“ಸಜ್ಜನರು ರಾಜಕೀಯ ಪ್ರವೇಶಿಸಬೇಕು”
“ಭಾರತವು ವಿವಿಧ ಭಾಷೆ-ಧರ್ಮ-ಜಾತಿ ವೈವಿದ್ಯಗಳ ಒಕ್ಕೂಟ”
“ಸುಶಿಕ್ಷಿತರು/ಎಳೆಯರು/ ಜನ ಸಾಮಾನ್ಯರು ದೇಶದ ಚುಕ್ಕಾಣಿ ಹಿಡಿಯುವಂತಾಗಬೇಕು…”
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಇಂತಹ ಎಲ್ಲ ಸದಾಶಯಗಳನ್ನು ಒಂದು ಸಣ್ಣ ವೀಡಿಯೊ ಕ್ಲಿಪ್ ಮೂಲಕ, ತಮಿಳುನಾಡಿನ ವ್ಯಕ್ತಿಯೊಬ್ಬರು ಓದಿಶಾದಲ್ಲಿ ಬಂದು ಕುಳಿತು ಅಧಿಕಾರ ಚಲಾಯಿಸಲು ಹೊರಟಿದ್ದಾರೆಂಬ ನೆರೇಟಿವ್ ಕಟ್ಟುವ ಮೂಲಕ ಕೆಡವಲಾಯಿತು. ಸತತ ಆರನೇ ಬಾರಿಗೆ ಓದಿಶಾ ಮುಖ್ಯಮಂತ್ರಿ ಆಗಬೇಕಿದ್ದ ನವೀನ್ ಪಟ್ನಾಯಕ್ ಚುನಾವಣೆ ಸೋತಿದ್ದಾರೆ; ಆ ರಾಜ್ಯದ ಕಾರ್ಯಾಂಗದ ಭಾಗವಾಗಿದ್ದು, ಬಳಿಕ ವಿ ಆರ್ ಎಸ್ ತೆಗೆದುಕೊಂಡು, ಮುಖ್ಯಮಂತ್ರಿಗಳ ರಾಜಕೀಯ ಬೆನ್ನೆಲುಬಾಗಿ ನಿಂತ ಮತ್ತು ಈ ಬಾರಿ ಚುನಾವಣೆಯ ಹೋರಾಟದ ಮುಂಚೂಣಿಯಲ್ಲಿದ್ದ ವಿ. ಕೆ. ಪಾಂಡಿಯನ್(50) ಇಂದು ಸಾರ್ವಜನಿಕವಾಗಿ ಕ್ಷಮೆ ಕೇಳಿ, ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರ ಪತ್ನಿ, ಓದಿಶಾ ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಸುಜಾತಾ ಕಾರ್ತಿಕೇಯನ್ ಆರು ತಿಂಗಳ ರಜೆಯ ಮೇಲೆ ತೆರಳಿದ್ದಾರೆ.
2000ನೇ ಬ್ಯಾಚಿನ IAS ಅಧಿಕಾರಿ ಪಾಂಡಿಯನ್, 20 ವರ್ಷಗಳ ಕಾಲ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿ ಆಗಿದ್ದರು ಮತ್ತು 2023ರಲ್ಲಿ ಸರ್ಕಾರಿ ಹುದ್ದೆ ತೊರೆದು, ಬಿಜು ಜನತಾದಳ ಸೇರಿದ್ದರು. ಅವರನ್ನು ಸರ್ಕಾರದ 5T (Teamwork, Transparency, Technology, Time, and Transformation) ವಿಷನ್‌ಗೆ ಅಧ್ಯಕ್ಷರನ್ನಾಗಿ ನೇಮಿಸಿ, ಕ್ಯಾಬಿನೆಟ್ ದರ್ಜೆ ನೀಡಲಾಗಿತ್ತು. ಆಡಳಿತಕ್ಕೆ ಅಕೌಂಟೆಬಿಲಿಟಿ ತರುವ Mo Sarkar ಯೋಜನೆಯ ಮುಖ್ಯಸ್ಥರಾಗಿ, ಕಾರ್ಯಾಂಗದ ಕಾರ್ಯಾಚರಣೆಯ ಬಗ್ಗೆ ಜನಸಾಮಾನ್ಯರ ಫೀಡ್‌ಬ್ಯಾಕ್ ಪಡೆಯುವುದು, ಬೃಹತ್ ಯೋಜನೆಗಳ (ಉದಾ: ಶ್ರೀ ಜಗನ್ನಾಥ ಹೆರಿಟೇಜ್ ಕಾರಿಡಾರ್) ಮೇಲುಸ್ತುವಾರಿ ಅವರ ಜವಾಬ್ದಾರಿಗಳಲ್ಲಿ ಸೇರಿತ್ತು.
