ಸಂತ್ರಸ್ತರ ಕುಟುಂಬಕ್ಕೆ 15 ಲಕ್ಷ ನೆರವಿಗೆ ಒತ್ತಾಯ

4 years ago

ಮಂಡ್ಯ: ಪ.ಜಾ ಅಲೆಮಾರಿ ಕೊರಮ (ಕುಳುವ) ಸಮಾಜದ ಒಂದೇ ಕುಟುಂಬದ‌ ಇಬ್ಬರು ಅಪ್ರಾಪ್ತ ಬಾಲಕಿಯರು ಹಾಗೂ ಇಬ್ಬರು ಮಹಿಳೆಯ ಸೇರಿ 5 ಜನ ಅಫಘಾತದಿಂದ ಮೃತಪಟ್ಟಿದ್ದು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಲಾ 15 ಲಕ್ಷ ಪರಿಹಾರ ಹಾಗೂ ಬದುಕುಳಿದ ವಿಧವೆ ಮಹಿಳೆಯರಿಗೆ ಉದ್ಯೋಗ ಒದಗಿಸುವಂತೆ ಅಖಿಲ ಕರ್ನಾಟಕ ಕುಳುವ ಮಹಾಸಂಘ ಸರ್ಕಾರದಲ್ಲಿ ಮನವಿ ಮಾಡಿದೆ.

ಮಂಡ್ಯ ಮಳವಳ್ಳಿ ತಾಲ್ಲೂಕು ದಡದಪುರ ಗ್ರಾಮದ ಬುಟ್ಟಿ ಹೆಣೆಯುವ ಮಹಿಳೆ ಮುತ್ತಮ್ಮ ಇತ್ತೀಚಿಗೆ ರಾಜ್ಯದ ಪ.ಜಾ ಅಲೆಮಾರಿ ಕೊರಮ (ಕುಳುವ) ಸಮಾಜದ ಮಂಡ್ಯ ಜಿಲ್ಲೆಯ ಮೊಟ್ಟಮೊದಲ ಏಕೈಕ ಗ್ರಾಮ‌ ಪಂಚಾಯತ್ ಅಧ್ಯಕ್ಷೆಯಾಗಿ ಜನರ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಲಿ ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದು ಶುಕ್ರವಾರ ಪಂಚಾಯಿತಿಯಿಂದ ಕರ್ತವ್ಯ ಮುಗಿಸಿ ಕುಟುಂಬದೊಂದಿಗೆ ಆಟೋದಲ್ಲಿ ದೇವಸ್ಥಾನಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಮದ್ದೂರು – ಮಳವಳ್ಳಿ ರಾಷ್ಟ್ರೀಯ ಹೆದ್ದಾರಿಯ ನೆಲಮಾಕನಹಳ್ಳಿ ಗೇಟ್ ಬಳಿ ಟಿಪ್ಪರ್ ಮತ್ತು ಪ್ಯಾಸೆಂಜರ್ ಆಟೋ ನಡುವೆ ಭೀಕರವಾದ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತಪಟ್ಟ ಹೃದವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಜನರನ್ನು ಬೇಚ್ಚಿಬಿಳಿಸಿತ್ತು ಎಂದು ಸಂಘ ಹೇಳಿದೆ.

ಮುತ್ತಮ್ಮ ಪೂಜೆ ಮುಗಿಸಿ ಮತ್ತೊಂದು ಗ್ರಾಮಸಭೆಗೆ ಬರುವುದಾಗಿ ಸಿಬ್ಬಂದಿಗೆ ಹೇಳಿ ಹೊರಟು ತನ್ನ 5 ಜನ ಕಟುಂಬದ ಸದಸ್ಯರೊಂದಿಗೆ ಸ್ಮಶಾನ ಸೇರಿದ್ದರು. ಈ ಶೋಷಿತ ಪ.ಜಾತಿಯ ಅಲೆಮಾರಿ ಕೊರಮ ಸಮಾಜದ ದಿಟ್ಟ ಮಹಿಳೆ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ತಾಲ್ಲೂಕಿನಾದ್ಯಾಂತ ಜನಸೇವೆ ನಿರ್ವ್ವಹಿಸಿ ಜನಮನ್ನಣೆ ಗಳಿಸಿದ ಅಲೆಮಾರಿ ಸಮಾಜದ ಮಹಿಳೆ ಮುತ್ತಮ್ಮ ಮತ್ತು ಅವರ ಕುಟುಂಬದವರ ಅಗಲಿಕೆಯ ಸುದ್ದಿ ಕೇಳಿ ರಾಜ್ಯಾದ್ಯಾಂತ ಅಲೆಮಾರಿ ಬುಡಕಟ್ಟು ಸಮಾಜದಲ್ಲಿ ಆಘಾತ ಉಂಟಾಗಿದೆ ಎಂದು ಹೇಳಿದೆ.

