ಬಿ.ಆರ್.ಟಿ ಹುಲಿಯೋಜನೆ ವ್ಯಾಪ್ತಿ ಅರಣ್ಯ ಸಿಬ್ಬಂದಿಗೆ ಡ್ರೋಣ್ ಬಳಕೆ ತರಬೇತಿ

5 years ago

ಚಾಮರಾಜನಗರ: ಕಾಡಿಗೆ ಬೀಳುವ ಬೆಂಕಿ, ಕಣ್ಗಾವಲು ಹಾಗೂ ಕಾಡು ಪ್ರಾಣಿಗಳ ಚಲನವಲನಗಳನ್ನು ಪತ್ತೆ ಹಚ್ಚುವ ಸಂಬಂಧ ಫಾರೆಸ್ಟ್ ವಾಚರ್, ಫಾರೆಸ್ಟ್ ಗಾರ್ಡ್ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ವಲಯ ಅರಣ್ಯ ಅಧಿಕಾರಿಗಳಿಗೆ ಡ್ರೋಣ್ ಗಳನ್ನು ನಿರ್ವಹಿಸುವ ಸಂಬಂಧ ತರಬೇತಿ ನೀಡಲಾಯಿತು.

ಕಾಡಿಗೆ ಆಕಸ್ಮಿಕವಾಗಿ ಹಾಗೂ ಕಿಡಿಗೇಡಿಗಳಿಂದ ಬೀಳುವ ಬೆಂಕಿಯ ಪತ್ತೆಗಾಗಿ ಹಾಗೂ ವನ್ಯಜೀವಿಗಳ ಚಲನವಲನಗಳನ್ನ ಪತ್ತೆ ಹಚ್ಚುವ ಸಲುವಾಗಿ ಮತ್ತು ಅರಣ್ಯ ಅಪರಾಧಗಳ ಪತ್ತೆ ಕಾರ್ಯಕ್ಕೆ ಡ್ರೋಣ್ ಬಳಕೆ ಅತ್ಯವಶ್ಯವಾಗಿರುವ ಹಿನ್ನೆಲೆಯಲ್ಲಿ ಬಿ.ಆರ್.ಟಿ ಹುಲಿಯೋಜನೆ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗಿತ್ತು.

Leave a Reply