ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಡಿ.ಕೆ.ಶಿವಕುಮಾರ್

2 years ago

ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಪದಗ್ರಹಣ

ಯುವ ನ್ಯಾಯ ಗ್ಯಾರಂಟಿ ಬಿಡುಗಡೆ

ಬೆಂಗಳೂರು: ಕೆಪಿಸಿಸಿ ಭಾರತ್ ಜೋಡೋ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಪದಗ್ರಹಣ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಯುವ ನ್ಯಾಯ ಗ್ಯಾರಂಟಿ ಬಿಡುಗಡೆ ಸಮಾರಂಭ ನಡೆಯಿತು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ದೇಶಕ್ಕೆ ಡೊಡ್ಡ ಅಧಾರ ಸ್ಥಂಭ ಯುವ ಸಮೂಹ, ರಾಜೀವ್ ಗಾಂಧಿರವರು ಯುವಕರ ಮೇಲೆ ಅಪಾರ ವಿಶ್ವಾಸವಿಟ್ಟು 18 ವರ್ಷಕ್ಕೆ ಮತದಾನ ಹಕ್ಕು ನೀಡಿದರು. ದೇಶ ಎಲ್ಲ ಪಕ್ಷದವರು ವಿರೋಧ ಮಾಡಿದರು ಅಚಲವಾದ ನಂಬಿಕೆಯಿಂದ ದೇಶ ಹಳೆಯದಾದರು ಯುವ ಶಕ್ತಿ ತುಂಬಿದೆ ಎಂದರು.

ಲಾಲು ಪ್ರಸಾದ್ ಯಾದವ್ ಅವರ ಸಹ ವಿರೋಧ ಪಾರ್ಟಿಯಲ್ಲಿ ಇದ್ದರು. ಯುವಕರ ಬಗ್ಗೆ ಟೀಕೆ, ಟಿಪ್ಪಣಿ ಮಾಡುತ್ತಿದ್ದರು, ಸೇನೆ, ವಾಯಸೇನೆ ನೇಮಕಾತಿ 16 ವರ್ಷಕ್ಕೆ ಬಂದೂಕು ಕೊಟ್ಟು ದೇಶ ರಕ್ಷಣೆ ಮಾಡಲು ಕಳುಹಿಸುತ್ತೇವೆ. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ದೇಶ ಕಾಯುವ ಯುವ ಸಮೂಹಕ್ಕೆ ನಾವು ಮತದಾನ ಕೊಡಬೇಕು ಎಂದು 21ವರ್ಷದಿಂದ 18ವರ್ಷಕ್ಕೆ ಇಳಿಸಿದರು ಎಂದರು.

ಕಾಂಗ್ರೆಸ್ ಪಕ್ಷ ದೇಶಕ್ಕೆ ಹಲವಾರು ಯುವ ನಾಯಕರನ್ನ ಕೊಟ್ಟಿದೆ. ವಿಧಾನಸಭೆಯಲ್ಲಿ 40 ಯುವಕರಿಗೆ ಟಿಕೇಟು ನೀಡಲಾಯಿತು. ಲೋಕಸಭಾ ಚುನಾವಣೆ 14 ಯುವಕರಿಗೆ ಟಿಕೇಟು ನೀಡಲಾಗಿದೆ. ಮಹಿಳೆಯರು ಮತ್ತು ಯುವಕರ ಮೇಲೆ ನನಗೆ ನಂಬಿಕೆ ಇದೆ ಎಂದರು.

2 ಕೋಟಿ ಉದ್ಯೋಗ ಸೃಷ್ಟಿಸುವ ಬಿಜೆಪಿ ಸರ್ಕಾರದ ಭರವಸೆ ಹುಸಿಯಾಯಿತು, ಪಕೋಡ ಮಾರಿ ಎಂದು ಹೇಳುತ್ತಾರೆ. ಇದರ ವಿರುದ್ದ ಹೋರಾಟ ಮಾಡಲಾಯಿತು. ರಾಹುಲ್ ಗಾಂಧಿಯವರು ಯುವಕರ ಕುರಿತು ಅಪಾರ ಭರವಸೆ ಇಟ್ಟಿದ್ದಾರೆ. ಯುವ ನ್ಯಾಯ ಗ್ಯಾರಂಟಿ ಯೋಜನೆ 30 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ, ಮೊದಲ ಉದ್ಯೋಗ ಖಚಿತ. ಒಂದು ವರ್ಷದಲ್ಲಿ 1 ಲಕ್ಷದಂತೆ ಡಿಪ್ಲೋಮೊ ಹೊಂದಿರುವವರು, ಅಥವಾ 25 ವರ್ಷದೊಳಗಿನ ಪದವೀಧರರಿಗೆ ಉದ್ಯೋಗ ಖಚಿತ. ಪ್ರಶ್ನೆ ಪತ್ರಿಕೆ ಸೋರಿಕೆ ಮುಕ್ತಿ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕಾನೂನು ಜಾರಿ, ಗಿಗ್ ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆಯ ಕಾನೂನು ಖಾತರಿ, ಯುವ ಬೆಳಕು ಯೋಜನೆ ಅಡಿಯಲ್ಲಿ ಪ್ರತಿಯೊಂದು ಎಲ್ಲ ಜಿಲ್ಲೆಗಳಿಗೆ 5000 ಕೋಟಿ ಆರಂಭಿಕ ನಿಧಿ, 40 ವರ್ಷಕ್ಕಿಂತ ಕಡಿಮೆ ಇರುವ ಯುವ ಸಮುದಾಯಕ್ಕೆ ಪ್ರಯೋಜನವಾಗಲಿದೆ ಎಂದರು.

