ಬೆಂಗಳೂರು: 2023ನೇ ಸಾಲಿನ ಕಾವ್ಯ ಶಿವರಾತ್ರಿ ಕಾರ್ಯಕ್ರಮ ದಿನಾಂಕ 18/02/2023ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಎನ್.ಆರ್.ಕಾಲೋನಿಯಲ್ಲಿರುವ ಡಾ.ಸಿ.ಅಶ್ವತ್ಥ್ ಸಭಾಭವನದಲ್ಲಿ ನಡೆಯಲಿದೆ. ಪ್ರೊ.ಕಿ.ರಂ.ನಾಗರಾಜ ಅವರು ಆರಂಭಿಸಿದ್ದ “ಕಾವ್ಯ ಶಿವರಾತ್ರಿ ಕಾರ್ಯಕ್ರಮವನ್ನು ಈ ಬಾರಿ ಕಾವ್ಯ ಮಂಡಲ ಬೆಂಗಳೂರು ಮತ್ತು ಜನಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗೊಂದಿಗೆ ಆಜೋಜಿಸಲಾಗಿದೆ. ಕಾರ್ಯಕ್ರಮ ಸಂಜೆ ಆರಕ್ಕೆ ಆರಂಭವಾಗಿ ಮರುದಿನ ಬೆಳಿಗ್ಗೆ 6 ಗಂಟೆಯವರೆಗೂ ನಡೆಯಲಿದೆ.

ಕಾವ್ಯ ಶಿವರಾತ್ರಿ ಕುರಿತು
ಪ್ರೊ. ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು.

ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರತಿ ಶಿವರಾತ್ರಿಯಂದು ಜನಪದ ಕಾವ್ಯಗಳನ್ನು ಮೊಳಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಈ ಜನಪದ ಕೈಂಕರ್ಯವನ್ನು ಮುಂದುವರೆಸುವ ಸಲುವಾಗಿ ಜನಸಂಸ್ಕೃತಿ ಪ್ರತಿಷ್ಠಾನ ಮತ್ತು ಕಾವ್ಯಮಂಡಲ ಇದೇ ಫೆಬ್ರವರಿ 18, 2023ರಂದು ಸಂಜೆ 6 ಗಂಟೆಗೆ ಕಾವ್ಯ ಶಿವರಾತ್ರಿ ಮತ್ತು ಕಿ.ರಂ. ಕಾವ್ಯ ಶಿವರಾತ್ರಿ ಪುರಸ್ಕಾರವನ್ನು ಆಯೋಜಿಸಲಾಗಿದೆ. ಈ ಬಾರಿ ಕೆಬ್ಬೆಪುರ ಸಿದ್ದರಾಜು ಮತ್ತು ತಂಡಕ್ಕೆ ಕಾವ್ಯ ಶಿವರಾತ್ರಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಜೊತೆಗೆ ಮಂಟೇಸ್ವಾಮಿ ಮಹಾಕಾವ್ಯ ಮತ್ತು ಮಲೆಮಹಾದೇಶ್ವರ ಮಹಾಕಾವ್ಯಗಳನ್ನು ಜನಪದ ವೃತ್ತಿ ಗಾಯಕರು ಪ್ರಸ್ತುತಪಡಿಸಲಿದ್ದಾರೆ.

ಕಾವ್ಯಶಿವರಾತ್ರಿ
ಕಾವ್ಯಮಂಡಲ, ಬೆಂಗಳೂರು ಜನಸಂಸ್ಕೃತಿ, ಬೆಂಗಳೂರು
ಸಹಯೋಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಗಾಯನ: ಸಿ.ಎಂ.ನರಸಿಂಹಮೂರ್ತಿ ಮತ್ತು ಸಂಗಡಿಗರು
ಪ್ರಸ್ತಾವನೆ: ಡಾ.ಪ್ರದೀಪ್ ಮಾಲ್ಗುಡಿ, ಅಧ್ಯಕ್ಷ, ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು
ಉದ್ಘಾಟನೆ: ಡಾ.ಎಂ.ಎಸ್.ಮೂರ್ತಿ, ಅಂತರರಾಷ್ಟ್ರೀಯ ಕಲಾವಿದರು
ಪ್ರಶಸ್ತಿ ಪ್ರದಾನ: ಅತಿಥಿಗಳಿಂದ
ಪ್ರಶಸ್ತಿ ಪುರಸ್ಕೃತರು: ಕೆಬ್ಬೆಪುರ ಸಿದ್ದರಾಜು, ನೀಲಿ ಸಿದ್ದು, ತಾಳ ರಾಚಯ್ಯ, ಜಾಲರಿ ಸಿದ್ದಯ್ಯ, ಡಕ್ಕೆ ಲಕ್ಷ್ಮಣ ದಮ್ಮಡಿ

