ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕಮಿಷನ್ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ವ್ಯವಸ್ಥಿತವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಾಂಗ್ರೆಸ್ ನದು ಶೇ.100ರಷ್ಟು ಕಮೀಷನ್ ಸರ್ಕಾರ ಎಂದು ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಆರೋಪ ಮಾಡಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ರಾಜ್ಯದಲ್ಲಿ ಈಗ 60% ಕಮೀಷನ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ ರಾಜ ಸರ್ಕಾರದಲ್ಲಿರುವ ಕಾಂಗ್ರೆಸ್ಸಿಗರು 100% ಕಮೀಷನ್ ಹೊಡೆಯುವುದರಲ್ಲಿ ನಿಸ್ಸೀಮರು ಎಂದು ಬಿಜೆಪಿ ಆರೋಪಿಸಿದೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸುಖಾಸುಮ್ಮನೆ ಸರ್ಕಾರದ ವಿರುದ್ಧ ಆರೋಪ ಮಾಡಿಲ್ಲ ಎಂದು ಹೇಳಿದ ಅಶ್ವತ ನಾರಾಯಣ್ ಎಲ್ಲಾ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಕಮಿಷನ್ ನಡೆಯುತ್ತಲೇ ಇದೆ. ಇದರಲ್ಲಿ ಸುಳ್ಳೇನಿಲ್ಲ. ವಿಧಾನಸೌಧದ ಕಂಬಗಳು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ಕೂಡಿವೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕಾಗಿದೆ ಎಂದರು.
ಈ ಸರ್ಕಾರ ಆರಂಭದಿಂದಲೂ ಹಗರಣಗಳ ಮೇಲೆ ಹಗರಣ ನಡೆಸುತ್ತಿದೆ. ಬರೀ ಭ್ರಷ್ಟಾಚಾರ ಆಪಾದನೆಯಲ್ಲ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ವಾಲ್ಮೀಕಿ ನಿಗಮದಲ್ಲಿ 100% ಭ್ರಷ್ಟಾಚಾರ ಅವರೇ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಆತಹತ್ಯೆಯಿಂದ ಈ ಪ್ರಕರಣ ಹೊರಗೆ ಬಂತು ಎಂದರು.
ಪರಶುರಾಮ್ ಆತಹತ್ಯೆ ಮಾಡಿಕೊಂಡಿದ್ದೇಕೆ? ಎಸ್ಐ ಪೋಸ್ಟ್ ವರ್ಗಾವಣೆಗೆ 35 ಲಕ್ಷ , ಇದರಲ್ಲೂ ಸಾಕ್ಷ್ಯ ಇದೆಯಲ್ಲವೇ? ಮುಡಾದಲ್ಲೂ ಸಾಕ್ಷಿ ಇದೆ. ಗುತ್ತಿಗೆದಾರ ಸಚಿನ್ ಆತಹತ್ಯೆ ಪ್ರಕರಣದಲ್ಲೂ ಸಾಕ್ಷಿ ಇದೆ ಎಂದರು.
ಬೆಳಗಾವಿಯಲ್ಲೂ ಸಚಿವರ ಪಿಎಯಿಂದ ಎಸ್ಡಿಎ ನೌಕರ ಆತ್ಮಹತ್ಯೆ, ಅಬಕಾರಿ, ಆರೋಗ್ಯ ಇಲಾಖೆ ಗಳಲ್ಲೂ ಕಮೀಷನ್, ಭ್ರಷ್ಟಾಚಾರ ನಡೆಯತ್ತಿದೆ. ಸಚಿವರಿಗೂ ಕಮೀಷನ್ ಕೊಡಬೇಕು. ಏನಾದರೂ ಮಾಡಿ ಇವ್ರಂತೂ ಭಂಡರಾಗಿದ್ದಾರೆ, ನಾವಿರುವುದೇ ಹೀಗೆ ಅನ್ನುತ್ತಿದಾರೆ. ಒಂದು ಕಡೆ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ಮಾಡುವುದಕ್ಕೂ ಜಾತಿ ಹೆಸರು ಬಳಸುತ್ತಿದ್ದಾರೆ. ಜಾತಿ ಹೆಸರಲ್ಲಿ ಅನುಕಂಪ ಪಡೆದು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನಮ್ಮ ಮೇಲೆ 40% ಆರೋಪ ಮಾಡಿದರು. ಲೋಕಾಯುಕ್ತ ಈಗ ನಮ್ಮ ಮೇಲಿನ ಆರೋಪಕ್ಕೆ ಕ್ಲೀನ್ ಚಿಟ್ ಕೊಟ್ಟಿದೆ. ನಮ್ಮ ಸಿಎಂ ಮೇಲೆ ಪೇಸಿಎಂ, 40% ಆರೋಪ ಮಾಡಿದ್ದರಲ್ಲ, ಯಾವ ದಾಖಲೆ ಕೊಟ್ಟರು ಇವರು? ಎಂದರು.
ಈಗ ಇವರ ಮೇಲಿನ ಆರೋಪಗಳಿಗೆ ದಾಖಲೆ ಎಲ್ಲ ಇದೆ. ಲೈಸೆನ್ಸ್ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇವರು ಭಂಡ ಬಿದ್ದಿದ್ದಾರೆ, ಭಂಡರ ವಿರುದ್ಧ ಏನು ಹೋರಾಟ ಮಾಡುತ್ತೀರಿ ಹೇಳಿ? ಎಂದರು.




