ಬೆಂಗಳೂರು: ನಟಿ ಅನುಪ್ರಭಾಕರ್ ಅವರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಈ ಸಂಗತಿಯನ್ನು ಸ್ವತಃ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, 17/4/2021ರಂದು ನನಗೆ ಕೊರೊನಾ ಪಾಸಿಟಿವ್ ಇರುವ ಅಂಶ ದೃಢಪಟ್ಟಿದೆ. ಆದರೆ, ನನಗೆ ಎಸ್ ಆರ್ ಎಫ್ ಐಡಿಯನ್ನು ನೀಡಿಲ್ಲ. ಬಿಬಿಎಂಪಿ ಸಿಬ್ಬಂದಿ ಇದುವರೆಗೆ ನನ್ನನ್ನು ಸಂಪರ್ಕಿಸಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮನವಿ ಮಾಡಿದ್ದಾರೆ.
https://twitter.com/AnuPrabhakar9/status/1384765147151958019?s=20