ಈ ಬಾರಿ ಚುನಾವಣೆಗಳ ವೇಳೆ ಪಕ್ಷದ ಉಸ್ತುವಾರಿಯ ಮುಂಚೂಣಿಯಲ್ಲಿದ್ದ ಅವರನ್ನು ಅವರ ತಮಿಳು ಮೂಲದ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದಲ್ಲದೇ, ನವೀನ್ ಪಟ್ನಾಯಕ್ ಅವರ ಆರೋಗ್ಯದ ಬಗ್ಗೆ-ಅವರ ಉಸ್ತುವಾರಿ ಸಂಪೂರ್ಣವಾಗಿ ಪಾಂಡಿಯನ್ ಅವರ ಕೈಯಲ್ಲಿರುವ ಬಗ್ಗೆ (ಒಂದು ಪುಟ್ಟ ವೀಡಿಯೋ ವೈರಲ್ ಮಾಡಿ) ಟ್ರೋಲ್ ಮಾಡಲಾಗಿತ್ತು.
ಓರಿಸ್ಸಾದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ (ಮಯೂರ್‌ಭಂಜ್) ಸ್ವತಃ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ನವೀನ್ ಬಾಬು ಆರೋಗ್ಯದ ಬಗ್ಗೆ ಪ್ರಸ್ತಾಪಿಸಿ, ಓದಿಶಾದಲ್ಲಿ ಬಿಜೆಪಿ ಸರ್ಕಾರ ಬಂದರೆ, ಪಟ್ನಾಯಕ್ ಅವರ ಆರೋಗ್ಯದ ಬಗ್ಗೆ ಇರುವ ಕಾನ್ಸ್ಪಿರೆಸಿಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಇಂತಹ ಮಾತುಗಳು ಚುನಾವಣೆಯ ಮೇಲೆ ಪ್ರಭಾವ ಬೀರಿದವು. ಸ್ವತಃ ನವೀನ್ ಪಟ್ನಾಯಕ್ ತಾನು ಆರೋಗ್ಯವಾಗಿದ್ದೇನೆ ಎಂದರೂ ಪ್ರಯೋಜನ ಆಗಲಿಲ್ಲ!
ಈಗ ಅಲ್ಲಿನ ವಿಧಾನಸಭೆಯ147 ಸ್ಥಾನಗಳಲ್ಲಿ, ಬಿಜೆಪಿ 78ನ್ನು ಗೆದ್ದು ಸರ್ಕಾರ ರಚಿಸುವ ಹಂತದಲ್ಲಿದೆ. ಬಿಜು ಜನತಾದಳಕ್ಕೆ 51, ಕಾಂಗ್ರೆಸ್‌ಗೆ 14 ಸ್ಥಾನಗಳು ದೊರೆತಿವೆ.
24 ವರ್ಷಗಳ ನವೀನ್ ಪಟ್ನಾಯಕ್ ಸರ್ಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ, ಪಕ್ಷದವರ ಸಿಟ್ಟು ಪಾಂಡಿಯನ್ ಅವರ ಕಡೆ ತಿರುಗಿದೆ. ಪಾಂಡಿಯನ್ ಈಗ ರಾಜಕೀಯದಿಂದ ನಿವೃತ್ತಿ ಪ್ರಕಟಿಸಿದ್ದಾರೆ. ಇದು ದುರದೃಷ್ಟಕರ ಎಂದು ನವೀನ್ ಪಟ್ನಾಯಕ್ ಹೇಳಿಕೆ ನೀಡಿದ್ದಾರೆ.
– ರಾಜಾರಾಮ್ ತಲ್ಲೂರ್, ಹಿರಿಯ ಪತ್ರಕರ್ತರು