ದೇಶದಲ್ಲಿ ಬದಲಾವಣೆ ತರಲು ಯುವಕರಿಂದ ಮಾತ್ರ ಸಾಧ್ಯ .ಪ್ರತಿ ಬೂತ್ ಗಳನ್ನು ಜವಾಬ್ದಾರಿ ತೆಗೆದುಕೊಂಡು ಚಳುವಳಿ ರೂಪದಲ್ಲಿ ಹೋರಾಟ ಮಾಡಬೇಕು. ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ. ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡಿ ಎಂದರು.

ಡಬ್ಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವುದು ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಯುವ ಕಾಂಗ್ರೆಸ್ ಸಧೃಡವಾಗಿದ್ದರೆ ಪಕ್ಷ ಬಲಿಷ್ಠವಾಗಿರುತ್ತದೆ. ರಾಜ್ಯದಲ್ಲಿ ಹಲವಾರು ನಾಯಕರುಗಳು ಯುವ ಕಾಂಗ್ರೆಸ್ ನಿಂದ ಬಂದಿದ್ದಾರೆ ಎಂದರು.

ಬಿಜೆಪಿ ಪಕ್ಷ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದವರ ಮೇಲೆ ದಾಳಿ ಮಾಡಿಸುತ್ತಿದೆ ನಮ್ಮ ಪಕ್ಷಕ್ಕೆ ಬಂದರೆ ನಿಮ್ಮ ಮೇಲೆ ಏನು ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರೆ. ಜಾತಿ, ಜಾತಿ ನಡುವೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಬಂದಿದೆ. ಇದರಲ್ಲಿ ಯುವಕರ ಪಾತ್ರ ಪ್ರಮುಖ ಎಂದರು.

ಅಧಿಕಾರ ಸ್ವೀಕರಿಸಿದ ಮಂಜುನಾಥ್ ಗೌಡ ಮಾತನಾಡಿ, ನನ್ನ ರಾಜಕೀಯ ಗುರುಗಳಾದ ಡಿ.ಕೆ.ಶಿವಕುಮಾರ್ ಅವರ ಆಶೀರ್ವಾದದ ಫಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷ ನಿಷ್ಠೆ ಬದ್ದತೆಯಿಂದ ಕೆಲಸ ಮಾಡಬೇಕು. ನಾವು ಇದ್ದರು, ಇಲ್ಲದೇ ಹೋದರು ಪಕ್ಷ ನಡೆಯುತ್ತದೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿ ಯೋಜನೆಯನ್ನು ನಾಡಿನ ಜನತೆಗೆ ಭರವಸೆ ನೀಡಿತ್ತು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 10 ತಿಂಗಳ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿದೆ. ದೇಶ ಅಭಿವೃದ್ದಿ ಪಥದತ್ತ ಸಾಗಲು ಯುವಕರು ಸೇವೆ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಶದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ಜಿಲ್ಲಾಧ್ಯಕ್ಷ ಗೌತಮ್, ಅಂಬೇಡ್ಕರ್ ಅಭಿವೃದಿ ನಿಗಮ ಅಧ್ಯಕ್ಷ ಸಂಪತ್ ರಾಜ್, ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಜಯ್ ಮುಳಗುಂದ್, ಮೋಹನ್, ಆರ್.ಮಂಜುನಾಥ್, ಶಂಕರ್ ಗುಹಾ ಯುವ ಕಾಂಗ್ರೆಸ್ ಉಸ್ತುವಾರಿ ಬಂಟಿ ಮೊದಲಾದವರು ಇದ್ದರು.

Leave a Reply