ಎಲ್ಲರಿಗೂ ನಮಸ್ಕಾರ, ಹುಟ್ಟುಹಬ್ಬ ಎಲ್ಲರ ಪಾಲಿಗೆ ಸಂಭ್ರಮದ ದಿನ. ಪ್ರತಿ ವರ್ಷವೂ ಹೊಸ ಅನುಭವ, ಹೊಸ ಕಲಿಕೆಯನ್ನು, ನಮ್ಮ ಜೀವನದ ಮಜಲನ್ನು, ಸಾರ್ಥಕತೆಯನ್ನು ಒರೆಗೆ ಹಚ್ಚುವ ಹಾಗೂ ನಮ್ಮವರೊಂದಿಗೆ ಆನಂದಿಸುವ ದಿನವೂ ಹೌದು. ಆದರೆ ನಿಮಗೆಲ್ಲ ತಿಳಿದಿರುವ ಹಾಗೆ, ಹಲವು ವರ್ಷಗಳಿಂದ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೇ, ಈ ಬಾರಿಯೂ ನನ್ನ ಹುಟ್ಟುಹಬ್ಬದ ಆಚರಣೆಯಿಂದ ದೂರವೇ ಇರಲು ನಿರ್ಧರಿಸಿದ್ದೇನೆ. ಹಿಂದಿನಂತೆ ಈ ವರ್ಷ ಕೂಡ ನಿಮ್ಮ ಸಹಕಾರ, ಪ್ರೀತಿ ಹಾಗೂ ತಾಳ್ಮೆ ನನ್ನೊಂದಿಗೆ ಹೀಗೇ ಇರಲಿ ಎಂದು ಕೇಳಿಕೊಳ್ಳುತ್ತೇನೆ.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಈಗಾಗಲೇ ಅನೇಕ ಆತ್ಮೀಯರು ಹುಟ್ಟುಹಬ್ಬವನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ದಯಮಾಡಿ ಇಂತಹ ಆಚರಣೆಗಳಿಗೆ ನಿಮ್ಮ ಶ್ರಮ ಹಾಕಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿ, ಹಾರೈಕೆ, ಅಭಿಮಾನವೇ ನನಗೆ ಸಮ್ಮಾನ ಹಾಗೂ ಸಂಭ್ರಮ.
ಹುಟ್ಟುಹಬ್ಬದ ಆಚರಣೆಯನ್ನು ಮಾಡಲೇಬೇಕು ಎಂದು ನೀವು ನಿರ್ಧರಿಸಿದ್ದರೆ, ನಿಮ್ಮ ಪರಿಶ್ರಮವು ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ರೀತಿಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ವಿನಿಯೋಗವಾಗಲಿ ಎಂದು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ.
ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಮತ್ತು ನಮ್ಮ ಕುಟುಂಬ ಸದಾ ಚಿರಋಣಿಯಾಗಿರಲಿದೆ. ಧನ್ಯವಾದಗಳು.
ಇಂತಿ ನಿಮ್ಮ
ಪ್ರಿಯಾಂಕ್ ಖರ್ಗೆ




