ಭಾರತದ ಸಂವಿಧಾನ: ಅಧ್ಯಾಯ – II : ಸಂಸತ್ತು ಸಾಮಾನ್ಯ

2 years ago

೭೯. ಸಂಸತ್ತಿನ ರಚನೆ: ಒಕ್ಕೂಟವು ಒಂದು ಸಂಸತ್ತನ್ನು ಹೊಂದಿರತಕ್ಕದ್ದು ಮತ್ತು ಆ ಸಂಸತ್ತು ರಾಷ್ಟ್ರಪತಿಯನ್ನು ಹಾಗೂ ಅನುಕ್ರಮವಾಗಿ ರಾಜ್ಯಸಭೆ ಮತ್ತು ಲೋಕಸಭೆ ಎಂಬ ಹೆಸರÀÄಗಳನ್ನುಳ್ಳ ಎರಡು ಸದನಗಳನ್ನು ಹೊಂದಿರತಕ್ಕದ್ದು. 

೮೦. ರಾಜ್ಯಸಭೆಯ ರಚನೆ:(೧) (೧೯೭೪ನೆಯ ಇಸವಿಯ ಸಂವಿಧಾನ (ಮೂವತ್ತೆÊದನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ “ರಾಜ್ಯಸಭೆ” ಎಂಬ ಪದಕ್ಕೆ ಬದಲಾಗಿ (೧÷-೩-೭೫ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) [(೧೯೭೫ನೇ ಇಸವಿಯ ಸಂವಿಧಾನ (ಮೂವತ್ತಾರನೆಯ ತಿದ್ದುಪಡಿ) ಅಧಿನಿಯಮದ ೫ನೆಯ ಪ್ರಕರಣದ ಮೂಲಕ “ಹತ್ತನೇ ಅನುಸೂಚಿಯ ೪ನೇ ಪ್ಯಾರಾದ ಉಪಬಂಧಗಳಿಗೆ ಒಳಪಟ್ಟು” ಎಂಬ ಪದಗಳನ್ನು (೨೬-೪-೭೫ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.)  * * * * ರಾಜ್ಯಸಭೆಯು]- (ಎ) (೩)ನೆಯ ಖಂಡದ ಉಪಬಂಧಗಳಿಗನುಸಾರ ರಾಷ್ಟ್ರಪತಿಯು ನಾಮನಿರ್ದೇಶನ ಮಾಡತಕ್ಕ ಹನ್ನೆರಡು ಜನ ಸದಸ್ಯರನ್ನು; ಮತ್ತು (ಬಿ) ರಾಜ್ಯಗಳಿಂದ (೧೯೫೬ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) [ಮತ್ತು ಒಕ್ಕೂಟ ರಾಜ್ಯಕ್ಷೇತ್ರಗಳಿಂದ] ಇನ್ನೂರ ಮೂವತ್ತೆಂಟಕ್ಕೆ ಮೀರದಷ್ಟು ಪ್ರತಿನಿಧಿಗಳನ್ನು – ಒಳಗೊಂಡಿರತಕ್ಕದ್ದು. (೨) ರಾಜ್ಯಗಳ (೧೯೫೬ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) [ಮತ್ತು ಒಕ್ಕೂಟ ರಾಜ್ಯಕ್ಷೇತ್ರಗಳ] ಪ್ರತಿನಿಧಿಗಳಿಂದ ಭರ್ತಿಯಾಗಬೇಕಾದ ರಾಜ್ಯಸಭೆಯಲ್ಲಿನ ಸ್ಥಾನಗಳ ಹಂಚಿಕೆಯನ್ನು ನಾಲ್ಕನೆಯ ಅನುಸೂಚಿಯಲ್ಲಿ ಅಡಕವಾಗಿರುವ ಆ ಬಗೆಗಿನ ಉಪಬಂಧಗಳಿಗನುಸಾರ ಮಾಡತಕ್ಕದ್ದು. (೩) (೧)ನೆಯ ಖಂಡದ (ಎ) ಉಪಖಂಡದ ಮೇರೆಗೆ ರಾಷ್ಟ್ರಪತಿಯು, ನಾಮನಿರ್ದೇಶನ ಮಾಡುವ ಸದಸ್ಯರು, ಈ ಮುಂದಿನ ವಿಷಯಗಳಿಗೆ ಸಂಬಂಧಿಸಿದಂತೆ, ಎಂದರೆ:- ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದವರಾಗಿರತಕ್ಕದ್ದು. (೪) ರಾಜ್ಯಸಭೆಯಲ್ಲಿನ (೧೯೫೬ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ “ಮೊದಲನೆಯ ಅನುಸೂಚಿಯ `ಎ’ ಭಾಗ ಅಥವಾ `ಬಿ’ ಭಾಗದಲ್ಲಿ ನಿರ್ದಿಷ್ಟಪಡಿಸಿದ” ಎಂಬ ಪದಗಳನ್ನು ಮತ್ತು ಅಕ್ಷರಗಳನ್ನು ಬಿಟ್ಟುಬಿಡಲಾಗಿದೆ.) [* * * * *] ಪ್ರತಿಯೊಂದು ರಾಜ್ಯದ ಪ್ರತಿನಿಧಿಗಳು