1000 ಸಾರ್ವಜನಿಕರಿಗೆ ಕೊವಿಡ್ -19 ಲಸಿಕೆ
ಬೆಂಗಳೂರು: ಪ್ರತಿಯೊಬ್ಬ ನಾಗರಿಕರು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಿ, ಕೊರೋನ ವೈರಸ್ ಮುಕ್ತ ಹೋರಾಟಕ್ಕೆ ಭಾಗಿಯಾಗಿ ಎಂದು ಬಿ.ಬಿ.ಎಂ.ಪಿ.ಯ ಗಣೇಶ ಮಂದಿರ ವಾರ್ಡ್ ನ ಮಾಜಿ ಸದಸ್ಯೆ ಲಕ್ಷ್ಮೀ ಉಮೇಶ್ ಕರೆನೀಡಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ, ಗಣೇಶ ಮಂದಿರ ವಾರ್ಡ್-165ರಲ್ಲಿ ಬದಲಾಗಿ, ಬದಲಾಗಿಸೋಣ (Let’s be the change) ಸಹಯೋಗದಲ್ಲಿ ಉಚಿತವಾಗಿ ಬಿ.ಪಿ.ಎಲ್.ಕಾರ್ಡ್ ಇರುವ 18 ವರ್ಷ ಮೇಲ್ಪಟ್ಟವರಿಗೆ ಮತ್ತು 45ವರ್ಷ ಮೇಲ್ಪಟ್ಟವರಿಗೆ ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು 1000 ಜನರಿಗೆ ನೀಡುವ ಕಾರ್ಯಕ್ರಮ ಮತ್ತು ಕೋವಿಡ್-19ರ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತಾಡಿದ ಲಕ್ಷ್ಮಿ, ಕೊರೋನ ಎಂಬ ಸಾಂಕ್ರಮಿಕ ರೋಗದಿಂದ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ. ಪ್ರಧಾನಿ ನರೇಂದ್ರ ಮೋದಿಯವರ ಅಭಿಲಾಷೆಯಂತೆ ಭಾರತದ ಪ್ರತಿಯೊಬ್ಬ ನಾಗರಿಕರು ಲಸಿಕೆ ಪಡೆಯಬೇಕು ಎಂದು ಉಚಿತವಾಗಿ ನೀಡಲಾಗುತ್ತಿದೆ. ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಲಸಿಕೆ ನೀಡುವ ಅಭಿಯಾನ ಮತ್ತು ಕೊವಿಡ್ -19ರ ಬಗ್ಗೆ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಕೊರೋನ ಬಗ್ಗೆ ಜಾಗ್ರತೆಯಾಗಿಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಕೊವಿಡ್-19 ಲಸಿಕೆ ಪಡೆದುಕೊಳ್ಳಿ. ಜನರ ಸಹಕಾರದಿಂದ ಮಾತ್ರ ಕೊವಿಡ್ -19 ಸಾಂಕ್ರಮಿಕ ರೋಗ ಮುಕ್ತ ಮಾಡಬಹುದು ಎಂದರು.
ಬಿ.ಜೆ.ಪಿ. ಮುಖಂಡರಾದ ಉಮೇಶ್ ಕಬ್ಬಾಳ್, ಆರೋಗ್ಯ ಮುಖ್ಯಾಧಿಕಾರಿ ಸುರೇಶ್ ಹಾಗೂ Lets be the change ಸಂಘಟನೆಯ ಅನಿರುದ್ದ ದತ್ತ ಮತ್ತು ಪದಾಧಿಕಾರಿಗಳು, ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಸೋಮಶೇಖರ್ ಲಸಿಕಾ ಕಾರ್ಯಕ್ರಮ ಮತ್ತು ಕೊವಿಡ್-19 ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.




