ಸಂಜಯ ರಾವುತ್ ಗೆ ಇಡಿ ನೋಟಿಸ್: ನಾಳೆ ಖುದ್ದು ಹಾಜರಾಗಲು ಕಟ್ಟಪ್ಪಣೆ

4 years ago

ಮಹಾ ರೆಬೆಲ್ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದ ಶಿವಸೇನೆ ಆಪತ್ಭಾಂದವ

ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟದ ನಡುವೆ ರಾಜ್ಯಸಭೆ ಸಂಸದ ಹಾಗೂ ಶಿವಸೇನೆಯ ಆಪತ್ಭಾಂದವ ಸಂಜಯ ರಾವುತ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಳೆ ಹಾಜರಾಗಲು ಇಡಿ ನೋಟಿಸ್ ನೀಡಿದೆ.

ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಶಾಸಕರಿಗೆ ಸಂಜಯ ರಾವುತ್ ಎಚ್ಚರಿಕೆಯ ಸಂದೇಶ ರವಾನೆ ಮಾಡುತ್ತಿರುವ ಬೆನ್ನಲ್ಲೇ ಇಡಿ ನಾಳೆ ಹಾಜರಾಗಲು ನೋಟಿಸ್ ನೀಡಿರುವುದು ಕೂತುಹಲ ಮೂಡಿಸಿದೆ.

ಏಕನಾಥ ಶಿಂಧೆ ಅವರನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರವನ್ನು ಕೆಡವಲು ಬಿಜೆಪಿ ಮಹಾಪಿತೂರಿ ನಡೆಸಿದೆ ಎಂದು ಶಿವಸೇನೆಯ ನಾಯಕರು ಆರೋಪಿಸಿದ್ದಾರೆ.

Leave a Reply