ಕಾಲ್ಪನಿಕ ಕಥೆ ಆದರು ಕೂಡ ಲಾಜಿಕ್ ಮಿಸ್ ಆಗಬಾರದು

3 years ago

#fairy #tale #logic #sapasagaradacheello #jpholalkere #sandalwood #entertainment

ಸಪ್ತ ಸಾಗರದಾಚೆ “ಎಲ್ಲೋ” ಅಷ್ಟಕಷ್ಟೇ..!!

ಶಿರ್ಷಿಕೆಯಂತೆ ಇಡೀ ಸಿನಿಮಾವನ್ನು ಎಳೆಯಲಾಗಿದೆ. ಕಥೆಯೇ ಇಲ್ಲದೆ ಬರೀ ವ್ಯಥೆಯನ್ನು ತೋರಿಸಲಾಗಿದೆ. ಇದು ಖಂಡಿತ ಮಕ್ಕಳು, ಮರಿಯನ್ನು ಕರೆದುಕೊಂಡು ಹೋಗಿ ನೋಡುವ ಸಿನಿಮಾವಲ್ಲ. ಫ್ಯಾಮಿಲಿ ಎಂಟರ್ ಟೈನರ್ ಕೂಡ ಅಲ್ಲ.

ನಿಂತಲ್ಲೇ, ಕುಂತಲ್ಲೇ ಗಿರಕಿ ಹೊಡೆಯುತ್ತೆ. ಅದೇ ಜೈಲು, ಅದೇ ಗೋಳು. ಹಾರ್ಟ್ ವೀಕ್ ಇರೋರು, ತಾಳ್ಮೆ ಇಲ್ಲದವರು ಈ ಸಿನಿಮಾವನ್ನು ನೋಡದೇ ಇರುವುದು ಉತ್ತಮ.‌ ಹೇಮಂತ್ ರಾವ್ ಅವರ ಈ ಹಿಂದಿನ ಎರಡು ಸಿನಿಮಾಗಳನ್ನು ಮನಸಾರೆ ಮೆಚ್ಚಿಕೊಂಡವನಾಗಿ ಹೇಳುತ್ತಿದ್ದೇನೆ ಸಿನಿಮಾ ಚೆನ್ನಾಗಿಲ್ಲ.

ಸಿನಿಮಾ ಒಂದು ಕಾಲ್ಪನಿಕ ಕಥೆ ಆದರು ಕೂಡ ಲಾಜಿಕ್ ಮಿಸ್ ಆಗಬಾರದು. ಅದು ಈ ಸಿನಿಮಾದಲ್ಲಿ ತುಂಬಾ ಕಡೆ ಆಗಿದೆ. ಹೀರೋನ ಇನ್ನೂ ಬಲವಾದ ಕೇಸ್ ನಲ್ಲಿ ಜೈಲಿಗೆ ಕಳುಹಿಸಬಹುದಿತ್ತು. ಆದರು ಕೂಡ ಒಂದು ಸಣ್ಣ ಆಸೆ, ಬಡವನ ಬಯಕೆ ಹೇಗೆಲ್ಲ ಕಷ್ಟಕ್ಕೆ ದೂಡಬಹುದು ಎಂಬುದನ್ನು ತುಂಬಾ ನೀಟಾಗಿ ತೋರಿಸಲಾಗಿದೆ. ಅಲ್ಲಲ್ಲಿ ಮನಸ್ಸಿಗೆ ಇಷ್ಟ ಆಗುವಂತಹ ಡೈಲಾಗ್ ಗಳಿವೆ.

ಎಡಿಟಿಂಗ್ ಸರಿ ಇಲ್ಲ. ಕಟ್ ಶಾಟ್ ಗಳು ಪಟ್ ಪಟ್ ಅಂತ ಬಂದೋಗ್ತಾವೆ. ಹಾಡುಗಳು ಮನಸಲ್ಲಿ ಉಳಿಯಲ್ಲ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಷ್ಟಕಷ್ಟೇ. ಸ್ಕ್ರಿಪ್ಟ್ ನನ್ನದೆ, ಪಾತ್ರಧಾರಿಗಳಿದ್ದಾರೆ, ಕ್ಯಾಮೆರಾ, ಟೆಕ್ನಿಷಿಯನ್ ಇದ್ದಾರೆ ಅಂತ ಬೇಕಾಬಿಟ್ಟಿ “ಸೀನ್ ಕ್ರಿಯೇಟ್” ಮಾಡ್ತಾ ಹೋಗಬಾರದು. ಇಲ್ಲಿ ಸೈಡ್ – ಬಿ ಗೋಸ್ಕರ, ಸೈಡ್ –  ಎ ಅನ್ನು ಅಕ್ಷರಶಃ ಬಲಿ ಪಡೆಯಲಾಗಿದೆ.

ಇಡೀ ಸಿನಿಮಾದಲ್ಲಿ ಇಷ್ಟ ಆಗಿದ್ದು “ಪುಟ್ಟಿ ಮತ್ತು ಕತ್ತೆ”. ಮತ್ತವರ ನಟನೆ, ಎಕ್ಸ್ ಪ್ರೆಷನ್. ಸಾರಿ ಫ್ರೆಂಡ್ಸ್ “ಅಕ್ಟೋಬರ್ 20” ನನಗಂತೂ ಕುತೂಹಲ ಹುಟ್ಟಿಸಿಲ್ಲ. ಈ ಚಿತ್ರಕ್ಕೆ ಚಿತ್ರತಂಡದವರು ಜನರನ್ನು “ಒಮ್ಮೆ ಬಾರೋ.. ಒಮ್ಮೆ ಬಾರೋ..” ಅಂತ ಹಾಡು ಹಾಕಿ ಕರೆಯಬಹುದಷ್ಟೇ..

– ಜಯಪ್ರಕಾಶ್ ಹೊಳಲ್ಕೆರೆ

Leave a Reply