ಬಳ್ಳಾರಿ: ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರುಗಳಿಗೆ ಜಿಲ್ಲಾ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಡಿ.05ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎಪಿಎಂಸಿ ಹತ್ತಿರದ ಹಿರಾಳಕುಡಂನ ಈಗ್ದಾ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಉಮಾದೇವಿ.ಬಿ. ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ವಿಷಯಗಳು (ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ):
- ಗುಣಮಟ್ಟದ ಶಿಕ್ಷಣದಲ್ಲಿ ಸಮಕಾಲೀನ ಕಲಿಕಾ ಪದ್ಧತಿಗಳು
- ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಮಹತ್ವ
- ನನ್ನ ಕನಸಿನ ಗುಣ ಮಟ್ಟದ ಶಾಲೆ
- ಶಿಕ್ಷಣ ಕಾಯ್ದೆ -2009
- ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ
ಪ್ರಬಂಧ ಸ್ಪರ್ಧೆಯ ವಿಷಯಗಳು (ಪ್ರೌಢಶಾಲಾ ಶಿಕ್ಷಕರಿಗೆ):
- ರಾಷ್ಟ್ರೀಯ ಶಿಕ್ಷಣ ನೀತಿ -2020
- ಪ್ರೌಢ ಶಾಲಾ ಹಂತದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣದ ಮಹತ್ವ
- ಬಾಹ್ಯಾಕಾಶದಲ್ಲಿ ಭಾರತದ ಸಾಧನೆ, ಆನ್ ಲೈನ್ ಶಿಕ್ಷಣದ ಸಾಧಕಬಾಧಕ
- ಮಕ್ಕಳ ಕಲಿಕೆಯಲ್ಲಿ ಸಮೂಹ ಮಾಧ್ಯಮಗಳ ಮಹತ್ವ ಅನುಕೂಲ ಮತ್ತು ಅನಾನುಕೂಲಗಳು
ಚಿತ್ರಕಲಾ ಸ್ಪರ್ಧೆಯ ವಿಷಯಗಳು (ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ):
- ಹವಾಮಾನ ವೈಪರೀತ್ಯಗಳು
- ಕಾಡು ಬೆಳಸಿ ದೇಶ ಉಳಿಸಿ
- ಸ್ವಚ್ಛ ಭಾರತ
ಚಿತ್ರಕಲಾ ಸ್ಪರ್ಧೆಯ ವಿಷಯಗಳು (ಪ್ರೌಢಶಾಲಾ ಶಿಕ್ಷಕರಿಗಾಗಿ):
- ಮಕ್ಕಳ ಕಲಿಕೆ ಮೇಲೆ ಸಾಮಾಜಿಕ ನಡಾವಳಿಗಳ ಪ್ರಭಾವ
- ಪರಿಸರ-ಮಕ್ಕಳ ವಿಕಾಸ
- ಆನ್-ಲೈನ್ ಶಿಕ್ಷಣ ಮತ್ತು ಮಕ್ಕಳು
ಈ ಮೇಲಿನ ಪ್ರಬಂಧ ಹಾಗೂ ಚಿತ್ರಕಲೆ ವಿಷಯಗಳಲ್ಲಿ ಒಂದನ್ನು ಮಾತ್ರ ಒಂದು ಗಂಟೆ ಮುಂಚಿತವಾಗಿ ಸ್ಥಳದಲ್ಲಿಯೇ ಘೋಷಣೆ ಮಾಡಲಾಗುವುದು.
ತಾಲ್ಲೂಕು ಮಟ್ಟದಲ್ಲಿ ನಡೆದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕರು ತಪ್ಪದೇ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



