ದೆಹಲಿ: “ದಿ ನ್ಯೂಸ್” ಎಂಬ ಫೇಸ್‌ಬುಕ್ ಪುಟದಲ್ಲಿ ವೈರಲ್ ಆಗಿರುವ 7:08 ನಿಮಿಷಗಳ ಅವಧಿಯ ವೀಡಿಯೊ ತುಣುಕಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ “ಅಧೀರ್ ಚೌಧರಿ ಅವರು ತೃಣಮೂಲದ ವಿರುದ್ಧ ಬಿಜೆಪಿಗೆ ಮತ ನೀಡುವಂತೆ ಕೋರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೇ ಆಧರಿಸಿ, ಜೂನ್ 4ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ವೇಳೆ ಟಿವಿ 9 ಕನ್ನಡ ನಿರೂಪಕ ರಂಗನಾಥ್ ಭಾರದ್ವಾಜ್ ಕೂಡ ಇದೇ ಹೇಳಿಕೆಯನ್ನು ನೀಡಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಇತ್ತೀಚೆಗೆ ನಡೆದ 2024 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಮತ ಹಾಕುವುದಕ್ಕಿಂತ ಬಿಜೆಪಿಗೆ ಮತ ಹಾಕುವುದು ಸೂಕ್ತ ಎಂದು ಅವರು ಹೇಳಿದ್ದಾರೆ ಎಂದು ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
“ದಿ ನ್ಯೂಸ್ ಬಾಂಲಾ” ಎಂಬ ಫೇಸ್‌ಬುಕ್ ಪುಟ ವೈರಲ್ ಕ್ಲಿಪ್‌ನಲ್ಲಿ 7:08 ನಿಮಿಷಗಳ ಅವಧಿಯ ವೀಡಿಯೊ ವರದಿಯನ್ನು ಷೇರ್ ಮಾಡಿದೆ. “ಅಧೀರ್ ಚೌಧರಿ ಅವರು ತೃಣಮೂಲ ವಿರುದ್ಧ ಬಿಜೆಪಿಗೆ ಮತ ಕೇಳುತ್ತಿದ್ದಾರೆ, ದೊಡ್ಡ ಸುದ್ದಿ” ಚೌಧರಿ ಅವರು “ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ” ಮತ್ತು ಪಕ್ಷಕ್ಕಾಗಿ ಮತ ಯಾಚನೆ ಮಾಡುತ್ತಿದ್ದಾರೆ ಎಂದು ವೀಡಿಯೊ ನಿರೂಪಕರು ಪದೇ ಪದೇ ಪ್ರತಿಪಾದನೆ ಮಾಡಿದ್ದಾರೆ.
ಅಧೀರ್ ರಂಜನ್ ಚೌಧರಿ ಅವರು ಬಿಜೆಪಿಯನ್ನು ಬೆಂಬಲಿಸಲು ಪ್ರಾರಂಭಿಸಿದ್ದಾರೆ ಎಂದು ವೀಡಿಯೊದಲ್ಲಿರುವ ಪಠ್ಯದಲ್ಲಿ ಆರೋಪಿಸಸಲಾಗಿದೆ. ಸದರಿ ವೀಡಿಯೊ ಸು. 50,000 ವೀಕ್ಷಣೆಗಳನ್ನು ಮತ್ತು 2,600 ಪ್ರತಿಕ್ರಿಯೆಗಳನ್ನು ಹೊಂದಿದೆ.
ಆದರೆ ಇದು ಸುಳ್ಳು ಎಂಬುದು ಫ್ಯಾಕ್ಟ್ ಚೆಕ್ ಮೂಲಕ ತಿಳಿದುಬಂದಿದೆ. ವೈರಲ್ ವೀಡಿಯೊ ಕ್ಲಿಪ್ ಅನ್ನು ತಿರುಚಲಾಗಿದ್ದು, ಅಧೀರ್ ರಂಜನ್ ಚೌಧರಿ ಅವರು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಲ್ಲ. ಟಿಎಂಸಿ ಮತ್ತು ಬಿಜೆಪಿ ನಡುವೆ ತೌಲನಾತ್ಮಕ ಹೇಳಿಕೆ ನೀಡಿರುವ ಅವರು, ಟಿಎಂಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಆದರೆ ಅವರ ಭಾಷಣದ ಹೆಚ್ಚು ವಿಸ್ತೃತ ಆವೃತ್ತಿಯು ಅವರು ಬಿಜೆಪಿ ಅಥವಾ ಟಿಎಂಸಿಗೆ ಮತ ಹಾಕಬೇಡಿ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರಿಗೆ ಸಲಹೆ ನೀಡಿದ್ದಾರೆ ಎಂಬುದು ತಿಳಿದುಬರುತ್ತದೆ.
