ಬೆಳಗಾವಿಯಲ್ಲಿ ಪಂಚತಾರಾ ಶಾಸಕರ ಭವನ ನಿರ್ಮಾಣ

2 years ago

30 ವರ್ಷಗಳ ಕಾಲ ಖಾಸಗಿಯವರಿಗೆ ಕಟ್ಟಡ ಗುತ್ತಿಗೆ ಸಾಧ್ಯತೆ

ಬೆಂಗಳೂರು: ಬೆಳಗಾವಿಯಲ್ಲಿ ಪ್ರತಿವರ್ಷ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತದೆ. ಈ ಸಂದರ್ಭದಲ್ಲಿ ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲು ಸುವರ್ಣಸೌಧದ ಸಮೀಪದಲ್ಲೇ ಪಂಚತಾರಾ ಸೌಲಭ್ಯದ ಕಟ್ಟಡ ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಪ್ರತಿ ವರ್ಷ ಅಧಿವೇಶನದ ಸಂದರ್ಭದಲ್ಲಿ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ವಸತಿ ವ್ಯವಸ್ಥೆಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತದೆ. ಈ ಖರ್ಚುವೆಚ್ಚಗಳ ನಿಯಂತ್ರಣ ಮತ್ತು ವಸತಿ ಮಾಡುವುದು, ಅನಾನುಕೂಲ, ವೆಚ್ಚ ನಿಯಂತ್ರಣಕ್ಕಾಗಿ ಪಂಚತಾರಾ ಸೌಲಭ್ಯವುಳ್ಳ ಕಟ್ಟಡ ನಿರ್ಮಿಸುವುದು ಅನಿವಾರ್ಯ ಎಂಬ ವರದಿ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಇನ್ನು ಸುವರ್ಣಸೌಧದ ಬಳಿ 10 ಎಕರೆ ಸರ್ಕಾರಿ ಜಮೀನಿನಲ್ಲಿ ಹೊಟೇಲ್ ಮಾದರಿ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸುವ ಸಾಧ್ಯತೆ ಇದೆ.

ಕಟ್ಟಡದ ಜಮೀನು ಸರ್ಕಾರದ ಹೆಸರಿನಲ್ಲಿದ್ದು, ಖಾಸಗಿಯವರು ಹೊಟೇಲ್ ನಿರ್ಮಿಸಲಿದ್ದಾರೆ. 30 ವರ್ಷಗಳ ಕಾಲ ಖಾಸಗಿಯವರಿಗೆ ಕಟ್ಟಡ ಗುತ್ತಿಗೆ ನೀಡುವ ಯೋಚನೆ ಇದೆ. ಅಧಿವೇಶನ ವೇಳೆ ಈ ಕಟ್ಟಡವನ್ನು ಶಾಸಕರು, ಅಧಿಕಾರಿಗಳು, ಗಣ್ಯರ ವಾಸ್ತವ್ಯಕ್ಕೆ ಬಳಸಲಾಗುವುದು. ಉಳಿದ ಅವಧಿಯಲ್ಲಿ ಸಾರ್ವಜನಿಕರ ಬಳಕೆಗೆ ಪಂಚತಾರಾ ಹೊಟೇಲ್ ರೂಪದಲ್ಲಿ ಮುಕ್ತವಾಗಿರಲಿದೆ. ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ವಸತಿ ಹೊಟೇಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

Leave a Reply