ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ,ಹೊಂಬೇಗೌಡನಗರ ವಾರ್ಡ್ ಲಕ್ಷ್ಮೀ ದೇವಸ್ಥಾನದ ಅವರಣದಲ್ಲಿ ಹೊಂಬೇಗೌಡನಗರ ವಾರ್ಡ್ ಬಿ.ಜೆ.ಪಿ.ಮತ್ತು ಸ್ಲಂ ಸಂಸ್ಥೆ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಸರಸ್ವತಿ ಪೂಜೆ ಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್ ಅವರು,ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಅವರು ಮತ್ತು ರಾಜ್ಯ ಪ್ರಕೋಷ್ಟದ ರಾಜು, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಅಮರೇಶ್(ಅಂಬರೀಶ್), ಬಿ.ಜೆ.ಪಿ.ವಾರ್ಡ್ ಅಧ್ಯಕ್ಷರಾದ ಅಜಿತ್, ದೇವಸ್ಥಾನದ ಮುಖ್ಯಸ್ಥರಾದ ಮುದ್ದುಕುಮಾರ್ ಅವರು ಮಕ್ಕಳ ಜೊತೆಯಲ್ಲಿ ಸರಸ್ವತಿ ದೇವರ ಪೂಜೆ ನೇರವೆರಿಸಿ, ನೋಟ್ ಪುಸ್ತಕಗಳನ್ನು ವಿತರಿಸಿದರು.
ಮೇದಿನಿ ಗರುಡಾಚಾರ್ ರವರು ಮಾತನಾಡಿ ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಬಗ್ಗೆ ಹೆಚ್ಚು ಗಮನಹರಿಸಬೇಕು, ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಭಾಗ್ಯವತಿ ಅಮರೇಶ್ ಅವರು ಮಾತನಾಡಿ ಶಿಕ್ಷಣ ಮಹತ್ವ ಮತ್ತು ಶಿಕ್ಷಣ ಪಡೆದು ವಿದ್ಯಾವಂತರಾದರೆ ಸಮಾಜದಲ್ಲಿ ಸಿಗುವ ಗೌರವ ಸ್ಥಾನಮಾನ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಮಂತರ ಮಕ್ಕಳು ಹೈಟೆಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ,ಉನ್ನತ ಸ್ಥಾನ ಗಳಿಸುತ್ತಾರೆ. ಬಡತನ,ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅವರಿಗೂ ಸಹ ಉತ್ತಮ ಶಿಕ್ಷಣ ಸಿಗಬೇಕು ಎಂದು ಹೊಂಬೇಗೌಡನಗರ ವಾರ್ಡ್ ಬಿ.ಜೆ.ಪಿ.ಮತ್ತು ಸ್ಲಂ ಸಂಸ್ಥೆ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಕಾಲೇಜು ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಉಚಿತವಾಗಿ 40ಲ್ಯಾಪ್ ಟಾಪ್ ವಿತರಿಸಲಾಗಿದೆ.
300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಭೇತಿ ನೀಡಲಾಗಿದೆ. ಮಕ್ಕಳು ಈ ದೇಶದ ಸಂಪತ್ತು ಎಲ್ಲರಿಗೂ ಶಿಕ್ಷಣದಲ್ಲಿ ಅವಕಾಶ ಸಿಗಬೇಕು ಎಂಬ ಆಶಯ ನಮ್ಮದು ಎಂದು ಹೇಳಿದರು.




