ಶಿವನಗರ ವಾರ್ಡ್-107ರಲ್ಲಿ ಆಹಾರ ಪ್ಯಾಕೆಟ್ ವಿತರಣೆ

5 years ago

ಬೆಂಗಳೂರು: ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ಕಳೆದ 30 ದಿನಗಳಿಂದ ಶಿವನಗರ ವಾರ್ಡ್ ನಲ್ಲಿ  ಪ್ರತಿ ದಿನ ಒಂದು ಬಗೆಯ ಆಹಾರಗಳಾದ ಪಲಾವ್, ಪುಳಿಯೊಗರೆ ಮತ್ತು ತರಕಾರಿ ಬಾತ್, ಪುದೀನ ಬಾತ್ ಮತ್ತು ಟೊಮೊಟೋ ಬಾತ್ ವಿತರಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ವಿಜಯಕುಮಾರ್ ಹೇಳಿದರು.

ಶಿವನಗರ ವಾರ್ಡ್-107ರಲ್ಲಿ ಕೊವಿಡ್ ಸಾಂಕ್ರಮಿಕ ಕಾರಣದಿಂದ ಬಡವರು, ಕೂಲಿಕಾರ್ಮಿಕರು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಮಕ್ಕಳಿಗೆ ಹಾಗೂ ಪೌರ ಕಾರ್ಮಿಕರಿಗೆ ಕಳೆದ 30ದಿನಗಳಿಂದ ಪೌಷ್ಟಿಕಾಂಶವುಳ್ಳ ಆಹಾರ ಪ್ಯಾಕೇಟ್ ಗಳನ್ನು ವಿತರಿಸಲಾಗುತ್ತಿದೆ. ಇಂದು ಮಹಾಗಣಪತಿನಗರ, ಶಿವನಗರ ವಿವಿಧ ಬಡಾವಣೆಗಳಲ್ಲಿ ಆಹಾರ ಪ್ಯಾಕೇಟ್ ಗಳನ್ನು ವಿತರಿಸಿ ಮಾತಾಡಿದ ಅವರು, ಲಾಕ್ ಡೌನ್ ಸಡಿಲಿಕೆಯಾದರು ಕೂಲಿ ಕಾರ್ಮಿಕರು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಸಮರ್ಪಕವಾಗಿ ಆದಾಯವಿಲ್ಲ. ಆದ್ದರಿಂದ ಅವರ ಕುಟುಂಬಕ್ಕೆ  ಇನ್ನೂ  14 ದಿನಗಳ ಕಾಲ ಆಹಾರ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತದೆ. ಹಸಿವಿನಿಂದ ಯಾರೂ ಬಳಲಬಾರದು ಎಂಬ ಉದ್ದೇಶ ನಮ್ಮದು ಎಂದರು.

ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply