ಮಂಗಳೂರು: ತಮಗೆ ಬಂದಿರುವ ಕೊರಿಯರ್ ನಲ್ಲಿ ಡ್ರಗ್ಸ್ ಹಾಗೂ ಅಂತರಾಷ್ಟ್ರೀಯ ವಿಷಯಗಳ ದಾಖಲೆಗಳಿವೆ. ಈ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ನಿಮ್ಮ ವಿರುದ್ಧವೂ ತನಿಖೆ ನಡೆಯಲಿದೆ. ಅದರಿಂದ ತಪ್ಪಿಸಿಕೊಳ್ಳಬೇಕು ಎಂದರೆ ಹಣ ನೀಡಬೇಕು ಎಂದು ವಂಚಿಸಿ ನಿವೃತ್ತ ಎಂಜಿನಿಯರ್ ಅವರಿಂದ 1.6 ಕೋಟಿ ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕೇಂದ್ರ ತನಿಖಾ ಸಂಸ್ಥೆಯಿಂದ ಸಂಭವನೀಯ ತನಿಖೆಯನ್ನು ತಪ್ಪಿಸಲು ಎಚ್ಚರಿಕೆ ಹಣ ಕೇಳಿ ನಿವೃತ್ತ ಇಂಜಿನಿಯರ್ಗೆ ವಂಚನೆ ಮಾಡಿ 1.6 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು, ಅಂತಾರಾಷ್ಟ್ರೀಯ ಕೊರಿಯರ್ ಸೇವೆಯ ಉದ್ಯೋಗಿಗಳಂತೆ ನಟಿಸುತ್ತಾ, ಸಂತ್ರಸ್ತರು ಕಳುಹಿಸಿದ ಪ್ಯಾಕೇಜ್ನಲ್ಲಿ ದೋಷಾರೋಪಣೆಯ ದಾಖಲೆಗಳು ಮತ್ತು ಡ್ರಗ್ಸ್ ಇದೆ. ಅದರ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಬಂದಿದೆ. ಹೀಗಾಗಿ ನಿಮ್ಮನ್ನು ವಿಚಾರಣೆಗೊಳಪಡಿಸಬೇಕು ಎಂದು ನಂಬಿಸಿದ್ದಾರೆ.
ನೀವು 1.6 ಕೋಟಿ ರೂ.ಠೇವಣಿ ಇಡಬೇಕು. ತನಿಖೆ ಮುಗಿದ ನಂತರ ಅದನ್ನು ಹಿಂತಿರುಗಿಸುವುದಾಗಿ ಹೇಳಿ ಅವರು ನಂಬಿಸಿ ವಂಚನೆ ಮಾಡಿದ್ದಾರೆ. ಆಪಾದಿತ ವಹಿವಾಟು ಮೇ 2-6 ರ ನಡುವೆ ನಡೆದಿದ್ದು, ಈ ಬಗ್ಗೆ ವ್ಯಕ್ತಿ ತನ್ನ ಮಗಳಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಂಗಳೂರು ನಗರದ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




