ಬೆಂಗಳೂರು: ಜನರ ಬಳಿಗೆ ಆಡಳಿತ, ಜನರ ಆಶಯದಂತೆ ಯೋಜನೆ, ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರನ್ನು ನೇರವಾಗಿ ಭೇಟಿಮಾಡಲು ಮನೆ ಮನೆಗಳಿಗೆ ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್ ಜನ ಸಂಪರ್ಕ ಅಭಿಯಾನ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರಾಜಾಜಿನಗರ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ,ಬುದ್ದಿವಂತ ಮತದಾರರು ಇರುವ ಕ್ಷೇತ್ರ. ಇಲ್ಲಿ ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚಿದೆ. ಜನರ ಬಳಿಗೆ ಆಡಳಿತ ಎಂಬಂತೆ, ಜನರೊಂದಿಗೆ ನೇರವಾಗಿ ಮಾತನಾಡಿದಾಗ ಸಮಸ್ಯೆಗಳ ಬಗ್ಗೆ ಅರಿಯಬಹುದು ಹಾಗೂ ಶಾಶ್ವತ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಏಳು ವಾರ್ಡ್ ಗಳ ವ್ಯಾಪ್ತಿಯಲ್ಲಿ ಪ್ರತಿ ದಿನ ಜನ ಸಂಪರ್ಕ ಅಭಿಯಾನವಿರುತ್ತದೆ. ಈಗಾಗಲೇ 3000ಸಾವಿರ ಮನೆಗಳಿಗೆ ಭೇಟಿ ನೀಡಲಾಗಿದೆ. ಕುಡಿಯುವ ನೀರು, ಬೀದಿ ದೀಪಾ,ಕಸದ ವಿಲೇವಾರಿ, ಸಿ.ಸಿ.ಕ್ಯಾಮರ ಸಮಸ್ಯೆಗಳು ಮುಂತಾದ ಜನರ ಅಹವಾಲುಗಳನ್ನು ಅವರ ಮನೆಗೆ ತೆರಳಿ ತಿಳಿದುಕೊಂಡು ಬಗೆಹರಿಸುವುದು ಈ ಅಭಿಯಾನದ ಉದ್ದೇಶ ಎಂದರು.
ಒಂಟಿ ಮನೆ ಯೋಜನೆ,ಅಂಗವಿಕಲ ವೇತನ,ವಿಧವಾ ವೇತನ,ಹಿರಿಯ ನಾಗರಿಕರ ಪಿಂಚಣಿ, ಲೇಬರ್ ಕಾರ್ಡ್ ಹಲವಾರು ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುವಂತೆ ಮಾಡಲು ಜನ ಸಂಪರ್ಕ ಅಭಿಯಾನ ಸಹಕಾರಿಯಾಗಿದೆ ಎಂದರು.
ಈ ವೇಳೆ ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರ ರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯೆ ದೀಪಾ ನಾಗೇಶ್, ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್, ವಾರ್ಡ್ ಅಧ್ಯಕ್ಷರಾದ ಕಿರಣ್, ಮುನ್ನಭಾಯಿ, ಟಿ.ಎನ್.ಆರ್.ರಮೇಶ್, ಕೈಲಾಸ್ ಜೈನ್,ಮುಂತಾದವರು ಪಾಲ್ಗೊಂಡಿದ್ದರು.
*