ಆಯಾ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರಿಂದ ಏಕವರ್ಗಾವಣೀಯ ಮತದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ಚುನಾಯಿತರಾಗತಕ್ಕದ್ದು. (೫) ರಾಜ್ಯಸಭೆಯಲ್ಲಿನ (೧೯೫೬ನೆಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿಯಮದ ೩ನೆಯ ಪ್ರಕರಣದ ಮೂಲಕ “ಮೊದಲನೆಯ ಅನುಸೂಚಿಯ `ಸಿ’ ಭಾಗದಲ್ಲಿ ನಿರ್ದಿಷ್ಟಪಡಿಸಿದ ರಾಜ್ಯಗಳು” ಎಂಬ ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [ಒಕ್ಕೂಟ ರಾಜ್ಯಕ್ಷೇತ್ರಗಳ] ಪ್ರತಿನಿಧಿಗಳು, ಸಂಸತ್ತು ಕಾನೂನಿನ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಆಯ್ಕೆ ಆಗತಕ್ಕದ್ದು.

[೮೧. ಲೋಕಸಭೆಯ ರಚನೆ: (೧೯೫೬ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿಯಮದ ೪ನೆಯ ಪ್ರಕರಣದ ಮೂಲಕ ೮೧ನೆಯ ಮತ್ತು ೮೨ನೆಯ ಅನುಚ್ಫೇದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (೧) (೧೯೭೪ನೆಯ ಇಸವಿಯ ಸಂವಿಧಾನ (ಮೂವತ್ತೈದನೆಯ ತಿದ್ದುಪಡಿ) ಅಧಿನಿಯಮದ ೪ನೆಯ ಪ್ರಕರಣದ ಮೂಲಕ “೩೩೧ನೆಯ ಅನುಚ್ಫೇದದ ಉಪಬಂಧಗಳಿಗೆ ಒಳಪಟ್ಟು” ಎಂಬ ಪದಗಳಿಗೆ ಬದಲಾಗಿ (೧-೩-೭೫ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) [೩೩೧ನೆಯ ಅನುಚ್ಫೇದದ (೧೯೭೫ನೆ ಇಸವಿಯ ಸಂವಿಧಾನ (ಮೂವತ್ತಾರೆನೆಯ ತಿದ್ದುಪಡಿ) ಅಧಿನಿಯಮದ ೫ನೇ ಪ್ರಕರಣದ ಮೂಲಕ ಮತ್ತು ಹತ್ತನೇ ಅನುಸೂಚಿಯ ೪ನೇ ಪ್ಯಾರಾದ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು (೨೬-೪-೭೫ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.) * * * ಉಪಬಂಧಗಳಿಗೊಳಪಟ್ಟು] ಲೋಕಸಭೆಯು,- (ಎ) ರಾಜ್ಯಗಳಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ನೇರ ಚುನಾವಣೆಯ ಮೂಲಕ ಆಯ್ಕೆಯಾದ (೧೯೮೭ನೇ ಇಸವಿಯ ಗೋವಾ, ದಾಮನ್ ಮತ್ತು ದೀವ್ ಪುನಾರಚನೆ ಅಧಿನಿಯಮದ (೧೯೮೭ರ ೧೮) ೬೩ನೇ ಪ್ರಕರಣದ ಮೂಲಕ “ಐದುನೂರ ಇಪ್ಪತ್ತೈದು ಸದಸ್ಯರು” ಎಂಬುದಕ್ಕೆ ಬದಲಾಗಿ (೩೦-೫-೧೯೮೭ ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) [ಐನೂರ ಮೂವತ್ತಕ್ಕಿಂತ] ಹೆಚ್ಚಲ್ಲದಷ್ಟು ಸದಸ್ಯರನ್ನು, ಮತ್ತು (ಬಿ) ಒಕ್ಕೂಟ ರಾಜ್ಯಕ್ಷೇತ್ರಗಳನ್ನು ಪ್ರತಿನಿಧಿಸಲು, ಸಂಸತ್ತು ಕಾನೂನಿನ ಮೂಲಕ ಉಪಬಂಧಿಸಬಹುದಾದಂಥ ರೀತಿಯಲ್ಲಿ ಆಯ್ಕೆಯಾದ (೧೯೭೩ನೇ ಇಸವಿಯ ಸಂವಿಧಾನ (ಮೂವತ್ತೊಂದನೆಯ ತಿದ್ದುಪಡಿ) ಅಧಿನಿಯಮದ ೨ನೆಯ ಪ್ರಕರಣದ ಮೂಲಕ “ಇಪ್ಪತ್ತೈದು ಸದಸ್ಯರು” ಎಂಬ ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [ಇಪ್ಪತ್ತಕ್ಕಿಂತ] ಹೆಚ್ಚಲ್ಲದಷ್ಟು ಸದಸ್ಯರನ್ನು – ಒಳಗೊಂಡಿರತಕ್ಕದ್ದು. (೨) (೧) ನೆಯ ಖಂಡದ (ಎ) ಉಪಖಂಡದ ಉದ್ದೇಶಗಳಿಗಾಗಿ,- (ಎ) ಲೋಕಸಭೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಇರಬೇಕಾದ ಸ್ಥಾನಗಳ ಸಂಖ್ಯೆಯನ್ನು, ಆ ಸಂಖ್ಯೆ ಮತ್ತು ಆ ರಾಜ್ಯದ ಜನಸಂಖ್ಯೆ – ಇವೆರಡರ ನಡುವಣ ಅನುಪಾತವು, ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ, ಎಲ್ಲ ರಾಜ್ಯಗಳಿಗೂ ಒಂದೇ ಆಗಿರುವಂಥ ರೀತಿಯಲ್ಲಿ ಹಂಚಿಕೆ ಮಾಡತಕ್ಕದ್ದು; ಮತ್ತು (ಬಿ) ಪ್ರತಿಯೊಂದು ಚುನಾವಣಾ ಕ್ಷೇತ್ರದ ಜನಸಂಖ್ಯೆ ಮತ್ತು ಅದಕ್ಕೆ ಹಂಚಲಾದ ಸ್ಥಾನಗಳ ಸಂಖ್ಯೆ – ಇವೆರಡರ ನಡುವಣ ಅನುಪಾತವು, ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ, ರಾಜ್ಯದಾದ್ಯಂತ ಒಂದೇ ಆಗಿರುವಂಥ ರೀತಿಯಲ್ಲಿ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸತಕ್ಕದ್ದು: (೧೯೭೩ನೆಯ ಇಸವಿಯ ಸಂವಿಧಾನ (ಮೂವತ್ತೊಂದನೆಯ ತಿದ್ದುಪಡಿ) ಅಧಿನಿಯಮದ ೨ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) [ಪರಂತು, ಲೋಕಸಭೆಯಲ್ಲಿ ಸ್ಥಾನಗಳನ್ನು ಹಂಚಿಕೆ ಮಾಡುವ ಉದ್ದೇಶಕ್ಕಾಗಿ ಯಾವುದೇ ರಾಜ್ಯಕ್ಕೆ, ಆ ರಾಜ್ಯದ ಜನಸಂಖ್ಯೆಯು, ಅರವತ್ತು ಲಕ್ಷ ಮೀರದಿರುವವರೆಗೆ ಈ ಖಂಡದ (ಎ) ಉಪಖಂಡದ ಉಪಬಂಧಗಳು ಆ ರಾಜ್ಯಕ್ಕೆ ಅನ್ವಯವಾಗತಕ್ಕದ್ದಲ್ಲ.] (೩) ಈ ಅನುಚ್ಫೇದದಲ್ಲಿ “ಜನಸಂಖ್ಯೆ” ಎಂದರೆ ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಹಿಂದಿನ ಕೊನೆಯ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ: (೧೯೭೬ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೧೫ನೆಯ ಪ್ರಕರಣದ ಮೂಲಕ (೩.೧.೭೭ ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) [ಪರಂತು, ಈ ಖಂಡದಲ್ಲಿ ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಗೆ ಮಾಡಿದ ಉಲ್ಲೇಖವನ್ನು (೨೦೦೧ನೆಯ ಇಸವಿಯ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ “೨೦೦೦”ದ ಎಂಬ ಅಂಕಿಗಳಿಗೆ ಮತ್ತು