ತುಮಕೂರು: ಕುಣಿಗಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, 6 ಚಿನ್ನದ ಪದಕಗಳ ವಿಜೇತ ಡಾ.ಲಕ್ಷ್ಮಿನರಸಮ್ಮ ಅವರಿಗೆ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದ ವತಿಯಿಂದ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಉದ್ದಾನೇಶ್ವರ ಸಮುದಾಯ ಭವನದಲ್ಲಿ ನಡೆದ ಮೊದಲ ಗುರುಕುಲ ಕಲಾ ಸಮ್ಮೇಳನದಲ್ಲಿ “ಗುರುಕುಲ ಕಲಾ ಕೌಸ್ತುಭ ಹಾಗೂ ಗುರುಕುಲ ಸಾಹಿತ್ಯ ಶರಭ” ಎಂಬ ಎರಡು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ್ಯೆ ಬಾ.ಹ.ರಮಾಕುಮಾರಿ, ಗುರುಕುಲ ಪ್ರತಿಷ್ಠಾನದ ಸಂಸ್ಥಾಪಕರು ಹಾಗೂ ಗೌರವ ಅಧ್ಯಕ್ಷ ಕವಿತಾಕೃಷ್ಣ, ಗುರುಕುಲ ಕಲಾ ಪ್ರತಿಷ್ಠಾನ ಅಧ್ಯಕ್ಷ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್, ಗೌರವ ಕಾರ್ಯದರ್ಶಿ ಶಿವರಾಜ್ ಗೌಡ, ಗುರುಕುಲ ಗೌರವ ಸಲಹೆಗಾರ ನಿಡಸಾಲೆ ಪುಟ್ಟಸ್ವಾಮಯ್ಯ, ಮಹಿಳಾ ಪ್ರತಿನಿಧಿ ಡಾ.ಪುಣ್ಯವತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಪ್ಪಾಜಿಗೌಡ ಮೊದಲಾದವರು ಹಾಜತರಿದ್ದರು.