2024ರ ಏಪ್ರಿಲ್ 30 ರಂದು “ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ವೆಸ್ಟ್ ಬೆಂಗಾಲ್” ಫೇಸ್ ಬುಕ್ ಪುಟದಲ್ಲಿ ಅಧೀರ್ ರಂಜನ್ ಚೌಧರಿ ಅವರ ಸಂಪೂರ್ಣ ಭಾಷಣವನ್ನು ಲೈವ್-ಸ್ಟ್ರೀಮ್ ಮಾಡಲಾಗಿದೆ. ಶೀರ್ಷಿಕೆಯ ಪ್ರಕಾರ, ಚೌಧರಿ ಅವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಲೋಕಸಭಾ ಕ್ಷೇತ್ರ ಜಂಗಿಪುರದ ಲಾಲ್ಗೊಲಾದಲ್ಲಿ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕಾಂಗ್ರೆಸ್-ಎಡ ಪಕ್ಷಗಳ ಅಭ್ಯರ್ಥಿ ಮುರ್ತಾಜಾ ಹೊಸೈನ್ (ಬೋಕುಲ್) ಬೆಂಬಲಿಸಿ ಮಾಡಲಾಗಿರುವ ಸದರಿ ಭಾಷಣವು 26:29 ನಿಮಿಷಗಳವರೆಗೆ ಇದೆ ಮತ್ತು ವೈರಲ್ ಕ್ಲಿಪ್ ಅನ್ನು 25:17-ನಿಮಿಷದಿಂದ 26:18-ನಿಮಿಷದ ಭಾಗದಿಂದ ಎಡಿಟ್ ಮಾಡಲಾಗಿದೆ.
ಪೂರ್ಣ ವಿಡಿಯೋದಲ್ಲಿ, ಅಧೀರ್ ರಂಜನ್ ಚೌಧರಿ ಅವರು “ಸಮೀಕ್ಷೆಗಳ ಪ್ರಕಾರ ಮೋದಿ ಈಗಾಗಲೇ 100 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ ಮತ್ತು ಹೆಚ್ಚು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳುತ್ತವೆ. ಆದ್ದರಿಂದ, ತಪ್ಪು ಮಾಡಬೇಡಿ. ಇದು ಮುಖ್ಯವಾಗಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಗೆಲ್ಲದಿದ್ದರೆ, ಟಿಎಂಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ. ಟಿಎಂಸಿ ಅಲ್ಲ, ಬಿಜೆಪಿ ಅಲ್ಲ, ಬೊಕುಲ್‌ಗೆ ಮತ ನೀಡಿ, ಅವರು ಸುಖ, ದುಃಖ ಮತ್ತು ಎಲ್ಲ ಸಮಯದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ, ನೀವು ಬೋಕುಲ್ ಅವರನ್ನು ನಂಬಬಹುದು, ಅವರನ್ನು ಬೆಂಬಲಿಸಬಹುದು, ಅವರಿಗಾಗಿ ಪ್ರಾರ್ಥಿಸಬಹುದು ಮತ್ತು ಆಶೀರ್ವದಿಸಬಹುದು” ಎಂದು ಹೇಳಿದ್ದಾರೆ.