ಅಕ್ಷರಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [೨೦೨೬ ನೆಯ] ಇಸವಿಯ ತರುವಾಯ ಮೊದಲನೇ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, – [(i) (೨)ನೇ ಖಂಡದ (ಎ) ಉಪಖಂಡದ ಮತ್ತು ಆ ಖಂಡದ ಪರಂತುಕದ ಉದ್ದೇಶಗಳಿಗಾಗಿ, ೧೯೭೧ರ ಜನಗಣತಿಗೆ ಮಾಡಿದ ಉಲ್ಲೇಖವೆಂದು; ಮತ್ತು (ಅದೇ ೩ನೆಯ ಪ್ರಕರಣದ ಮೂಲಕ ಕೆಲವು ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (ii) (೨)ನೇ ಖಂಡದ (ಬಿ) ಉಪಖಂಡದ ಉದ್ದೇಶಗಳಿಗಾಗಿ, [೨೦೦೧ರ] (೨೦೦೩ನೆಯ ಇಸವಿಯ ಸಂವಿಧಾನ (ಎಂಬತ್ತೇಳನೆಯ ತಿದ್ದುಪಡಿ) ಅಧಿನಿಯಮದ ೨ನೆಯ ಪ್ರಕರಣದ ಮೂಲಕ “೧೯೯೧ರ” ಎಂಬ ಅಂಕಿಗಳಿಗೆ ಮತ್ತು ಅಕ್ಷರಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಜನಗಣತಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.]]

೮೨. ಪ್ರತಿಯೊಂದು ಜನಗಣತಿಯ ತರುವಾಯ ಮರು ಹೊಂದಾಣಿಕೆ: –  ಪ್ರತಿಯೊಂದು ಜನಗಣತಿಯು ಪೂರ್ಣಗೊಂಡ ಮೇಲೆ, ಲೋಕಸಭೆಯಲ್ಲಿ ಸ್ಥಾನಗಳನ್ನು ರಾಜ್ಯಗಳಿಗೆ ಹಂಚಲು ಮತ್ತು ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಲು ಸಂಸತ್ತು ಕಾನೂನು ಮೂಲಕ ನಿರ್ಧರಿಸಬಹುದಾದಂಥ ಪ್ರಾಧಿಕಾರ ಮತ್ತು ಅಂಥ ರೀತಿಯಲ್ಲಿ ಮರು ಹೊಂದಾಣಿಕೆ ಮಾಡತಕ್ಕದ್ದು: ಪರಂತು, ಅಂಥ ಮರುಹೊಂದಾಣಿಕೆಯು ಆಗ ಅಸ್ತಿತ್ವದಲ್ಲಿರುವ ಲೋಕಸಭೆಯು ವಿಸರ್ಜನೆಯಾಗುವವರೆಗೆ ಆ ಸಭೆಯಲ್ಲಿನ ಪ್ರಾತಿನಿಧ್ಯಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ: (೧೯೭೬ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೧೬ನೆಯ ಪ್ರಕರಣದ ಮೂಲಕ (ದಿನಾಂಕ ೩.೧.೧೯೭೭ ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) [ಮತ್ತು ಪರಂತು, ಅಂಥ ಮರುಹೊಂದಾಣಿಕೆಯು ರಾಷ್ಟ್ರಪತಿಯು ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು ಮತ್ತು ಅಂಥ ಮರುಹೊಂದಾಣಿಕೆಯು ಜಾರಿಗೆ ಬರುವವರೆಗೆ, ಆ ಸಭೆಗೆ ಯಾವುದೇ ಚುನಾವಣೆಯನ್ನು ಅಂಥ ಮರುಹೊಂದಾಣಿಕೆಗೆ ಮೊದಲು ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆ ನಡೆಸಬಹುದು: ಮತ್ತೂ ಪರಂತು, (೨೦೦೧ನೆಯ ಇಸವಿಯ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೪ನೆಯ ಪ್ರಕರಣದ ಮೂಲಕ “೨೦೦೦ದ” ಎಂಬ ಅಂಕಿಗಳಿಗೆ ಮತ್ತು