ಎಸ್ ಡಿ ಪಿ ಐ ಆಗ್ರಹ
ದಾವಣಗೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಜಾದ್ ನಗರ 9 ಮತ್ತು 12ನೇ ವಾರ್ಡ್ ಬ್ರಾಂಚ್ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಜನರ ಸಂಕಷ್ಟ ಪರಿಹರಿಸುವಂತೆ ಮನವಿ ಸಲ್ಲಿಸಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 12ನೇ ವಾರ್ಡ್ ಆಜಾದ್ ನಗರ ಮುಖ್ಯ ರಸ್ತೆಯಲ್ಲಿ 2021-22 ಸಾಲಿನ 15ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಗ್ರಾಂಟ್ ನಲ್ಲಿ ಅಂದಾಜು 9 ಲಕ್ಷ ಹಣವನ್ನು ವಿನಿಯೋಗಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ ಇದು ಕಳೆದ 1 ವರ್ಷದಿಂದ ಕೆಟ್ಟಿರುವುದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ಇದನ್ನೇ ನಂಬಿಕೊಂಡಿದ್ದ ಸ್ಥಳೀಯರು ನಗರದ ಬೇರೆ ಬೇರೆ ಕಡೆ ಹೋಗಿ ಕುಡಿಯುವ ನೀರು ತರುವ ದುಸ್ಥಿತಿ ಎದುರಾಗಿದೆ ಎಂದು ಆಯುಕ್ತರಿಗೆ ಎಸ್ ಡಿ ಪಿ ಐ ಸದಸ್ಯರು ವಿವರಿಸಿದರು.
9 ಮತ್ತು 12ನೇ ವಾರ್ಡಿನ ಕಾರ್ಪೊರೇಟರ್ ಗಳು ತಮಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಲಕ್ಷ ಲಕ್ಷ ಸಾರ್ವಜನಿಕರ ತೆರಿಗೆ ಹಣವನ್ನು ವಿನಿಯೋಗಿಸಿ ನಿರ್ಮಿಸಿದ ಈ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಮತ್ತು ಜನರ ಸಂಕಷ್ಟದ ಬಗೆಗೆ ಮಾಹಿತಿಯೊಂದಿಗೆ ಆಯುಕ್ತರಿಗೆ ವಿವರಿಸಿ, ಶೀಘ್ರವಾಗಿ ಮುತುವರ್ಜಿ ವಹಿಸಿ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಆಜಾದ್ ನಗರ 9 ಮತ್ತು 12ನೇ ವಾರ್ಡಿನ ಬ್ರಾಂಚ್ ನ ಪದಾಧಿಕಾರಿಗಳು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್. ತಾಹೀರ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಏಜಾಜ್ ಅಹಮದ್ ಮೊದಲಾದವರು ಹಾಜರಿದ್ದರು.



