ಬೆಂಗಳೂರು: ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ವ್ಹೀಲಿಂಗ್ ಗೆ ಕಡಿವಾಣ ಹಾಕಲು ಹೊಸ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.
ಜಂಟಿ ಪೊಲೀಸ್ ಆಯುಕ್ತ ಅನುಚೇತ್ ನೇತೃತ್ವದಲ್ಲಿ ರಚಿಸಿರುವ ಓರ್ವ ಎಸಿಪಿ, ಇನ್ಸ್ಪೆಕ್ಟರ್ ಸೇರಿ 10 ಮಂದಿಯ ಟಾಸ್ಕ್ಫೋರ್ಸ್ ನಾಲ್ಕೇ ದಿನದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಟಾಸ್ಕ್ಫೋರ್ಸ್ ಟೀಂ ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸಲಾಗಿದೆ.
ಬೆಂಗಳೂರಿನ ಪ್ರಮುಖ ರಸ್ತೆ, ಹೈವೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಹೀಲಿಂಗ್ ವಿಡಿಯೋಗಳು ವೈರಲ್ ಆಗುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. 10 ಜನರಿರುವ ತಂಡವನ್ನು ರಚಿಸಿ ಬೇಟೆಗೆ ಇಳಿದಿದ್ದಾರೆ.
ವೀಲ್ಹಿಂಗ್ ಮಾಡುವವರ ಮೇಲೆ ನಿಗಾ ಇಡಲು ಟಾಸ್ಕ್ ಪೋರ್ಸ್ ಟೀಂ ಕೆಲಸ ಮಾಡಲಿದೆ. ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಗಳ ಮೇಲೆ ಸದಾ ಕಣ್ಣಿಡಲಿದೆ. ವೀಲ್ಹಿಂಗ್ ಮಾಡಿ ಅಪ್ಲೋಡ್ ಮಾಡಿದ್ದೇ ತಡ ಟೀಂ ತನಿಖೆ ಚುರುಕು ಮಾಡಿ ಐಪಿ ವಿಳಾಸದ ಮೂಲಕ ವೀಲ್ಹಿಂಗ್ ಮಾಡುವವರನ್ನು ಕಂಡುಹಿಡಿಯಲಿದ್ದಾರೆ. ಬಳಿಕ ನೇರವಾಗಿ ಮನೆ ಬಾಗಿಲಿಗೆ ಬಂದು ಬೈಕ್ ಸಮೇತ ಬಂಧಿಸಲಿದ್ದಾರೆ.




