ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಕೃಷ್ಣ ಬೈರೇಗೌಡ

2 years ago

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಚುನಾವಣೆ ಪೂರ್ವಬಾವಿ ಸಭೆ

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಸಭೆ

ಬೆಂಗಳೂರು: ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಅಭ್ಯರ್ಥಿ ರಾಜೀವ್ ಗೌಡ ಪರ ಕಾಂಗ್ರೆಸ್ ಕಾರ್ಯಕರ್ತರ ಚುನಾವಣೆ ಸಭೆ ನಡೆಯಿತು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವುದು ಖಚಿತ. ಬಿಜೆಪಿ ಕರ್ನಾಟಕದಲ್ಲಿ ಒಡೆದ ಮನೆಯಾಗಿದೆ. ಇಡೀ ಒಂದು ಕುಟುಂಬಕ್ಕಾಗಿ ರಾಜಕೀಯ ನಡೆಯುತ್ತಿದೆ. ಶೋಭಾ ಕರಂದ್ಲಾಜೆಗೆ ಬಿಎಸ್.ಯಡಿಯೂರಪ್ಪ ಅವರಿಗೆ ಖುಷಿಪಡಿಸಲು ಟಿಕೇಟು ನೀಡಿದ್ದಾರೆ. ಚಿಕ್ಕಮಗಳೂರುನಿಂದ ಜನರು ಬೇಡ ಎಂದು ಹೊರತಳ್ಳಿದ್ದಾರೆ. ಎಲ್ಲ ಕಡೆ ತಿರಸ್ಕಾರ ಆಗಿರುವ ಕ್ಯಾಂಡಿಡೇಟ್ ಶೋಭಾ ಕರಂದ್ಲಾಜೆ ಎಂದರು.

ದೇಶ ಸಾಕುತ್ತಿರುವುದು ಬೆಂಗಳೂರು ನಾಗರಿಕರು, ಬೆಂಗಳೂರು ಮೂಲ ನಿವಾಸಿಗಳಾದ ರಾಜೀವ್ ಗೌಡರು ಕಾಂಗ್ರೆಸ್ ಪಕ್ಷ ಕಳುಹಿಸಿಕೊಟ್ಟಿದೆ. 10 ವರ್ಷಗಳಿಂದ ಬಿಜೆಪಿ ಸರ್ಕಾರ ಅವಧಿಯಲ್ಲಿ ಆಹಾರ ಪದಾರ್ಥ ಮತ್ತು ಪೆಟ್ರೋಲ್, ಅಡುಗೆ ಆನಿಲ ಬೆಲೆ ಹೆಚ್ಚಳವಾಗಿದೆ. ಜನಸಾಮಾನ್ಯರು ದುಡಿದು ದುಡ್ಡು ಖರ್ಚುಗುತ್ತಿದೆ ಎಂದರು.

ಅಂಬಾನಿ, ಅದಾನಿ ಮಾತ್ರ ಶ್ರೀಮಂತರಾಗುತ್ತಾರೆ. ಅಂಬಾನಿ ಮಗನ ಮದುವೆ 500 ಕೋಟಿ ಖರ್ಚು ಮಾಡಿದ್ದಾರೆ, ಸರ್ಕಾರ ವಿಮಾನ ನಿಲ್ದಾಣವನ್ನು ಅಂಬಾನಿ ಕುಟುಂಬದ ಆಹ್ವಾನಿತರಿಗೆ ಬಿಟ್ಟುಕೊಟ್ಟಿತು. ಶ್ರೀಮಂತರಿಗೆ 10 ವರ್ಷದ ಅವಧಿಯಲ್ಲಿ 20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ದೇಶದಲ್ಲಿ ರೈತರ ಪರಿಸ್ಥಿತಿ ಅದೋಗತಿಗೆ ಇಳಿದಿದೆ. ಜನಧನ್ ಅಕೌಂಟ್ 15 ಲಕ್ಷ ಬಂದಿಲ್ಲ. ಆದರೆ ಕಾಂಗ್ರೆಸ್ ಗ್ಯಾರಂಟಿ ಹಣ ಹೋಗುತ್ತಿದೆ ಎಂದರು.

