ರಚನಾತ್ಮಕ ಸಂವಾದ ಸಶಕ್ತಗೊಳಿಸುವ ವಾತಾವರಣ ಅಗತ್ಯ: ಇಮ್ರಾನ್ ಖಾನ್

5 years ago

ಇಸ್ಲಾಮಾಬಾದ್: ಜಮ್ಮು ಕಾಶ್ಮೀರ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಮತ್ತು ಪ್ರಯೋಜನ ಆಧಾರಿತ ಸಂವಾದವನ್ನು ಸಶಕ್ತಗೊಳಿಸುವ ವಾತಾವರಣ ರೂಪಿಸುವುದು ಅಗತ್ಯ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಕಳೆದ ವಾರ ನರೇಂದ್ರ ಮೋದಿಯವರು, ಇಮ್ರಾನ್ ಅವರಿಗೆ ಬರೆದಿದ್ದ ಪತ್ರದಲ್ಲಿ ಭಾರತ ಪಾಕ್ ಜೊತೆ ಸೌಹಾರ್ದ ಸಂಬಂಧವನ್ನು ಬಯಸುತ್ತದೆ. ಆದರೆ ಅದಕ್ಕೆ ಭಯೋತ್ಪಾದನೆ ದ್ವೇಷಮುಕ್ತ ವಾತಾವರಣ ಅಗತ್ಯ ಎಂದಿದ್ದರು.

ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಇಮ್ರಾನ್ ಖಾನ್, ಭಾರತ ಸೇರಿದಂತೆ ನೆರೆಹೊರೆಯ ದೇಶಗಳೊಂದಿಗೆ ಪಾಕ್ ಶಾಂತಿಯುತ ಸಹಕಾರದ ಬಾಂಧವ್ಯ ಬಯಸುತ್ತಿದೆ ಎಂದಿದ್ದಾರೆ.

Leave a Reply