ಬೆಂಗಳೂರು: ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಮೇಯರ್ ಜಿ.ಪದ್ಮಾವತಿಯವರ ಮಾರ್ಗದರ್ಶನದಲ್ಲಿ ಪರಿಸರ ಜಾಗೃತಿ ಅಭಿಯಾನ ಮತ್ತು ಹಸಿ ಕಸ, ಒಣ ಕಸ ಸಂಗ್ರಹಿಸಿ ಮನೆ ಮುಂದೆ ಬರುವ ಕಸ ಸಂಗ್ರಹಿಸುವವರಿಗೆ ನೀಡಲು ವಾರ್ಡ್ ಪ್ರತಿ ಮನೆ ಎರಡು ಡಸ್ಟ್ ಬಿನ್ ಪ್ಲಾಸ್ಟಿಕ್ ಡಬ್ಬಿಗಳನ್ನು ವಿತರಿಸಲಾಗುತ್ತಿದೆ ಎಂದು ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಜಿ.ಕೃಷ್ಣಮೂರ್ತಿ ಹೇಳಿದರು.
ರಾಜಾಜಿನಗರ ವಾರ್ಡ್-99ರಲ್ಲಿ ಪರಿಸರ ಜಾಗೃತಿ ಅಭಿಯಾನ ಮತ್ತು ಮನೆಗಳಿಗೆ ಹಸಿ ಕಸ ಒಣ ಕಸ ಸಂಗ್ರಹಿಸಲು 30000ಸಾವಿರ ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು, ಸಾರ್ವಜನಿಕರು ಹಸಿ ಕಸ ಗೊಬ್ಬರ ತಯಾರಿಕೆ ಮತ್ತು ಒಣ ಕಸ ಮರು ಬಳಕೆ ಮಾಡಬಹುದು ಹಾಗೂ ಪರಿಸರ ಸಹ ಸ್ವಚ್ಚತೆಯಿಂದ ಕೊಡಿರುತ್ತದೆ ಎಂದರು.
ಪರಿಸರ ಹಾಳದರೆ, ರೋಗರುಜಿನಗಳು ಹೆಚ್ಚಾಗುತ್ತವೆ. ಆದ್ದರಿಂದ ಸಾರ್ವಜನಿಕರು ಹಸಿ ಕಸ, ಒಣ ಕಸ ವಿಂಗಡಣೆ ಪರಿಸರ ಉಳಿಸಿ ಎಂದು ಮನೆಗಳಿಗೆ ಭೇಟಿ ನೀಡಿ ಮನವಿ ಮಾಡಲಾಗುತ್ತಿದೆ. ರಾಜಾಜಿನಗರದ ಇಂದಿರಾನಗರ, ಮಂಜುನಾಥನಗರದಲ್ಲಿ ಈಗಾಗಲೇ ವಿತರಿಸುವ ಕಾರ್ಯ ನಡೆಯುತ್ತಿದೆ. 30ಸಾವಿರ ಡಸ್ಟ್ ಬಿನ್ ಗಳನ್ನು ಸಾರ್ವಜನಿಕರ ಮನೆ ಬಳಿದೆ ತೆರಳಿ ವಿತರಿಸಲಾಗುತ್ತಿದೆ ಎಂದರು.
ರಾಜಾಜಿನಗರ ವಾರ್ಡ್ ನ ಮಂಜುನಾಥನಗರದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಡಸ್ಟ್ ಬಿನ್ ಗಳನ್ನು ವಿತರಿಸಿದರು. ಸ್ವಯಂ ಸೇವಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.