ಅಕ್ಷರಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [೨೦೨೬ ನೆಯ] ಇಸವಿಯ ತರುವಾಯ ಮೊದಲ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ,- (ಅದೇ ೪ನೆಯ ಪ್ರಕರಣದ ಮೂಲಕ ಕೆಲವು ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [(i) ೧೯೭೧ರ ಜನಗಣತಿಯ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಿರುವಂತೆ ಲೋಕಸಭೆಯಲ್ಲಿನ ಸ್ಥಾನಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿರುವುದನ್ನು; ಮತ್ತು (ii) (೨೦೦೩ನೆಯ ಇಸವಿಯ ಸಂವಿಧಾನ (ಎಂಬತ್ತೇಳನೆಯ ತಿದ್ದುಪಡಿ) ಅಧಿನಿಯಮದ ೩ನೆಯ ಪ್ರಕರಣದ ಮೂಲಕ “೧೯೯೧ರ” ಎಂಬ ಅಂಕಿಗಳಿಗೆ ಮತ್ತು ಅಕ್ಷರಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [೨೦೦೧ರ] ಜನಗಣತಿಯ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಬಹುದಾದಂತೆ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಭಾಗಿಸುವುದನ್ನು – ಮರು ಹೊಂದಾಣಿಕೆ ಮಾಡುವುದು ಈ ಅನುಚ್ಛೇದದ ಮೇರೆಗೆ ಅವಶ್ಯವಾಗಿರತಕ್ಕದ್ದಲ್ಲ.]]

೮೩. ಸಂಸತ್ತಿನ ಸದನಗಳ ಅವಧಿ: (೧) ರಾಜ್ಯಸಭೆಯು ವಿಸರ್ಜನೆಗೆ ಒಳಪಡತಕ್ಕದ್ದಲ್ಲ. ಆದರೆ ಅದರ ಸದಸ್ಯರಲ್ಲಿ ಸಾಧ್ಯವಾದಷ್ಟುಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು, ಸಂಸತ್ತು ಕಾನೂನಿನ ಮೂಲಕ ಆ ಬಗ್ಗೆ ಮಾಡಿದ ಉಪಬಂಧಗಳಿಗನುಸಾರವಾಗಿ, ಪ್ರತಿ ಎರಡನೆ ವರ್ಷ ಮುಕ್ತಾಯವಾದ ಮೇಲೆ ಆದಷ್ಟು ಬೇಗನೆ ನಿವೃತ್ತರಾಗತಕ್ಕದ್ದು. (೨) ಲೋಕಸಭೆಯು, ಅದರ ಮೊದಲನೆಯ ಸಭೆಗೆ ಗೊತ್ತುಮಾಡಿರುವ ದಿನಾಂಕದಿಂದ [ಐದು ವರ್ಷಗಳ] (೧೯೭೮ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೧೩ನೆಯ ಪ್ರಕರಣದ ಮೂಲಕ “ಆರು ವರ್ಷಗಳು” ಎಂಬ ಪದಗಳಿಗೆ ಬದಲಾಗಿ (ದಿನಾಂಕ ೨೦-೬-೧೯೭೯ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. ೧೯೭೬ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೧೭ನೆಯ ಪ್ರಕರಣದ ಮೂಲಕ “ಐದು ವರ್ಷಗಳು” ಎಂಬ ಮೂಲ ಪದಗಳಿಗೆ ಬದಲಾಗಿ (ದಿನಾಂಕ ೩-೧-೧೯೭೭ರಿಂದ ಜಾರಿಗೆ ಬರುವಂತೆ) “ಆರು ವರ್ಷಗಳು” ಎಂಬ ಪದಗಳನ್ನು ಪ್ರತ್ಯಾಯೋಜಿಸಲಾಗಿತ್ತು.) ಅವಧಿಗೆ ಮುಂಚಿತವಾಗಿ ವಿಸರ್ಜಿತವಾದ ಹೊರತು, ಅದು ಐದು ವರ್ಷಗಳ ಅವಧಿಯವರೆಗೆ ಮುಂದುವರಿಯತಕ್ಕದ್ದು. ಆದರೆ ಅದಕ್ಕಿಂತ ಹೆಚ್ಚುಕಾಲ ಮುಂದುವರಿಯತಕ್ಕದ್ದಲ್ಲ ಮತ್ತು ಸದರಿ [ಐದು ವರ್ಷಗಳ] (೧೯೭೮ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ ೧೩ನೆಯ ಪ್ರಕರಣದ ಮೂಲಕ “ಆರು ವರ್ಷಗಳು” ಎಂಬ ಪದಗಳಿಗೆ ಬದಲಾಗಿ (ದಿನಾಂಕ ೨೦-೬-೧೯೭೯ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. ೧೯೭೬ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ ೧೭ನೆಯ ಪ್ರಕರಣದ ಮೂಲಕ “ಐದು ವರ್ಷಗಳು” ಎಂಬ ಮೂಲ ಪದಗಳಿಗೆ ಬದಲಾಗಿ (ದಿನಾಂಕ ೩-೧-೧೯೭೭ರಿಂದ ಜಾರಿಗೆ ಬರುವಂತೆ) “ಆರು ವರ್ಷಗಳು” ಎಂಬ ಪದಗಳನ್ನು ಪ್ರತ್ಯಾಯೋಜಿಸಲಾಗಿತ್ತು.) ಅವಧಿಯ ಮುಕ್ತಾಯವು ಆ ಸದನವು ವಿಸರ್ಜನೆಯಾದಂತೆ ಪರಿಣಾಮವುಳ್ಳದ್ದಾಗಿರತಕ್ಕದ್ದು: ಪರಂತು, ತುರ್ತುಪರಿಸ್ಥಿತಿಯ ಉದ್ಘೋಷಣೆಯು ಜಾರಿಯಲ್ಲಿರುವಾಗ ಸಂಸತ್ತು ಕಾನೂನಿನ ಮೂಲಕ ಒಂದು ಸಲಕ್ಕೆ ಒಂದು ವರ್ಷಕ್ಕೆ ಮೀರದ ಅವಧಿಯವರೆಗೆ ಸದರಿ ಅವಧಿಯನ್ನು ವಿಸ್ತರಿಸಬಹುದು ಮತ್ತು ಆ ಉದ್ಘೋಷಣೆಯು ಜಾರಿಯಲ್ಲಿರುವುದು ನಿಂತುಹೋದ ತರುವಾಯ ಯಾವುದೇ ಸಂದರ್ಭದಲ್ಲಿ ಆರು ತಿಂಗಳಿಗೆ ಮೀರಿ ಅವಧಿಯವರೆಗೆ ವಿಸ್ತರಿಸತಕ್ಕದ್ದಲ್ಲ.

೮೪. ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತೆ: ಯಾರೇ ವ್ಯಕ್ತಿಯು,- (೧೯೬೩ನೆಯ ಇಸವಿಯ ಸಂವಿಧಾನ (ಹದಿನಾರನೆಯ ತಿದ್ದುಪಡಿ) ಅಧಿನಿಯಮದ ೩ನೇ ಪ್ರಕರಣದ ಮೂಲಕ (ಎ) ಖಂಡಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [(ಎ) ಭಾರತದ ನಾಗರಿಕನಾಗಿರುವ ಹೊರತು ಮತ್ತು ಚುನಾವಣಾ ಆಯೋಗವು ಆ ಬಗ್ಗೆ ಅಧಿಕೃತಗೊಳಿಸಿರುವ ಯಾರೇ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಯಲ್ಲಿ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಿರುವ ಹೊರತು ಹಾಗೂ ಅದಕ್ಕೆ ರುಜು ಹಾಕಿರುವ ಹೊರತು;] (ಬಿ) ರಾಜ್ಯಸಭೆಯ ಸ್ಥಾನದ ಸಂದರ್ಭದಲ್ಲಿ ಮೂವತ್ತು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು ಮತ್ತು ಲೋಕಸಭೆಯ ಸ್ಥಾನದ ಸಂದರ್ಭದಲ್ಲಿ ಇಪ್ಪತ್ತೈದು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು; ಮತ್ತು (ಸಿ) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಇತರ ಅರ್ಹತೆಗಳನ್ನು ಹೊಂದಿರುವ ಹೊರತು – ಸಂಸತ್ತಿನ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಆಯ್ಕೆ ಹೊಂದಲು ಅವನು ಅರ್ಹನಾಗಿರತಕ್ಕದ್ದಲ್ಲ.

