ಬೆಂಗಳೂರು: ಹೋಳಿ ಹಬ್ಬದ ರಜೆಯ ಖುಷಿಯಲ್ಲಿದ್ದ ಕಾರ್ಮಿಕರ ನಡುವೆ ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಮೂವರ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರ – ಬಾಗಲೂರು ಮುಖ್ಯ ರಸ್ತೆಯ ತಿಂಡ್ಲು ಗೇಟ್ ನಲ್ಲಿನ ನಿರ್ಮಾಣ ಹಂತದ ಪೋರ್ವಾಲ್ ಅವೆನ್ಯೂ ಅಪಾರ್ಟ್ ಮೆಂಟ್‌ನ ಮೂರನೇ ಮಹಡಿಯಲ್ಲಿ ನಡೆದಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಿಹಾರ ಮೂಲದ ಅನ್ಸು (22), ರಾಧೆ ಶ್ಯಾಮ್ (23), ಮತ್ತು ಕನ್ಸರ್ ಕೊಲೆಯಾದವರ ಎಂದು ಗುರುತಿಸಲಾಗಿದೆ.ಮೃತ ರಾಧೆಶ್ಯಾಮ್ ತಮ್ಮ ಬಿರಾದಾರ್ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಸೋನು ಮತ್ತು ಅವನ ಸ್ನೇಹಿತ ಕೊಲೆ ಆರೋಪಿಗಳಾಗಿದ್ದಾರೆ.
ತಿಂಡ್ಲು ಬಳಿಯ ಟಿವಿಎಸ್ ಕಲ್ಯಾಣ ಮಂಟಪದ ಹಿಂದಿನ ನಿರ್ಮಾಣ ಹಂತದ ಫೋರ್ ವಾಲ್ ಅವಿನ್ಯೂ ಕಟ್ಟಡದ ಮೂರನೇ ಮಹಡಿಯಲ್ಲಿ ಕೊಲೆ ನಡೆದಿದೆ. ಇವರು ವಿವಿಧ ಗುತ್ತಿಗೆದಾರರ ಬಳಿ ಮರದ ಕೆಲಸಮಾಡುವ ಕಾರ್ಮಿಕರಾಗಿದ್ದು, ಬಿಹಾರ ಮೂಲದ 6 ಮಂದಿ ಪ್ಲಂಬಿಂಗ್ ಕೂಲಿ ಕಾರ್ಮಿಕರು ಹೋಳಿ ಹಬ್ಬ ಇದ್ದರಿಂದ ಮೂರು ದಿನಗಳ ಕಾಲ ರಜಾ ಇದ್ದು ಆಚರಣೆಯಲ್ಲಿ ಪಾಲ್ಗೊಂಡಿದ್ದರು. ನಂತರ ಎಲ್ಲರೂ ಸೇರಿ ಒಂದು ಕೋಣೆಯಲ್ಲಿ ತಮಗೆ ಬೇಕಾದ ಆಹಾರವನ್ನು ತಯಾರಿಸಿ ಮತ್ತೊಂದು ಕೋಣೆಯಲ್ಲಿ ಮದ್ಯಸೇವನೆ ಮಾಡುತ್ತಿದ್ದರು.
ಈ ವೇಳೆ ಅವರವರಲ್ಲೇ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿದ್ದ ಯುವಕರು ಮೂವರನ್ನು ಹತ್ಯೆಗೈದಿದ್ದಾರೆ. ಮೂರನೇ ಮಹಡಿಯಲ್ಲಿ ಒಂದು ಕೋಣೆಯಲ್ಲಿ ಎರಡು ಶವ ಮತ್ತೊಂದು ಕೋಣೆಯಲ್ಲಿ ಒಂದು ಶವ ಪತ್ತೆಯಾಗಿದೆ.
ವಿಷಯ ತಿಳಿದ ಕೂಡಲೇ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಒಬ್ಬ ಅಪರಾಧಿಯನ್ನು ವಶಕ್ಕೆ ಪಡೆದಿದ್ದಾರೆ. ಮಿಕ್ಕ ಇಬ್ಬರು ಪರಾರಿಯಾಗಿದ್ದಾರೆ. ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪರಾಧಿಗಳ ಜಾಡು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ಸಿ.ಕೆ ಬಾಬಾ ಮಾತನಾಡಿ, ಇದೊಂದು 14 ಮಹಡಿಯ ನಿರ್ಮಾಣ ಹಂತದ ಕಟ್ಟಡವಾಗಿದೆ. ಸಂಜೆಯಷ್ಟೇ ಈ ಬಗ್ಗೆ ನಮಗೆ ಮಾಹಿತಿ ದೊರೆತಿದೆ. ಒಟ್ಟಾರೆ ನಮಗೆ ಮೂರು ಶವಗಳು ದೊರೆತಿದ್ದು, ಇವರೆಲ್ಲರೂ ಪ್ಲಂಬಿಂಗ್ ಮತ್ತಿತರ ಕೆಲಸದಲ್ಲಿದ್ದರೆಂದು ತಿಳಿದುಬಂದಿದೆ. ಹೋಳಿ ಹಬ್ಬದ ಪ್ರಯುಕ್ತ ಮೂರು ದಿನ ರಜೆ ನೀಡಲಾಗಿತ್ತು. ಈ ವೇಳೆ ಮೂವರೂ ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಆಯೋಜಿಸಿದ್ದರು. ಬಂದಿದ್ದವರ ಪೈಕಿ ಒಬ್ಬಾತ ಗೆಳೆಯನ ಅಕ್ಕನ ಜೊತೆಗೆ ಫೋನಿನಲ್ಲಿ ಮಾತನಾಡಿದ್ದೇ ಜಗಳಕ್ಕೆ ಕಾರಣವಾಗಿದೆ ಎಂದು ಮೆಲ್ನೋಟಕ್ಕೆ ಕಂಡು ಬಂದಿದ್ದು ಮೂವರು ಸ್ಥಳದಲ್ಲಿದ್ದ ರಾಡ್ ಮತ್ತು ಬಾಟಲ್‌ಗಳಿಂದ ಹಲ್ಲೆ ನಡೆಸಿದ್ದಾರೆ. ನಾವು ಬಂದಾಗ ಇಬ್ಬರು ಮೃತಪಟ್ಟಿದ್ದರು.ಒಬ್ಬನನ್ನು ಆಂಬುಲೆನ್ಸ್‌ನಲ್ಲಿ ಹಾಕುವಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ 4 ತಂಡಗಳ ರಚನೆ ಮಾಡಲಾಗಿದೆ. ಇನ್ನು ಸ್ಥಳಕ್ಕೆ ಐಜಿ ಲಾಬು ರಾಮ್ ಭೇಟಿ ನೀಡಿದರು.
ಇನ್‌ಸ್ಪೆಕ್ಟರ್ ಮಂಜುನಾಥ್, ರಾಘವೇಂದ್ರ, ಸೋಮಶೇಖರ್, ಸಂಜೀವ್ ಮಹಾಜನ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ 4 ತಂಡಗಳ ರಚನೆ ಮಾಡಲಾಗಿದೆ. ಸ್ಥಳದಲ್ಲಿ ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್, ಇನ್‌ಸ್ಪೆಕ್ಟರ್ ಪಿ.ಜಿ ನವೀನ್ ಕುಮಾರ್, ತಿಪ್ಪೇಸ್ವಾಮಿ ಇದ್ದರು.




