ಕೊರೊನಾ 2ನೇ ಅಲೆ: ನೂತನ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

5 years ago

ಬೆಂಗಳೂರು: ದೇಶಾದ್ಯಂತ ಕೊರೊನಾ 2ನೇ ಅಲೆಯ ಅಬ್ಬರ ಏರುಗತಿಯಲ್ಲಿದ್ದು, ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ರಾಜ್ಯದಲ್ಲಿ  ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಏಪ್ರಿಲ್ 21ರಿಂದ  ಮೇ 4ರವರೆಗೂ ಸರ್ಕಾರ ಕಠಿಣ ನಿಯಮಗಳನ್ನು ಘೋಷಸಿಲಾಗಿದೆ.

ಸರ್ಕಾರ ರೂಪಿಸಿರುವ ಪ್ರಮುಖವಾದ ನೂತನ ಹೊಸ ಮಾರ್ಗಸೂಚಿ

ರಾಜ್ಯದಲ್ಲಿ  ಸೆಕ್ಷನ್‌ 144 ಜಾರಿ

‌ಮದುವೆ ಸಮಾರಂಭಗಳಲ್ಲಿ ಕೇವಲ 50 ಜನರಿಗೆ ಸೀಮಿತಿ ಅವಕಾಶ

ಶನಿವಾರ ಭಾನುವಾರ ದಿನಸಿ, ತರಕಾರಿ, ಹಾಲು ಅಂಗಡಿಗಳು 6ರಿಂದ 10ರವರೆಗೆ ಮಾತ್ರ ತೆರೆಯಲು ಅವಕಾಶ

ಶಾಲೆ, ಕಾಲೇಜು, ಸಿನಿಮಾ ಹಾಲ್, ಮಾಲ್, ಈಜುಕೊಳ,‌ ಧಾರ್ಮಿಕ ಸ್ಥಳ, ಹೋಟೆಲ್ ಬಂದ್

ಬಾರ್, ಲಿಕರ್ ಶಾಪ್ ನಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ

ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ

ಬೆಂಗಳೂರಿನ ಮಾರುಕಟ್ಟೆಗಳು 14 ದಿನಗಳವರೆಗೂ ಬೇರೆ ಕಡೆಗೆ ಸ್ಥಳಾಂತರ

Leave a Reply