ಸಂಪೂರ್ಣ ಭಾಷಣದಲ್ಲಿ ಅಧೀರ ರಂಜನ್ ಚೌಧರಿ ಅವರು ಎಲ್ಲಿಯೂ ಬಿಜೆಪಿಯನ್ನು ಬೆಂಬಲಿಸಿಲ್ಲ. ಬದಲಾಗಿ, ಬಿಜೆಪಿ ಮತ್ತು ಟಿಎಂಸಿಗೆ ಮತ ಹಾಕಬೇಡಿ ಎಂದು ಅವರು ಜನರನ್ನು ಸ್ಪಷ್ಟವಾಗಿ ಕೋರಿದ್ದಾರೆ.
ಈ ವಿವಾದ ಕುರಿತು ಸ್ಪಷ್ಟ್ರೀಕರಣ ನೀಡಿರುವ ಪಶ್ಚಿಮ ಬಂಗಾಳ ಕಾಂಗ್ರೆಸ್, ಅಧೀರ್ ರಂಜನ್ ಚೌಧರಿ ಅವರ ಭಾಷಣದ ಒಂದು ನಿಮಿಷದ ವೀಡಿಯೊವನ್ನು ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದಿದೆ. “ಈ ತಿರುಚಲಾದ ವೀಡಿಯೊದ ಬಗ್ಗೆ ನಾವು ಭಾರತೀಯ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದ್ದೇವೆ, ಅವರ ಮಧ್ಯಪ್ರವೇಶವನ್ನು ಕೋರಿದ್ದೇವೆ ಮತ್ತು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಕೇಳಿದ್ದೇವೆ” ಎಂದು ಹೇಳಿದೆ.
ಇನ್ನು ಮೇ 2 ರಂದು, ಕಾಂಗ್ರೆಸ್ ಸಹ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ವೈರಲ್ ಆಗಿರುವ ವಿಡಿಯೋ ತುಣಕನ್ನು ಚೌಧರಿ ಅವರ ಭಾಷಣದಿಂದ ಎಡಿಟ್ ಮಾಡಲಾಗಿದೆ ಮತ್ತು ಪೂರ್ಣ ಸಂದರ್ಭವನ್ನು ಒದಗಿಸದೆ ಹಂಚಿಕೊಳ್ಳಲಾಗಿದೆ ಎಂದು ಹೇಳಿದೆ. “ತೃಣಮೂಲ ಮತ್ತು ಬಿಜೆಪಿ ಸಮಾನಾರ್ಥಕ ಪದಗಳು. ತೃಣಮೂಲಕ್ಕೆ ಮತ ಹಾಕುವುದು ಎಂದರೆ ಬಿಜೆಪಿಗೆ ಮತ ಹಾಕುವುದು ಎಂದರೆ ಅವರಿಬ್ಬರಿಗೂ ರಹಸ್ಯ ತಿಳುವಳಿಕೆ ಇದೆ. ಅವು ಒಟ್ಟಿಗೆ ಹೋಗುತ್ತವೆ” ಎಂದು ಚೌಧರಿ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಪದೇ ಪದೇ ಹೇಳುತ್ತಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಇತ್ತೀಚಿನ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜ್ ಚೌಧರಿ ಮಾಡಿದ ಭಾಷಣದ ತಿರುಚಿದ ವೀಡಿಯೊವನ್ನು ಸುಳ್ಳು ಸಂದರ್ಭದೊಂದಿಗೆ ಹಂಚಿಕೊಳ್ಳಲಾಗಿದೆ, ಅವರು ಬಿಜೆಪಿಗೆ ಮತ ಕೇಳುತ್ತಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ. ಈ ತುಣುಕನ್ನು ಚೌಧರಿ ಅವರು ಬಿಜೆಪಿ ಅಥವಾ ಟಿಎಂಸಿಗೆ ಮತ ಹಾಕದಂತೆ ಜನರಿಗೆ ಸಲಹೆ ನೀಡುತ್ತಿದ್ದ ಭಾಷಣದಿಂದ ಹೊರತೆಗೆಯಲಾಗಿದೆ. ಪರಿಣಾಮವಾಗಿ, ಈ ಹೇಳಿಕೆ ತಪ್ಪುದಾರಿಗೆಳೆಯುವ ದುರುದದೇಶದಿಂದ ಕೂಡಿದೆ ಎಂದು ಹೇಳಬಹುದು.




