ಕೊರೊನಾ ಕುರಿತು ತಜ್ಞರ ವರದಿ ನಿರ್ಲಕ್ಷ್ಯ: ರಾಮಲಿಂಗಾರೆಡ್ಡಿ

5 years ago

ಕೊವಿಡ್ ನಿಂದ ಮೃತಪಟ್ಟ 50 ಕುಟುಂಬದವರಿಗೆ ಸಹಾಯ ಹಸ್ತ ಮತ್ತು ದಿನಸಿ ಕಿಟ್ ವಿತರಣಾ ಕಾರ್ಯಕ್ರಮ

ಬೆಂಗಳೂರು: ಕೊರೋನ ಸಾಂಕ್ರಮಿಕ ರೋಗ ಹೆಚ್ಚಳ ಬಗ್ಗೆ ತಜ್ಞರು ವರದಿ ಕೊಟ್ಟರೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲ್ಲಕ್ಷ್ಯದಿಂದ ಸರ್ಕಾರದ ವರದಿಯಲ್ಲಿ 4.5 ಲಕ್ಷ ಜನ ಮರಣ ಹೊಂದಿದ್ದಾರೆ. ಕರ್ನಾಟಕದಲ್ಲಿ ಒಂದೂವರೆ ಲಕ್ಷ ಜನ ಮರಣ ಹೊಂದಿದ್ದಾರೆ ಎಂಬ ವರದಿ ಇದೆ. ಆದರೆ 50 ಲಕ್ಷ ಸಾವುನ್ನಪ್ಪಿರುವ ಸಾಧ್ಯತೆ ಇದೆ. ಸರ್ಕಾರ ವರದಿಗಳನ್ನ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.

ಕೋವಿಡ್ ಎರಡನೇ ಅಲೆಯಲ್ಲಿ ನಿಧನ ಹೊಂದಿದ ಕುಟುಂಬದವರಿಗೆ ಆತ್ಮ ಸ್ಥೈರ್ಯ ತುಂಬಲು ಮತ್ತು ಸಹಾಯವನ್ನು ಮಾಡಲು ಸಹಾಯ ಹಸ್ತ ಕಾರ್ಯಕ್ರಮವನ್ನು ಶ್ರೀ ಜಯದುರ್ಗಾ ಕಲ್ಯಾಣಮಂಟಪ, ಕುರುಬರಹಳ್ಳಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿರವರು, ಸಹಾಯ ಹಸ್ತ ಪರಿವೀಕ್ಷಕ ಬಿ.ಎಲ್.ಶಂಕರ್, ಬೆಂಗಳೂರು ನಗರ ಉತ್ತರ ಜಿಲ್ಲಾ ಅಧ್ಯಕ್ಷ ರಾಜ್ ಕುಮಾರ್ ರವರು, ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಮಾಜಿ ಪಾಲಿಕೆ ಸದಸ್ಯ ಎಸ್.ಕೇಶವಮೂರ್ತಿರವರು, ಕೃಷ್ಣಮೂರ್ತಿರವರು ಸಹಾಯ ಹಸ್ತದ ಜೊತೆಯಲ್ಲಿ ದಿನಸಿ ಕಿಟ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ, ಕೊರೋನ ನಿಂದ ಮೃತ್ತಪಟ್ಟ ಒಂದು ಲಕ್ಷ ಪರಿಹಾರ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಎಂದು ಸರ್ಕಾರ ಘೋಷಣೆ  ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ ಐದು ಲಕ್ಷ ಪರಿಹಾರ ನೀಡಿ ಎಂದು ಒತ್ತಾಯಿಸುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೊರೋನ ಸಂದರ್ಭದಲ್ಲಿ ಆಹಾರ ಕಿಟ್ ಮತ್ತು ಆಹಾರ ಪ್ಯಾಕೇಟ್ ವಿತರಣೆ ಮತ್ತು ಸೋಂಕಿತರನ್ನ ಆಸ್ಪತ್ರೆ ಸೇರಿಸುವ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತಾಡಿದ ಬಿ.ಎಲ್.ಶಂಕರ್, ನೈಸರ್ಗಿಕ ವಿಪತ್ತು ಬಂದ ಸಂದರ್ಭದಲ್ಲಿ 2005ನೇ ಇಸವಿಯಲ್ಲಿ ರಾಷ್ಟೀಯ ವಿಪತ್ತು ನಿಧಿಯನ್ನು ಅಂದಿನ ಕಾಂಗ್ರೆಸ್ ಸರ್ಕಾರ ನೇತೃತ್ವದಲ್ಲಿ ಕಾನೂನು ರೂಪಿಸಲಾಯಿತು ಎಂದರು.

ಕೊರೋನದಿಂದ ಮೃತಪಟ್ಟವರ ಮಾಹಿತಿ ಮತ್ತು ಉದ್ಯೋಗ ಕಳೆದುಕೊಂಡವರ ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಕೊರೋನದಿಂದ ಮೃತಪಟ್ಟವರಿಗೆ ಐದು ಲಕ್ಷ ರೂಪಾಯಿಗಳು ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿ ಹಣವಿದೆ. ಪರಿಹಾರ ಕೊಡುವಲ್ಲಿ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.

ಎಮ್.ಶಿವರಾಜು ಮಾತನಾಡಿ, ಕೊರೋನ ಸಾಂಕ್ರಮಿಕ ರೋಗ ತಡೆಗಟ್ಟಲು ಮತ್ತು ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಕೆ.ಪಿ.ಸಿ.ಸಿ. ಅಧ್ಯಕ್ಷರ ಆದೇಶ ಮೇರೆಗೆ ಬಡವರಿಗೆ ಕಾಂಗ್ರೆಸ್ ಪಕ್ಷದಿಂದ ಸಹಾಯ ಹಸ್ತ ನೀಡಲು ಸತತವಾಗಿ ಜನರ ಬಳಿ ನಿಂತಿದೆ ಎಂದರು.

ರಾಜ್ ಕುಮಾರ್ ಮಾತನಾಡಿ, ಕೊರೋನ ಕಾರಣದಿಂದ ಲಾಕ್ ಡೌನ್ ಮಾಡಲಾಯಿತು. ಬಡವರಿಗೆ ಉದ್ಯೋಗವಿಲ್ಲ, ಆರ್ಥಿಕ ಸ್ಥಿತಿ ಸುಧಾರಣೆಯಾಗಿಲ್ಲ. ಬಡವರ ಕೈ ಹಿಡಿಯಬೇಕಾದ ಕೇಂದ್ರ  ಮತ್ತು ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಹಾಯ ಹಸ್ತ ಕಾರ್ಯಕ್ರಮ ಕೋವಿಡ್ ನಿಂದ ನೊಂದ ಕುಟುಂಬಗಳಿಗೆ ಆರ್ಥಿಕವಾಗಿ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಕೊರೋನ ಸಾಂಕ್ರಮಿಕ ರೋಗದಿಂದ ಮೃತಪಟ್ಟವರಿಗೆ ಒಂದು ನಿಮಿಷ ಮೌನಚರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Leave a Reply