ಕೆ.ಜಿ.ಎಫ್ ಎಸ್.ಪಿ. ಕಛೇರಿ ಸ್ಥಳಾಂತರ ವಿರುದ್ದ ಪ್ರತಿಭಟನೆ

4 years ago

ಬೆಂಗಳೂರು: ಕೆ.ಜಿ.ಎಫ್ ಎಸ್.ಪಿ. ಕಛೇರಿ ಸ್ಥಳಾಂತರ ವಿರುದ್ದ ಮೈಸೂರು ಬ್ಯಾಂಕ್ ವೃತ್ತದಲ್ಲಿ ದಲಿತ್ ಟೈಗರ್ಸ್ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವವವನ್ನು ದಲಿತ್ ಟೈಗರ್ಸ್ ರಾಜ್ಯಾಧ್ಯಕ್ಷ ಅರುಣ್ ವಹಿಸಿಕೊಂಡಿದ್ದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಿದ ಅರುಣ್, ಕೆ.ಜಿ.ಎಫ್ ಚಿನ್ನದ ಗಣಿ ಹೊಂದಿರುವ ಚಿನ್ನದ ನಾಡು. ಆದರೆ ಅಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚು ಮತ್ತು ಸಾರ್ವಜನಿಕರು ನಿರ್ಭೀತಿಯಿಂದ ಓಡಾಡಲು ಸಾಧ್ಯವಿಲ್ಲದಂತ ಕಠಿಣ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಎಸ್.ಪಿ. ಕಛೇರಿ ಸ್ಥಳಾಂತರ ಮಾಡಿದರೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ. ಗೃಹ ಸಚಿವರು ಕೊಡಲೆ ಗಮನಹರಿಸಿ ಎಸ್.ಪಿ.ಕಛೇರಿ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದರು.

Leave a Reply