[೮೫. ಸಂಸತ್ತಿನ ಅಧಿವೇಶನಗಳು, ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ:(೧೯೫೧ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ ೬ನೆಯ ಪ್ರಕರಣದ ಮೂಲಕ ೮೫ನೇ ಅನುಚ್ಫೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (೧) ರಾಷ್ಟ್ರಪತಿಯು ಸೂಕ್ತವೆಂದು ಭಾವಿಸತಕ್ಕಂಥ ಕಾಲದಲ್ಲಿ ಮತ್ತು ಸ್ಥಳದಲ್ಲಿ ಸಭೆ ಸೇರುವಂತೆ ಸಂಸತ್ತಿನ ಪ್ರತಿಯೊಂದು ಸದನವನ್ನೂ ಅವನು ಕಾಲಕಾಲಕ್ಕೆ ಕರೆಯತಕ್ಕದ್ದು; ಆದರೆ ಒಂದು ಅಧಿವೇಶನದ ಕೊನೆಯ ಉಪವೇಶನ ಮತ್ತು ಮುಂದಿನ ಅಧಿವೇಶನದ ಮೊದಲನೆಯ ಉಪವೇಶನಕ್ಕೆ ಗೊತ್ತುಮಾಡಿರುವ ದಿನಾಂಕ – ಇವುಗಳ ನಡುವೆ ಆರು ತಿಂಗಳ ಅಂತರವಿರತಕ್ಕದ್ದಲ್ಲ. (೨) ರಾಷ್ಟ್ರಪತಿಯು ಕಾಲಕಾಲಕ್ಕೆ,- (ಎ) ಎರಡೂ ಸದನಗಳ ಅಧಿವೇಶನವನ್ನು ಅಥವಾ ಯಾವುದೇ ಒಂದು ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಬಹುದು; (ಬಿ) ಲೋಕಸಭೆಯನ್ನು ವಿಸರ್ಜಿಸಬಹುದು.]

೮೬. ಸದನಗಳನ್ನು ಸಂಬೋಧಿಸಿ ಭಾಷಣ ಮಾಡಲು ಮತ್ತು ಸದನಗಳಿಗೆ ಸಂದೇಶಗಳನ್ನು ಕಳುಹಿಸಲು ರಾಷ್ಟ್ರಪತಿಗಿರುವ ಹಕ್ಕು : (೧) ರಾಷ್ಟ್ರಪತಿಯು ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ಒಂದು ಸದನವನ್ನು ಅಥವಾ ಒಟ್ಟಿಗೆ ಸಭೆ ಸೇರಿರುವ ಉಭಯ ಸದನಗಳನ್ನು ಸಂಬೋಧಿಸಿ ಭಾಷಣ ಮಾಡಬಹುದು ಮತ್ತು ಆ ಉದ್ದೇಶಕ್ಕಾಗಿ ಸದಸ್ಯರ ಹಾಜರಾತಿಯನ್ನು ಅಗತ್ಯಪಡಿಸಬಹುದು. (೨) ಸಂಸತ್ತಿನಲ್ಲಿ ಆಗ ಇತ್ಯರ್ಥವಾಗದೆ ಉಳಿದಿರುವ ಯಾವುದೇ ವಿಧೇಯಕಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯು ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ಸದನಕ್ಕಾದರೂ ಸಂದೇಶಗಳನ್ನು ಕಳುಹಿಸಬಹುದು ಮತ್ತು ಯಾವ ಸದನಕ್ಕೆ ಆ ಯಾವುದೇ ಸಂದೇಶವನ್ನು ಹಾಗೆ ಕಳುಹಿಸಲಾಗಿದೆಯೋ ಆ ಸದನವು, ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕೆಂದು ಸಂದೇಶದ ಮೂಲಕ ಅಗತ್ಯಪಡಿಸಿರುವ ಯಾವುದೇ ವಿಷಯವನ್ನು ಅನುಕೂಲವಾದಷ್ಟು ಬೇಗನೆ ಪರ್ಯಾಲೋಚಿಸತಕ್ಕದ್ದು.

