ಬಿಯರ್ ಕ್ಯಾಪ್ ಸುಳಿವು ಆಧರಿಸಿ ನಾಲ್ವರ ಬಂಧನ

3 years ago

#Four #arrested #based #beer #cap #tip

ಬೆಂಗಳೂರು: ಘಟನಾ ಸ್ಥಳದಲ್ಲಿ ದೊರೆತಿದ್ದ ಬಿಯರ್ ಬಾಟಲಿನ ಕ್ಯಾಪ್​ನ ಸುಳಿವು ಆಧರಿಸಿ ಹಲ್ಲೆ ಪ್ರಕರಣದ ನಾಲ್ವರನ್ನು ಆರೋಪಿಗಳನ್ನು ಬಂಧಿಸುವಲ್ಲಿ‌  ಚಂದ್ರಾಲೇಔಟ್ ಪೊಲೀಸರು  ಯಶಸ್ವಿಯಾಗಿದ್ದಾರೆ.

ಗೆಳೆಯರಾದ ಮಿಥುನ್ ರಾಜ್ ಹಾಗೂ ಮುತ್ತುರಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಪ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷಾ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಜುಲೈ 16ರಂದು ಆರೋಪಿಗಳು ಬಿಯಲ್ ಬಾಟಲ್​ನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಮಾರಣಾಂತಿಕ ಹಲ್ಲೆಯಿಂದ ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಅವರ ಹೇಳಿಕೆ ದಾಖಲಿಸಿಕೊಂಡರೂ ಆರೋಪಿಗಳ ಬಗ್ಗೆ ಸುಳಿವು ದೊರೆತಿರಲಿಲ್ಲ.

ಕೃತ್ಯವು ಸೆರೆಯಾದ ಸಿಸಿಟಿವಿಯಲ್ಲಿ ದೃಶ್ಯಾವಳಿ ಅಸ್ಪಷ್ಟವಾಗಿತ್ತು. ಈ ವೇಳೆ ಘಟನಾ ಸ್ಥಳದಲ್ಲಿ ಪರಿಶೀಲಿಸಿದ್ದ ಪೊಲೀಸರಿಗೆ ಬಿಯಲ್ ಬಾಟಲ್ ಕ್ಯಾಪ್ ಸಿಕ್ಕಿತ್ತು. ಕ್ಯಾಪ್ ಮೇಲೆ ಬ್ಯಾಚ್ ನಂಬರ್ ನಮೂದಿಸಿರುವುದನ್ನು ಗಮನಿಸಿದ ಪೊಲೀಸರು ಸುತ್ತಮುತ್ತಲಿನ ಬಾರ್​ಗಳಲ್ಲಿ ಶೋಧಿಸಿದ್ದಾರೆ.

ಸಮೀಪದಲ್ಲೇ ಬಾರ್​​ವೊಂದರಲ್ಲೇ ಮದ್ಯ ಖರೀದಿಸಿರುವುದು ಹಾಗೂ ಎರಡು ಬೈಕ್​ನಲ್ಲಿ ಹೋಗುತ್ತಿರುವ ಆರೋಪಿಗಳ ವಿಡಿಯೋ ತಾಳೆ ಹಾಕಿದಾಗ, ಎರಡು ಕಡೆಗಳಲ್ಲಿ ಬಂಧಿತ ಹಲ್ಲೆಕೋರರೇ ಹೋಗಿರುವುದನ್ನು ಖಚಿತಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಗಾಯಾಳುಗಳು ಹಾಗೂ ಆರೋಪಿಗಳಿಗೆ ಯಾವುದೇ ಪರಿಚಯವಿಲ್ಲ. ಅಲ್ಲದೆ ಯಾವುದೇ ದ್ವೇಷವಿರಲಿಲ್ಲ. ‌ಚಂದ್ರಾಲೇಔಟ್​ನ ಮಿಲೇನಿಯಂ ಬಾರ್ ಬಳಿ ಆಟೋದಲ್ಲಿ ಕುಳಿತು ಜೋರಾಗಿ ಸಾಂಗ್ ಹಾಕಿ ಮಾತನಾಡುತ್ತಿದ್ದರು. ಈ ವೇಳೆ ನಾಲ್ವರು ದುಷ್ಕರ್ಮಿಗಳು ಎರಡು ಬೈಕ್​ನಲ್ಲಿ ಬಂದು ಏಕಾಏಕಿ ಬಿಯರ್ ಬಾಟಲ್​ನಿಂದ ಹಲ್ಲೆಗೈದು ಪರಾರಿಯಾಗಿದ್ದರು.

Leave a Reply