ದಾವಣಗೆರೆ: ಬಿಎಸ್‍ಎನ್‍ಎಲ್ ಈಗ ತನ್ನ ಬಳಕೆದಾರರಿಗೆ ಉಚಿತ 4ಜಿ ಸಿಮ್ ಅಪ್‍ಗ್ರೇಡ್‍ಗಳನ್ನು ನೀಡುತ್ತಿದೆ. ಬಿಎಸ್‍ಎನ್‍ಎಲ್ ಬಳಕೆದಾರರಾಗಿದ್ದಲ್ಲಿ ಈಗಿರುವ 2ಜಿ, 3ಜಿ ಬದಲಿಗೆ ವೇಗದ 4ಜಿ ನೆಟ್‍ವರ್ಕ್ ಅನ್ನು ಪಡೆಯಲು ಬಯಸಿದರೆ, ಮೂಲ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಯಾವುದೇ ಬಿಎಸ್‍ಎನ್‍ಎಲ್ ಗ್ರಾಹಕರ ಸೇವಾ ಕೇಂದ್ರ, ಪ್ರಾಂಚೈಸಿ, ಸಿಎಸ್‍ಸಿಗಳಲ್ಲಿ ಉಚಿತ 4ಜಿ ಸಿಮ್ ಪಡೆಯಬಹುದು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಿಎಸ್‍ಎನ್‍ಎಲ್ ಬಳಕೆದಾರರ ಗುರುತಿನ ಡಿಜಿಟಲ್ ಪರಿಶೀಲನೆ: ಬಿಎಸ್‍ಎನ್‍ಎಲ್‍ನ ಎಲ್ಲಾ ಗ್ರಾಹಕರು ಈ ಹಿಂದೆ ಕಾಗದದ ಅರ್ಜಿಯನ್ನು ಸಲ್ಲಿಸುವ ಮೂಲಕ ಮೊಬೈಲ್ ಸಿಮ್ ತೆಗೆದುಕೊಂಡ ಬಿಎಸ್‍ಎನ್‍ಎಲ್ ಎಲ್ಲಾ ಗ್ರಾಹಕರನ್ನು ಡಿಜಿಟಲ್ ಮೋಡ್‍ನಲ್ಲಿ ಮರುಪರಿಶೀಲಿಸಿಕೊಳ್ಳಬೇಕು. ಇದು ಅಸ್ತಿತ್ವದಲ್ಲಿರುವ ಬಳಕೆದಾರರ ಗುರುತನ್ನು ದೃಢೀಕರಿಸುವ ಪ್ರಕ್ರಿಯೆಯಾಗಿದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಯಾವುದೇ ಬಿಎಸ್‍ಎನ್‍ಎಲ್ ಗ್ರಾಹಕರ ಸೇವಾ ಕೇಂದ್ರ, ಬಿಎಸ್‍ಎನ್‍ಎಲ್ ಫ್ರಾಂಚೈಸಿ ಮತ್ತು ರಿಟೇಲರ್ ಅಂಗಡಿಯಲ್ಲಿ ಮರುಪರಿಶೀಲಿಸಬಹುದು.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಹಕರು ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಮೂಲ ಗುರುತಿನ ಪುರಾವೆಯನ್ನು ಹೊಂದಿರಬೇಕಾಗಿರುತ್ತದೆ. ಮರುಪರಿಶೀಲನೆಯ ಅಗತ್ಯವಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಗ್ರಾಹಕರು ಏಪ್ರಿಲ್ 30ರ ಮೊದಲು ಮರುಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಎಸ್‍ಎನ್‍ಎಲ್ ಮ್ಯಾನೇಜರ್ ತಿಳಿಸಿದ್ದಾರೆ.




