕ್ಕಳಿಗೆ ಟ್ಯಾಬ್, ಟಿ.ವಿ. ಅವಶ್ಯಕತೆ ಇತ್ತು. ಬಹಳ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಟಿ.ವಿ.ಖರೀದಿಸಲು ಸಾಧ್ಯವಾಗಿರಲಿಲ್ಲ. ನಮ್ಮ ಕ್ಷೇತ್ರದ ಜನರು ಒಂದು ಕುಟುಂಬದಂತೆ ಅವರ ನೋವು, ನಲಿವುಗಳಿಗೆ ನಾನು ಸದಾ ಮುಂದು. ಅದರಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಪ್ರತಿ ಕುಟುಂಬಕ್ಕೆ ಉಚಿತವಾಗಿ ಟಿ.ವಿ. ವಿತರಿಸಲಾಗುತ್ತಿದೆ ಎಂದರು.

ಮಕ್ಕಳ ಆನ್ ಲೈನ್ ಶಿಕ್ಷಣ ಮತ್ತು ಕುಟುಂಬದ ಮನೋರಂಜನೆ ವಿಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದರು.

ಕೋಮುವಾದಿ ಪಕ್ಷಗಳಿಂದ ದೂರ ಇರಿ. ಜಾತಿ, ಜಾತಿ ನಡುವೆ ದ್ವೇಷ ಬಿತ್ತುವ ಬಿ.ಜೆ.ಪಿ. ಪಕ್ಷದವರು ಕೊರೋನ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯರವರು 5 ವರ್ಷಗಳ ಕಾಲ ಜನಪ್ರಿಯ ಆಡಳಿತದಲ್ಲಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಮತ್ತು ಜನತೆಗೆ ನೀಡಿದ 165 ಭರವಸೆಗಳನ್ನು ಈಡೇರಿಸಿದರು ಎಂದರು.

ಅಬ್ದುಲ್ ವಾಜಿದ್ ಮಾತನಾಡಿ, ಕಾಂಗ್ರೆಸ್ ಪಕ್ಷ ಎಲ್ಲ ಧರ್ಮ, ಜಾತಿಯವರನ್ನು ಸರಿಸಮಾನವಾಗಿ ಅಭಿವೃದ್ದಿ ಪಥದತ್ತ ಕರೆದುಕೊಂಡು ಹೋಗುವ ಪಕ್ಷ. ಬಿಜೆಪಿ, ಜೆಡಿಎಸ್ ಪಕ್ಷದವರು ಕಳೆದ ಐದು ವರ್ಷಗಳಿಂದ ಹೆಬ್ಬಾಳ ಕ್ಷೇತ್ರದ ಜನರ ಕಡೆ ತಿರುಗಿ ನೋಡಿಲ್ಲ ಎಂದರು.

ಈಗ ಚುನಾವಣೆ ಬಂದಿರುವ ಕಾರಣದಿಂದ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕು. ಜಾತ್ಯತೀತ ಸಿದ್ಧಾಂತದ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸಹಕಾರ ಬೆಂಬಲವಿರಲಿ ಎಂದರು.

Leave a Reply