ಈ ಭೀಕರ ಅಪಘಾತದಲ್ಲಿ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ (೪೫), ಅವರ ಮಗಳು ಬಸಮ್ಮಣಿ (೩೦), ಮಗ ವೆಂಕಟೇಶ (೨೫), ಬಸಮ್ಮಣಿ ಅವರ ಮಕ್ಕಳಾದ ಎಂಟು ವರ್ಷ‍್ಷದ ಚಾಮುಂಡೇಶ್ವರಿ, ಎರಡು ವರ್ಷ‍್ಷದ ಗಂಡು ಮಗು ಮೃತಪಟ್ಟಿದ್ದಾರೆ ಎಂದು ಸಂಘ ಮಾಹಿತಿಯನ್ನು ಹಂಚಿಕೊಂಡಿದೆ.

ಮೃತರ ಸಂಬಂಧಿಗಳಾದ ವಿಧವೆ ಮಹಿಳೆ ಮತ್ತು ವಿದುರ ಹಾಗೂ 4 ಅಪ್ರಾಪ್ತ ಗಂಡು ಮತ್ತು ಹೆಣ್ಣು ಮಕ್ಕಳು ತ್ರೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆಲೆಯೇ ಇಲ್ಲದ ಅಲೆಮಾರಿ ತಬ್ಬಲಿ ಕುಟುಂಬದ ನೆರವಿಗೆ ಮಾನವೀಯ ಅಂತಃಕರಣದಿಂದ ಸರ್ಕಾರ ಮತ್ತು ಮುಖ್ಯಮಂತ್ರಿಗಳು ನಿಲ್ಲಬೇಕೆಂದು ರಾಜ್ಯದ 20 ಲಕ್ಷ ಅಲೆಮಾರಿ ಕೊರಮ-ಕೊರಚ-ಕೊರವ (ಕುಳುವ) ಸಮುದಾಯಗಳ ಪರವಾಗಿ ಈ ಕೆಳಕಂಡ ಬೇಡಿಕೆಗಾಗಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ಒತ್ತಾಯಪೂರ್ವಕ ಮನವಿ ಸಲ್ಲಿಸಿದೆ.

 ಪ್ರಮುಖ ಬೇಡಿಕೆಗಳು:

1) ಅಪಘಾತದಿಂದ ಮೃತಪಟ್ಟ ಸದಸ್ಯರಿಗೆ ತಲಾ 15 ಲಕ್ಷ ವಿಶೇಷ ಪರಿಹಾರವನ್ನು ಕುಟುಂಬದ ಸದಸ್ಯರಿಗೆ ಒದಗಿಸಬೇಕು.

2) ಬದುಕುಳಿದ ಮೃತರ ಏಕೈಕ ವಾರಸುದಾರ ವಿಧವೆಗೆ ಉದ್ಯೋಗ ಭದ್ರತೆ ಒದಗಿಸಬೇಕು. ನಿರ್ಗತಿಕ ಅಲೆಮಾರಿ ಕುಟುಂಬಕ್ಕೆ ವಿಧುರನಿಗೆ ಜೀವನೋಪಾಯಕ್ಕಾಗಿ ದಡದಪುರ ಗ್ರಾಮದಲ್ಲಿ 5 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಂತೆ ಮಳವಳ್ಳಿ ತಾಲ್ಲೂಕು ಆಡಳಿತಕ್ಕೆ ಆದೇಶ ಹೊರಡಿಸಬೇಕು.

3) ಅಪಘಾತದಿಂದ ಮೃತಪಟ್ಟ ವ್ಯಕ್ತಿಗಳ ಅಪ್ರಾಪ್ತ ಮಗುವಿನ ಸಂಪೂರ್ಣ‍್ಣ ಶಿಕ್ಷಣದ ವೆಚ್ಚವನ್ನು ಭರಿಸಬೇಕು.

Leave a Reply