ಬೆಂಗಳೂರು: ರಾಜಾಜಿನಗರದ ಶ್ರೀ ರಾಮಮಂದಿರ ಆಟದ ಮೈದಾನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾ ವತಿಯಿಂದ ನಮ್ಮ ಮನೆಯ ಗಣೇಶ ನಾವೇ ತಯಾರಿಸೋಣ ಪರಿಸರ ಸ್ನೇಹಿ ಮಣ್ಣಿನ ತಯಾರಿಕೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಮಾತನಾಡಿ, ಸಮಾಜ ಸಂಘಟನೆ ಗಣೇಶ ಹಬ್ಬ ಪ್ರತೀಕವಾಗಿದೆ. ಗಣೇಶನಿಗೆ 101 ಹೆಸರಿನಲ್ಲಿ ನಾಮ ಸ್ಮರಣೆ ಮಾಡುತ್ತಾರೆ. ಸ್ವಾತಂತ್ರ್ಯ ಸಂಗ್ರಾಮ ಹೋರಾಟದಲ್ಲಿ ಸಂಘಟನೆ ಮಾಡಿ ಹೋರಾಟ ಮಾಡಲು ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್ ಸಾಮೂಹಿಕ ಗಣೇಶ ಹಬ್ಬ ಅಚರಣೆಗೆ ರೂವಾರಿಯಾದರು ಎಂದರು.
ರಾಸಾಯನಿಕ ಬಣ್ಣದ ಗಣೇಶ ನೀರಿನಲ್ಲಿ ವಿಸರ್ಜನೆಯಿಂದ ಮನುಷ್ಯ ಮತ್ತು ಪ್ರಾಣಿ, ಪಕ್ಷಿಗಳಿಗೂ ಪ್ರಾಣಪಾಯವಿದೆ. ಸ್ವಾಭಾವಿಕ ಮಣ್ಣಿನ ಗಣೇಶ ಪ್ರತಿಷ್ಠಾಪನೆಯಿಂದ ಪರಿಸರ ಉಳಿಯುತ್ತದೆ ಎಂದರು.
ರಾಜ್ಯ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮುನಿರಾಜು, ದೀಪಾ ನಾಗೇಶ್ ಮತ್ತು ರಾಜಾಜಿನಗರ ಮಂಡಲ ಅಧ್ಯಕ್ಷ ರಾಘವೇಂದ್ರ ರಾವ್, ಉಪಾಧ್ಯಕ್ಷ ಬಿ.ಎನ್.ಶ್ರೀನಿವಾಸ್ ಮತ್ತು ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಮತ್ತು ಕೇಂದ್ರ ಜಿಲ್ಲಾ ಬಿ.ಜೆ.ಪಿ. ಯುವ ಮುಖಂಡ ಅಭಿಲಾಶ್ ರೆಡ್ಡಿ, ಮಹೇಂದ್ರ ಮೋದಿ, ಅಜಿತ್ ಹೆಗಡೆ, ಶ್ರೀನಿವಾಸ್ ರಾಘವನ್, ಸುನೀಲ್ ಶಿವಾನಂದ್, ಗೋಪಿ ಮೊದಲಾದವರು ಭಾಗವಹಿಸಿದ್ದರು.
ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಮಣ್ಣಿನ ಗಣೇಶ ತಯಾರಿಕೆಯಲ್ಲಿ ಪಾಲ್ಗೊಂಡರು.