ಮುಖ್ಯ ಅತಿಥಿಗಳು:
ಡಾ.ಬಿ.ಗಂಗಾಧರ್, ನಿರ್ದೇಶಕರು, ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ
ಕೆ.ಎನ್.ಸಹನ, ಉಪನ್ಯಾಸಕರು, ವಿಜಯ ಕಾಲೇಜು, ಬಸವನಗುಡಿ, ಬೆಂಗಳೂರು
ಡಾ.ಕೆ.ಎನ್.ಕವನ, ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ, ಬೆಂಗಳೂರು
ಕೆ.ಎನ್.ಚಂದನ, ಸಂಶೋಧಕರು, ಬೆಂಗಳೂರು
ಡಾ.ಎಚ್.ಆರ್.ಸ್ವಾಮಿ, ನಿವೃತ್ತ ಪ್ರಾಂಶುಪಾಲರು, ಬೆಂಗಳೂರು
ಅಧ್ಯಕ್ಷತೆ: ಡಾ.ಎಲ್.ಹನುಮಂತಯ್ಯ, ರಾಜ್ಯಸಭೆ ಉಪಸಭಾಪತಿ, ನವದೆಹಲಿ
ನಿರ್ವಹಣೆ: ಡಾ.ರುದ್ರೇಶ್ ಅದರಂಗಿ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು
ರಾತ್ರಿ ೮:೩೦ಕ್ಕೆ ಕವಿಗೋಷ್ಠಿ:
ಮುರಳಿ ಮೋಹನ್ ಕಾಟಿ, ಬೆಂಗಳೂರು
ಮಂಜುನಾರಾಯಣ್, ಬೆಂಗಳೂರು
ಸಂಘಮಿತ್ರ ನಾಗರಘಟ್ಟ, ಮೈಸೂರು
ಶಂಕರ್ ಸಿಹಿಮೊಗೆ, ಬೆಂಗಳೂರು
ಡಾ. ಷರೀಫ ಹಸಮಕಲ್, ಸಿಂಧನೂರು
ವಿಕಾಸ್ ಆರ್ ಮೌರ್ಯ, ಬೆಂಗಳೂರು
ಸುಂದರ ಕಲಿವೀರ, ಚಾಮರಾಜನಗರ
ಸೂರ್ಯಕೀರ್ತಿ, ಬೆಂಗಳೂರು
ಅಧ್ಯಕ್ಷತೆ: ಡಾ.ಹುಲಿಕುಂಟೆ ಮೂರ್ತಿ, ಬೆಂಗಳೂರು
ಊಟದ ಬಿಡುವು: ರಾತ್ರಿ ೯:೩೦ – ೧೦
ರಾತ್ರಿ ೧೦ರಿಂದ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಮಹಾಕಾವ್ಯಗಳ ಗಾಯನ
ಪ್ರಸ್ತುತಿ: ಕೆಬ್ಬೆಪುರ ಸಿದ್ದರಾಜು ಮತ್ತು ತಂಡ
ದಿನಾಂಕ: ೧೮/೦೨/೨೦೨೩ ಸಂಜೆ ೬ರಿಂದ ೧೯/೦೨/೨೦೨೩ರ ಬೆಳಿಗ್ಗೆ ೬ರವರೆಗೆ
ಸ್ಥಳ: ಸಿ.ಅಶ್ವತ್ಥ್ ಕಲಾಭವನ, ಎನ್.ಆರ್.ಕಾಲೋನಿ, ಬೆಂಗಳೂರು



