ಪುಟ್ಬಾಲ್ ಪಂದ್ಯದಲ್ಲಿ ಘರ್ಷಣೆ: 100 ಕ್ಕೂ ಅಧಿಕ ಸಾವು

4 years ago

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹಿಂಸಾಚಾರ ನಡೆದು, ಮಕ್ಕಳು, ಪೊಲೀಸರು ಸೇರಿದಂತೆ ಸುಮಾರು 100 ಕ್ಕೂ ಅಧಿಕ ನಾಗರಿಕರು ಸಾವಿಗೀಡಾಗಿ, ನೂರಾರು ಜನ ಗಂಭಿರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಿನ್ನೆ ರಾತ್ರಿ ಇಂಡೋನೇಷ್ಯಾ ಪೂರ್ವ ಜಾವಾ ಪ್ರಾಂತ್ಯದ ಮೈದಾನದಲ್ಲಿ ಪುಟ್ಬಾಲ್ ಪಂದ್ಯಾವಳಿ ನಡೆದಿತ್ತು. ನಿನ್ನೆಯ ಪಂದ್ಯದಲ್ಲಿ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಮಣಿಸಿತು. ಇದರಿಂದ ಆಕ್ರೋಶಗೊಂಡ ಅರೆಮಾ ಫುಟ್‌ಬಾಲ್‌ ಕ್ಲಬ್‌ ತಂಡದ ಅಭಿಮಾನಿಗಳು ಕ್ರೀಡಾಂಗಣದ ಒಳಗೆ ನುಗ್ಗಿ ದಾಂಧಲೆಗಿಳಿದರು.

ಅಂಧಾಭಿಮಾನಿಗಳನ್ನ ನಿಯಂತ್ರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ಸಿಡಿಸಿದರು. ಈ ವೇಳೆ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 100ಕ್ಕೂ ಹೆಚ್ಚು ಜನ ಬಲಿಯಾದರು.

Leave a Reply