ಬೆಂಗಳೂರು: ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೂಪಿಸಿರುವ ದ್ವೇಷ ಭಾಷಣ ನಿಷೇಧ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕದೆ ಬಾಕಿ ಉಳಿಸಿಕೊಂಡಿರುವುದು ಬೇಸರ ತಂದಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಈ ವಿಧೇಯಕವನ್ನು ಹೆಚ್ಚಿನ ಅಧ್ಯಯನಕ್ಕಾಗಿ ರಾಜ್ಯಪಾಲರು ತಮ್ಮ ಬಳಿ ಉಳಿಸಿಕೊಂಡಿರಬಹುದು. ಈ ಬಗ್ಗೆ ಅವರಿಗೆ ಹೆಚ್ಚುವರಿ ಮಾಹಿತಿ ಬೇಕಿದ್ದರೆ ಕೊಡುತ್ತೇವೆ. ಒಂದು ವೇಳೆ ತಿರಸ್ಕಾರ ಮಾಡಿದರೆ ನಂತರ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ ಎಂದರು.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಸುಮಾರು 25 ಮಸೂದೆಗಳನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಇವುಗಳ ಪೈಕಿ ಒಳ ಮೀಸಲಾತಿ ಮಸೂದೆ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ದ್ವೇಷ ಭಾಷಣ ನಿಯಂತ್ರಣ ಮಸೂದೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದರು.
ಅಕ್ರಮವಾಗಿ ದೇಶದೊಳಗೆ ನುಸುಳಿರುವ ಬಾಂಗ್ಲಾ ನಿವಾಸಿಗಳಿಗೆ ವಾಸಕ್ಕೆ ಮನೆ ನೀಡುವ ರಾಜ್ಯದ ಮಾಲೀಕರ ವಿರುದ್ಧವೂ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಎಚ್ಚರಿಕೆ ನೀಡಿದರು.
ಭಾರತದ ಗಡಿಯಲ್ಲಿ ಬಾಂಗ್ಲಾ ಹಾಗೂ ಇತರ ದೇಶದ ನಿವಾಸಿಗಳು ಅಕ್ರಮವಾಗಿ ದೇಶದ ಒಳಗೆ ನುಸುಳಲು ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ಬಿಎಸ್‌ಎಫ್ ಸೇರಿದಂತೆ ಎಲ್ಲಾ ರೀತಿಯ ಪಡೆಗಳನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತಿದೆ. ಗಡಿಯಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಒಳನುಸುಳುವಿಕೆಯನ್ನು ತಡೆಯುವುದು ಕೇಂದ್ರದ ಜವಾಬ್ದಾರಿ. ಆದರೆ ಆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡದೇ ಇದ್ದಾಗ ಬಾಂಗ್ಲಾ ನಿವಾಸಿಗಳು ದೇಶದ ಒಳಗೆ ನುಸುಳುತ್ತಾರೆ ಎಂದರು.
ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದು ತಾವು ಗಡಿಯಲ್ಲಿ ದುಡ್ಡು ಕೊಟ್ಟು ಒಳ ಬಂದಿದ್ದೇವೆ. ಅಲ್ಲಿಂದ ಏಜೆಂಟರು ನಾವು ಎಲ್ಲಿ ವಾಸ ಮಾಡಬೇಕು ಸೂಚನೆ ನೀಡಿ ಮನೆಯನ್ನೂ ಬಾಡಿಗೆ ಕೊಡಿಸುತ್ತಾರೆ ಎಂದು ಕೆಲವು ಅಕ್ರಮ ನುಸುಳುಕೋರರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಣ ಕೊಟ್ಟು ಒಳಗೆ ಬರುತ್ತಿದ್ದಾರೆ ಎಂದರೆ ಗಡಿಯಲ್ಲಿ ಸರಿಯಾದ ರಕ್ಷಣೆ ಇಲ್ಲ ಎಂದಾಗುತ್ತದೆ. ಕೇಂದ್ರದ ಸರ್ಕಾರ ಮತ್ತು ರಕ್ಷಣಾ ಇಲಾಖೆ ಈ ವಿಷಯವಾಗಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದರು.
ಒಳನುಸುಳಿದವರನ್ನು ಏಜೆಂಟರು ಕರೆದು ತಂದು ಕೆಲಸ ಕೊಡಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಇದು ದೇಶದ ಎಲ್ಲ ರಾಜ್ಯಗಳಲ್ಲೂ ನಡೆಯುತ್ತಿದೆ ಎಂದರು. ರಾಜ್ಯ ಸರ್ಕಾರ ಅಕ್ರಮ ಬಾಂಗ್ಲಾ ನಿವಾಸಿಗಳ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ನಿನ್ನೆಯೂ ಕೆಲವರನ್ನು ವಶಕ್ಕೆ ಪಡೆದಿದ್ದು ಗಡಿಪಾರು ಮಾಡುತ್ತೇವೆ ಎಂದರು.
ಅಕ್ರಮ ವಲಸಿಗರ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದಿನನಿತ್ಯವೂ ಪರಿಶೀಲನೆ ನಡೆಯುತ್ತಿದೆ. ಬಾಂಗ್ಲಾದೇಶ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಸಕ್ರಮವಾಗಿ ಆಗಮಿಸಿರುವವರ ದಾಖಲಾತಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಅಕ್ರಮವಾಗಿ ಬಂದಿರುವವರನ್ನು ಪರಿಶೀಲಿಸಲು ಸೂಚಿಸಲಾಗಿದೆ ಎಂದರು.
ವಿದೇಶಿಯರು ಭಾರತಕ್ಕೆ ಬಂದಾಗ ಅವರ ಬಳಿ ಅಧಿಕೃತವಾದ ವೀಸಾ ಇಲ್ಲದೆ ಇದ್ದರೆ ಅಂತಹವರಿಗೆ ವಾಸ ಮಾಡಲು ಬಾಡಿಗೆ ಮನೆ ನೀಡುವುದು ಅಪರಾಧವಾಗಲಿದೆ. ಅಂತ ಸಂದರ್ಭದಲ್ಲಿ ಬಾಡಿಗೆ ನೀಡಿರುವ ಮನೆ ಮಾಲೀಕರ ವಿರುದ್ಧವು ಕ್ರಮ ಜರುಗಿಸಲಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರ ರೂಪಿಸಿರುವ ಕಾನೂನಿನಲ್ಲಿ ಸ್ಪಷ್ಟ ನಿಯಮಗಳಿವೆ ಎಂದರು.




