ನಕಲಿ ಖಾತೆಗಳ ಸೃಷ್ಟಿ ಮೂಲಕ ವಂಚನೆ: ಆರೋಪಿಗಳ ಬಂಧನ

2 years ago

#Fraud #creation #fakeaccounts #Arrest #accused

ಬೆಂಗಳೂರು: ಕೇರಳ ಮೂಲದ ವಂಚನೆಯ ಆರೋಪಿಗಳಾದ ಸಮೀರ್, ಮಹಮ್ಮದ್ ಹಸನ್, ಅಮೂಲ್ ಬಾಬು, ಮಹಮ್ಮದ್ ಇರ್ಫಾನ್, ತಂಝೀಲ್, ಮಂಜುನಾಥ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಹೇಳಿದ್ದಾರೆ.

ಈ ಮೂಲಕ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಆರು ವಂಚಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಸಾರ್ವಜನಿಕರ ಕೆವೈಸಿ ಪಡೆದು ಬಳಿಕ ಬ್ಯಾಂಕ್ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು. 5ರಿಂದ 10 ಸಾವಿರ ರೂ. ಕೊಟ್ಟು ಕೆವೈಸಿ ಪಡೆಯುತ್ತಿದ್ದರು. ಆಧಾರ್, ಪಾನ್ ಕಾರ್ಡ್, ಒಂದು ಸಹಿಗೆ 10 ಸಾವಿರ ರೂ. ದರ ನಿಗದಿಪಡಿಸಿದ್ದರು. ಪ್ರತಿ ದಾಖಲೆಗೆ ಹೊಸ ಸಿಮ್ ಬಳಸಿ ಖಾತೆ ತೆರೆಯುತ್ತಿದ್ದರು. ವಿದೇಶದಲ್ಲಿ ಕುಳಿತುಕೊಂಡೇ ನಗರದಲ್ಲಿ ಬೇನಾಮಿ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ನಕಲಿ ಖಾತೆ ಸೃಷ್ಟಿಸಿ ವಂಚಿಸುವ ವಿಚಾರ ತಿಳಿದ ಸಿಸಿಬಿ ಪೊಲೀಸರು, ಬೇನಾಮಿ ಖಾತೆ ಜಾಲ ಪತ್ತೆಹಚ್ಚವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ150 ಕ್ಕೂ ಹೆಚ್ಚು ಬೇನಾಮಿ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಿದರು.

ನಕಲಿ ಖಾತೆ ಅವ್ಯವಹಾರದ ಆರೋಪಿ ದುಬೈ ಕಿಂಗ್ ಪಿನ್ : ದುಬೈನಲ್ಲಿ ಕುಳಿತುಗೊಂಡಿರುವ ಕಿಂಗ್ ಪಿನ್, ಬಂಧಿತ ಆರೋಪಿಗಳಿಗೆ ಸೂಚನೆ ಕೊಡುತ್ತಿದ್ದ. ಈತನ ಸೂಚನೆ ಮೇರೆಗೆ ಆರೋಪಿಗಳು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ದುಬೈನಲ್ಲಿರುವ ವ್ಯಕ್ತಿಗೆ ಮಾಹಿತಿ ರವಾನಿಸುತ್ತಿದ್ದರು ಎಂದಿದ್ದಾರೆ.

ವಂಚನೆ ಕೃತ್ಯ ಎಸಗಲೆಂದೇ ಆರೋಪಿಗಳು ಮತ್ತಿಕೆರೆಯಲ್ಲಿ ಮನೆ ಮತ್ತು ಕಚೇರಿಯನ್ನು ಬಾಡಿಗೆಗೆ ಹಿಡಿದಿದ್ದರು. ಇತ್ತೀಚೆಗೆ ಮಂಜೇಶ್ ಎಂಬ ವ್ಯಕ್ತಿ ಸ್ನೇಹಿತನ ಜೊತೆಗೆ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆ ಮಂಜೇಶ್ ಸ್ನೇಹಿತ ಆಧಾರ್, ಪಾನ್ ಕಾರ್ಡ್ ನೀಡಿದ್ದಲ್ಲದೆ, 10,000 ರೂ. ಕೊಡುತ್ತಾರೆ ನಿನ್ನ ದಾಖಲೆ ಕೊಡುವಂತೆ ಮಂಜೇಶ್ ಗೆ ಹೇಳಿದ್ದ. ದಾಖಲೆಗಳ ರಾಶಿ, ಬ್ಯಾಂಕ್ ಪುಸ್ತಕ ನೋಡಿ ಮಂಜೇಶ್ ಗೆ ಅನುಮಾನ ಹುಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮಂಜೇಶ್ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಕೋಟ್ಯಂತರ ರೂ ವಹಿವಾಟು ನಡೆಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿದ್ದಾರೆ.

Leave a Reply