ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ನಕಲಿ ಸುದ್ದಿಗಳ ಹಾವಳಿಯನ್ನು ತಡೆಗಟ್ಟುವ ದೃಷ್ಟಿಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಫ್ಯಾಕ್ಟ್ ಚೆಕ್ ವಿಭಾಗವನ್ನು ಸ್ಥಾಪಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ವೇಗವಾಗಿ ಜನರನ್ನು ಮುಟ್ಟುತ್ತಿದೆ. ಹಿಂದಿನ ದಿನಗಳಲ್ಲಿ ಸುದ್ದಿಗಾಗಿ ಟಿವಿ, ಪತ್ರಿಕೆಗಳು ಮತ್ತು ರೇಡಿಯೋವನ್ನು ಅವಲಂಬಿಸಬೇಕಿತ್ತು. ಈಗ ಅದಕ್ಕಿಂತಲೂ ವೇಗವಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ದೊರೆಯುತ್ತಿದೆ ಎಂದರು.
ಸಾಮಾಜಿಕ ಜಾಲತಾಣದಿಂದ ಉಪಯೋಗದ ಜೊತೆಗೆ ಕೆಟ್ಟ ಪರಿಣಾಮವೂ ಇದೆ. ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದರೆ ಉಪಯೋಗವಾಗಲಿದೆ. ಇಲ್ಲವಾದರೆ ನಕಲಿ ಸುದ್ದಿಗಳು ಸಮಾಜಕ್ಕೆ ತೊಂದರೆಯುಂಟು ಮಾಡುತ್ತವೆ. ಇವುಗಳನ್ನು ಪರಿಶೀಲಿಸಲು ಮತ್ತು ನಿಯಂತ್ರಿಸಲು ಪ್ರತೀ ಜಿಲ್ಲಾ ಕೇಂದ್ರದಲ್ಲೂ ವಿಶೇಷ ಘಟಕಗಳನ್ನು ಆರಂಭಿಸಿದ್ದೇವೆ ಎಂದರು.
ನಕಲಿ ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾರು ಹಿತವರೋ ಅವರ ಪರವಾಗಿ ಹೆಚ್ಚು ಪ್ರಚಾರಗಳಾಗುತ್ತವೆ. ವಿರುದ್ಧವಾಗಿರುವವರನ್ನು ಟೀಕಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಬೇಡ ಎಂದು ಹೇಳುವ ಪರಿಸ್ಥಿತಿ ಈಗಿಲ್ಲ. ಆದರೆ ಅವುಗಳ ಮೇಲೆ ನಿಯಂತ್ರಣ ಅಗತ್ಯವಿದೆ ಎಂದರು.
ತಾವು ಸಾಮಾಜಿಕ ಜಾಲತಾಣವನ್ನು ನೋಡುವುದನ್ನೇ ಬಿಟ್ಟಿದ್ದೇನೆ. ಮೊಬೈಲ್ ಫೋನ್ ಕೂಡ ಇಟ್ಟುಕೊಂಡಿಲ್ಲ. ಈ ಮೊದಲು ಆರು ತಿಂಗಳ ಕಾಲ ಮೊಬೈಲ್ ಇಟ್ಟುಕೊಂಡಿದ್ದೆ. ಆಗ ರಾತ್ರಿಯೆಲ್ಲಾ ಕರೆಗಳು ಬರುತ್ತಿದ್ದವು. ನಿದ್ರೆ ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ಫೋನ್ ಬಳಕೆ ನಿಲ್ಲಿಸಿದ್ದೇನೆ. ಸಿಬ್ಬಂದಿ ಮತ್ತು ಅಂಗರಕ್ಷಕರ ಫೋನ್ಗಳ ಮೂಲಕವೇ ನಾನು ಸಂಪರ್ಕ ಸಾಧಿಸುತ್ತೇನೆ ಎಂದರು.




