ಡಾ.ರಾಜ್ ಕುಮಾರ್ ನೇತ್ರದಾನದ ಮಹತ್ವ, ಅರಿವು ಮೂಡಿಸಿದ ಮಹಾನ್ ವ್ಯಕ್ತಿ: ಎಸ್.ನಾರಾಯಣ್

4 years ago

ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಮನುಷ್ಯ ಸತ್ತ ಮೇಲು ಜಗತ್ತನ್ನು ನೋಡಬಹುದು ನೇತ್ರದಾನದಿಂದ ಮಾತ್ರ ಸಾಧ್ಯ

ಬೆಂಗಳೂರು: ನೇತ್ರದಾನ ಮಹಾದಾನ. ಜನರಿಗೆ ನೇತ್ರದಾನದ ಬಗ್ಗೆ ಅರಿವು ಮೂಡಿಸಿದವರು ಮೇರುನಟ ಡಾ.ರಾಜ್ ಕುಮಾರ್ ಮತ್ತು ನೇತ್ರತಜ್ಞ ವೈದ್ಯ ಎಂ.ಸಿ.ಮೋದಿಯವರು. ಈ ಇಬ್ಬರು ಮಹನೀಯರು ನೇತ್ರದಾನದ ಮಹತ್ವ ಬಗ್ಗೆ ಅರಿವು ಮೂಡಿಸಿದರು ಎಂದು ನಿರ್ದೇಶಕ ಎಸ್.ನಾರಾಯಣ್ ಹೇಳಿದರು.

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ, ಕಮಲನಗರ ಇಂದಿರಾ ಹೆಲ್ತ್ ಕೇರ್ ನಲ್ಲಿ ದಿ.ಮಹದೇವಪ್ಪ ಪ್ರತಿಷ್ಠಾನ ಮತ್ತು ಅಕ್ಷಯ ಟ್ರಸ್ಟ್, ವಿಜಯ ನೇತ್ರಾಲಯ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಪದ್ಮಭೂಷಣ, ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತಾಡಿದ ಅವರು,  ವಿಶ್ವದಲ್ಲಿ ಪ್ರಥಮವಾಗಿ ನೇತ್ರದಾನ ಮಾಡಿದವರು ಬೇಡರ ಕಣಪ್ಪನವರು. ಡಾ.ರಾಜ್ ಕುಮಾರ್ ರವರು ನಟಿಸಿದ ಪ್ರಥಮ ಚಲನಚಿತ್ರವು ಬೇಡರ ಕಣಪ್ಪ. ಅದರಂತೆ ಸಾವಿನ ನಂತರ ನೇತ್ರದಾನ ಮಾಡಿ ಅಂಧರ ಬಾಳಿಗೆ ರಾಜ್ ಕುಮಾರ್ ಅವರು ಬೆಳಕಾದರು ಎಂದರು.

ನೇತ್ರದಾನ ಮಾಡಿ ಎಂದು  ಅಭಿಮಾನಿಗಳಿಗೆ ಹೇಳಿದರು ರಾಜ್ಯದಲ್ಲಿ ನೇತ್ರದಾನ ಅಭಿಯಾನ ಇಷ್ಟು ಡೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದಕ್ಕೆ ಡಾ.ರಾಜ್ ಕುಮಾರ್ ಅವರು ಸ್ಪೂರ್ತಿಯಾಗಿದ್ದಾರೆ. ಮನುಷ್ಯ ಸತ್ತ ಮೇಲೆ ಜಗತ್ತನ್ನ ನೋಡಬೇಕು ಎಂದರೆ ನೇತ್ರದಾನ ಮಾಡಿ ಎಂದರು.

ಎಮ್.ಶಿವರಾಜುರವರು ಮಾತನಾಡಿ, ದಿ.ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಡಾ.ರಾಜ್ ಕುಮಾರ್ ರವರ 94ನೇ ಹುಟ್ಟುಹಬ್ಬದ ಪ್ರಯುಕ್ತ ನೇತ್ರದಾನ ಮಹತ್ವ ಸಾರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸೆ ಸಹ ನಡೆಯಲಿದೆ ಎಂದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್ ಮತ್ತು ವೈದ್ಯ ರಾಘವೇಂದ್ರ, ರಾಮಕೃಷ್ಣ ಮೊದಲಾದವರು ಹಾಜರಿದ್ದರು.

Leave a Reply