ವಿಜಯಪುರ: ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಕಥನ ಡಾ. ಅಂಬೇಡ್ಕರ್ ಸಹವಾಸದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಗಸ್ಟ್ 7 ರಂದು ಬೆಳಗಿನ 11 ಗಂಟೆಗೆ ಬಿಜಾಪುರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ.
ಲಡಾಯಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವನ್ನು ಬಿಜಾಪುರ ಜಿಲ್ಲೆಯಲ್ಲಿ ಕಳೆದ ಐದು ದಶಕಗಳಿಂದ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಅನಿಲ ಹೊಸಮನಿ ಅವರು ಅನುವಾದಿಸಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜಾಪುರದ ಭಂತೆ ಬೋಧಿಪ್ರಜ್ಞಾ ಅವರು ಪಾಲ್ಗೊಳ್ಳುವರು. ಡಿ ಎಸ್ ಎಸ್ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಎಸ್ ಎಂ ಪಾಟೀಲ ಗಣಿಹಾರ ಅತಿಥಿಗಳಾಗಿ ಭಾಗವಹಿಸುವರು.
ನಾಗರಾಜ ಲಂಬು, ಅಭಿಷೇಕ ಚಕ್ರವರ್ತಿ, ಶ್ರೀನಾಥ ಪೂಜಾರ, ವಿನೋದ ವ್ಯಾಸ ಅವರ ಗೌರವ ಉಪಸ್ಥಿತಿ ಇರಲಿದೆ. ನೀವೂ ಬನ್ನಿ. ಆ ದಿನ ಬಿಡುವು ಮಾಡಿಕೊಳ್ಳಿ. ಬಿಜಾಪುರ ಹೊಸ ಚರಿತ್ರೆ ಬರೆಯಲಿ…




