ಬಿಜೆಪಿ ಅವಧಿಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಶೂನ್ಯ: ಅಬ್ದುಲ್ ವಾಜಿದ್

5 years ago

ಬೆಂಗಳೂರು: 2020-21ಸಾಲಿನಲ್ಲಿ ಬೆಂಗಳೂರು ನಗರ ಅಭಿವೃದ್ದಿ ಅಂದಾಜು 8,700 ಕೋಟಿ ರೂಪಾಯಿ ಅನುದಾನ ಬಜೆಟ್ ಮಂಡಿಸಲಾಗಿತ್ತು. ಈಗ 28 ವಿಧಾನಸಭಾ ಮತ್ತು 198 ವಾರ್ಡ್ ಗಳಿಗೆ 150 ಕೋಟಿ ರೂಪಾಯಿ ಅನುದಾನ ಮೀಸಲು ಇಡಲಾಗಿದೆ ಎಂದು ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜಿದ್ ಹೇಳಿದರು.

ಬೆಂಗಳೂರಿನಲ್ಲಿ ಈ ಕುರಿತು ಮಾತಾಡಿದ ಅವರು, ನಿಗದಿತ ಅನುದಾನದಲ್ಲಿ 20 ಲಕ್ಷ ಗುಂಡಿ ಮುಚ್ಚಲು, 20 ಲಕ್ಷ ಪುಟ್ ಪಾತ್ ದುರಸ್ತಿ ಕಾಮಗಾರಿಗೆ, 20 ಲಕ್ಷ ವಾರ್ಡ್ ಅಭಿವೃದ್ದಿಗೆ ನೀಡಲಾಗಿದೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದಾಗ ಹಳೆಯ ವಾರ್ಡ್ ಗಳಿಗೆ 2 ಕೋಟಿ ಮತ್ತು ಹೊಸ ವಾರ್ಡ್ ಗಳಿಗೆ 3 ಕೋಟಿ ನೀಡಲಾಗುತ್ತಿತ್ತು ಎಂದರು.

ಜೊತೆಗೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಮತ್ತು ಬೃಹತ್ ರಸ್ತೆ ಕಾಮಗಾರಿ ರಸ್ತೆ ಕಾಮಗಾರಿ ಸ್ಥಾಯಿ ಸಮಿತಿ ಮತ್ತು ವಾರ್ಡ್ ಮಟ್ಟದ ಸ್ಥಾಯಿ ಸಮಿತಿಗಳಿಂದ ವಿಶೇಷ ಅನುದಾನ ನೀಡಿ ವಾರ್ಡ್ ಅಭಿವೃದ್ದಿಗೆ, ಬೆಂಗಳೂರು ನಗರ ಸೌಂದರ್ಯಣಕ್ಕೆ ಹೆಚ್ಚು ಗಮನಹರಿಸಲಾಗಿತ್ತು ಎಂದರು.

ವೇಗವಾಗಿ ಬೆಳೆದಿರುವ ಬೆಂಗಳೂರು ನಗರಕ್ಕೆ ಸಮಸ್ಯೆಗಳು ನಿರಂತರ, ಸಮಸ್ಯೆಗಳ ನಿವಾರಣೆಗೆ ಅನುದಾನದಲ್ಲಿ ಅಭಿವೃದ್ದಿ ಕೆಲಸ ಮಾಡಬೇಕು. ಆದರೆ ಮುಖ್ಯ ಆಯುಕ್ತರು ವಾರ್ಡ್ ಅಭಿವೃದ್ದಿಗೆ ಅನುದಾನ ನೀಡದೇ ಇರುವುದರಿಂದ ಬೆಂಗಳೂರು ನಗರ ಅಭಿವೃದ್ದಿ ಶೂನ್ಯವಾಗಲಿದೆ ಮತ್ತು ವಾಣಿಜ್ಯ ಚಟುವಟಿಕೆ ಕುಂಠಿತವಾಗಿ ತೆರಿಗೆ ಸಂಗ್ರಹಕ್ಕೆ ಬಾರಿ ಹಿನ್ನಡೆಯಾಗಲಿದೆ ಎಂದು ಅವರು ಆರೋಪಿಸಿದರು.

Leave a Reply