೮೭. ರಾಷ್ಟ್ರಪತಿಯಿಂದ ವಿಶೇಷ ಭಾಷಣ: (೧) (೧೯೫೧ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ ೭ನೆಯ ಪ್ರಕರಣದ ಮೂಲಕ “ಪ್ರತಿಯೊಂದು ಅಧಿವೇಶನದ” ಎಂಬ ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [ಲೋಕಸಭೆಯ ಪ್ರತಿಯೊಂದು ಸಾರ್ವತ್ರಿಕ ಚುನಾವಣೆ ತರುವಾಯದ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ಮತ್ತು ಪ್ರತಿವರ್ಷದ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ] ರಾಷ್ಟ್ರಪತಿಯು ಒಟ್ಟಿಗೆ ಸಭೆ ಸೇರುವ ಸಂಸತ್ತಿನ ಉಭಯ ಸದನಗಳನ್ನು ಸಂಬೋಧಿಸಿ ಭಾಷಣ ಮಾಡತಕ್ಕದ್ದು ಮತ್ತು ಸಂಸತ್ತನ್ನು ಕರೆದಿರುವ ಕಾರಣವನ್ನು ಅದಕ್ಕೆ ತಿಳಿಸತಕ್ಕದ್ದು. (೨) ಅಂಥ ಭಾಷಣದಲ್ಲಿ ಉಲ್ಲೇಖಿಸಿದ ವಿಷಯಗಳ ಚರ್ಚೆಗಾಗಿ ಕಾಲವನ್ನು ಗೊತ್ತುಪಡಿಸುವ ಬಗ್ಗೆ (೧೯೫೧ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ ೭ನೆಯ ಪ್ರಕರಣದ ಮೂಲಕ “ಮತ್ತು ಸದನದ ಇತರ ಕಾರ್ಯಕಲಾಪಗಳಿಗಿಂತ ಆ ಚರ್ಚೆಗೆ ಆದ್ಯತೆ ಕೊಡುವ ಬಗ್ಗೆ” ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.) ಎರಡೂ ಸದನಗಳ ಕಾರ್ಯವಿಧಾನವನ್ನು ವಿನಿಯಮಗೊಳಿಸುವಂಥ ನಿಯಮಗಳ ಮೂಲಕ ಉಪಬಂಧವನ್ನು ಮಾಡತಕ್ಕದ್ದು.

೮೮. ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಅಟಾರ್ನಿ ಜನರಲ್‌ನ ಹಕ್ಕುಗಳು: ಪ್ರತಿಯೊಬ್ಬ ಮಂತ್ರಿಯು ಮತ್ತು ಭಾರತದ ಅಟಾರ್ನಿ ಜನರಲ್‌ನು ಉಭಯ ಸದನಗಳ ಪೈಕಿ ಯಾವುದೇ ಸದನದಲ್ಲಿ ಅಥವಾ ಉಭಯ ಸದನಗಳ ಯಾವುದೇ ಜಂಟಿ ಸಭೆಯಲ್ಲಿ ಮತ್ತು ಅವನನ್ನು ಸದಸ್ಯನಾಗಿ ಹೆಸರಿಸಬಹುದಾದ ಸಂಸತ್ತಿನ ಯಾವುದೇ ಸಮಿತಿಯಲ್ಲಿ ಮಾತನಾಡುವುದಕ್ಕೆ ಮತ್ತು ಅವುಗಳ ವ್ಯವಹರಣೆಗಳಲ್ಲಿ ಭಾಗವಹಿಸುವುದಕ್ಕೆ ಹಕ್ಕು ಹೊಂದಿರತಕ್ಕದ್ದು. ಆದರೆ ಈ ಅನುಚ್ಫೇದದ ಕಾರಣದಿಂದಲೇ ಮತ ನೀಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.

Leave a Reply