ಬೆಂಗಳೂರು: ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ದಯಾನಂದನಗರದಿಂದ ಆರಂಭವಾಗಿ, ಬಂಡಿರೆಡ್ಡಿ ಸರ್ಕಲ್, ಪ್ರಕಾಶನಗರದ ಮೂಲಕ ರಾಜಾಜಿನಗರ, ಜೂಗನಹಳ್ಳಿ, ಶ್ರೀರಾಮಮಂದಿರದಲ್ಲಿ ಮುಕ್ತಾಯವಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕಾಂಗ್ರೆಸ್ ಸರ್ಕಾರ ಹಸ್ತದ ಚಿಹ್ನೆ ಬಿಟ್ಟು ಚೊಂಬಿನ ಗುರುತು ಇಟ್ಟುಕೊಳ್ಳಿ, ಬೆಂಗಳೂರು ನಗರ ನಾಗರಿಕರು ತೆರಿಗೆ ಹಣವನ್ನು ಬೆಂಗಳೂರಿಗೆ ಎಷ್ಟು ಖರ್ಚು ಮಾಡುತ್ತೀರ ಎಂದು ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕು. ನೇಹಾ ಕೊಲೆ, ಮೈಸೂರಿನಲ್ಲಿ ಮೋದಿ ಕುರಿತು ಹಾಡು ಹೇಳಿದವನ ಮೇಲೆ ಹಲ್ಲೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದರ ವಿರುದ್ಧ ನಾಳೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್.ಸುರೇಶ್ ಕುಮಾರ್ ಹೇಳಿದರು.
ಮಂಡಲ ಅಧ್ಯಕ್ಷ ಸುದರ್ಶನ್, ಕೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಬಿಬಿಎಂಪಿ ಸದಸ್ಯರಾದ ಎಮ್.ಮುನಿರಾಜು, ಶಕೀಲ ಮುನಿರಾಜು, ದೀಪಾ ನಾಗೇಶ್, ಬಿ.ಎನ್.ಶ್ರೀನಿವಾಸ್, ಸತೀಶ್ ಭಗವಾನ್, ಯಶಸ್ ನಾಯಕ್, ಕಿರಣ್,ಸಂಜಯ್ ಕುಮಾರ್, ಅಮಿತ್ ಜೈನ್, ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.



