ಬೆಂಗಳೂರು: ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾ.ಪಂ. ಕೂಗಳತೆ ದೂರದಲ್ಲೆ ಆಕಸ್ಮಿಕ ಅಗ್ನಿ ಅವಘಡ ಕಾಣಿಸಿಕೊಂಡು ದೊಡ್ಡ ಹಾನಿಯಾಗುವ ಸಂಭವವಿತ್ತು. ಕೂಡಲೆ ಎಚ್ಚೆತ್ತ ಗ್ರಾ.ಪಂ. ಅಧ್ಯಕ್ಷ ವೀರಣ್ಣ ರಿಗ್ಲೆ ಸ್ಥಳಕ್ಕೆ ದೌಡಾಯಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು.
ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಮಧ್ಯಾನ್ಹ 1.30ರ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು. ಇದ್ದಕ್ಕಿದ್ದಂತೆ ಬೆಂಕಿ ಜ್ವಾಲೆ ವ್ಯಾಪಿಸಿತು. ಸ್ವಲ್ಪ ಯಾಮಾರಿದ್ದರು ದೊಡ್ಡ ಅವಘಡ ಸಂಭವಿಸುತ್ತಿತ್ತು. ನಮ್ಮ ಪಂಚಾಯಿತಿ ಅಧ್ಯಕ್ಷ ವೀರಣ್ಣನವರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯಿಸಿದರು.

ಭಸ್ಮವಾಗುತ್ತಿದ್ದ ರೈಲ್ವೆ ಸ್ಟೇಷನ್ ರಕ್ಷಣೆ
ರಾಜಾನುಕುಂಟೆ ಗ್ರಾ.ಪಂ. ಕೂಗಳತೆ ದೂರದಲ್ಲಿ ರೈಲ್ವೆ ನಿಲ್ದಾಣವಿದೆ. ಸ್ವಲ್ಪ ವಿಳಂಬವಾಗಿಗಿದ್ದರು ಬೆಂಕಿ ರೈಲ್ವೆ ನಿಲ್ದಾಣದವರೆಗೂ ವ್ಯಾಪಿಸುತ್ತಿತ್ತು. ಕಸ ವಿಂಗಡಣ ಘಟಕ ಕೂಡಾ ಬೆಂಕಿಗೆ ಆಹುತಿಯಾಗುತ್ತಿತ್ತು. ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಸುಮಾರು 10ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಗ್ರಾ.ಪಂ. ಸಿಬ್ಬಂದಿ ಸಾಥ್ ನೀಡಿದ್ದಾರೆ. ಸದಸ್ಯರಾದ ಎಸ್.ಟಿ.ಡಿ ನರಸಿಂಹ ಮೂರ್ತಿ, ಶಿವಕುಮಾರ್ ಸೇರಿ ಇನ್ನಿತರು ಸ್ಥಳದಲ್ಲೇ ಹಾರಿದ್ದು ಉಸ್ತುವಾರಿ ನಿರ್ವಹಿಸಿದ್ದಾರೆ.