ಪ್ರತಿ ತಿಂಗಳು 8000 ರೂಪಾಯಿ 1 ಲಕ್ಷ ರೂಪಾಯಿ ಮಹಿಳೆಯರಿಗೆ ಸಹಾಯಧನ ಇಂಡಿಯ ಮೈತ್ರಿಕೂಟ ಕಾಂಗ್ರೆಸ್ ಸರ್ಕಾರ ಬಂದರೆ ಕೊಡಲಾಗುತ್ತದೆ. ಬರಗಾಲಕ್ಕೆ ಪರಿಹಾರ ಕೊಟ್ಟಿಲ್ಲ ಕೇಂದ್ರ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ರೈತರ ಮರಣಹೋಮವಾಗುತ್ತಿದೆ. 27 ಲೋಕಸಭಾ ಸದಸ್ಯರು ಕರ್ನಾಟಕದ ಪಾಲಿಗೆ ಗೋಳು ಎಂದರು.

ಜಿ.ಸಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಡೊಡ್ಡ ಹಬ್ಬ ಲೋಕಸಭಾ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನ 8 ತಿಂಗಳ ಅವಧಿಯಲ್ಲಿ ಪೂರೈಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡೆತ್ತಿನ ಸರ್ಕಾರ ಎಂದರು.

ಬಿಜೆಪಿ ಪಕ್ಷದಲ್ಲಿ ಬಿ.ಎಸ್.ವೈ. ಕುಟುಂಬ ರಾಜಕಾರಣದಿಂದ ಎಲ್ಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಜೆಡಿಎಸ್ ಗೆ ಬುದ್ಧಿ ಬಂದಿಲ್ಲ. ಈಗಾಗಲೆ ರಾಜ್ಯಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಉಂಡಿದ್ದಾರೆ ಎಂದರು.

ರಾಜೀವ್ ಗೌಡ ಮಾತನಾಡಿ, ವರ್ಲ್ಡ್ ಕ್ಲಾಸ್ ಸಿಟಿಗೆ ವರ್ಲ್ಡ್ ಕ್ಲಾಸ್ ಅಭ್ಯರ್ಥಿಯನ್ನ ಉತ್ತರ ಲೋಕಸಭಾ ಕ್ಷೇತ್ರಕ್ಕೆ ನೀಡಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹವಮಾನ ಕುರಿತು ಯೋಜನೆ ರೂಪಿಸಲಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ನಿವಾರಣೆ ಕಾಂಗ್ರೆಸ್ ಪಕ್ಷದಲ್ಲಿ ವಿಭಾಗ ಸ್ಥಾಪನೆಯಾಗಿದೆ. ಬಿಜೆಪಿ ಪಕ್ಷ 10ವ ರ್ಷ ಸಾಧನೆ ಶೂನ್ಯ ಎಂದರು.

ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ವಾಜಿದ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥಗೌಡ, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಎಮ್.ಶಿವರಾಜು, ಉತ್ತರ ಜಿಲ್ಲಾ ಇಂಟಕ್ ಅಧ್ಯಕ್ಷ ಶ್ರೀಧರ್, ಬೆಂಗಳೂರು ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಜನಾರ್ಧನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುಧೀಂದ್ರ, ನಟರಾಜ್, ಪರಿಸರ ರಾಮಕೃಷ್ಣ, ಮಹಿಳಾ ಅಧ್ಯಕ್ಷರುಗಳಾದ ಭವ್ಯ, ಸುನೀತಾಬಾಯಿ, ಮಂಜುಳ ಮೊದಲಾದವರು ಭಾಗವಹಿಸಿದ್ದರು.

Leave a Reply