ದೆಹಲಿ: 2024ರ ಲೋಕಸಭೆ ಚುನಾವಣೆಗೆ ಭರದ ಸಿದ್ದತೆ ಆರಂಭಿಸಿರುವ ಕಾಂಗ್ರೆಸ್ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಿದೆ. ಜೊತೆಗೆ, ಗ್ಯಾರಂಟಿ ಭರವಸೆಗಳ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಸಿಎಂ ಸಿದ್ದರಾಮಯ್ಯ ಅವರನ್ನು ಸಮಿತಿಯ ಸದಸ್ಯರಾಗಿ ನೇಮಿಸಿದೆ. ಇವರೊಂದಿಗೆ ಛತ್ತೀಸ್ಗಡ ಮಾಜಿ ಡಿಸಿಎಂ ಟಿ.ಎಸ್.ಸಿಂಗ್ ದೇವ್ ಅವರನ್ನು ಪ್ರಮುಖ ಸಮಿತಿ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ತಮ್ಮನ್ನು ಪ್ರಣಾಳಿಕೆ ಸಮಿತಿ ಸದಸ್ಯರಾಗಿ ನೇಮಕ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಮುಂಬರುವ ಲೋಕಸಭಾ ಚುನಾವಣೆಯ ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ’ಯಲ್ಲಿ ನನ್ನನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ
- ಪಿ. ಚಿದಂಬರಂ, ಅಧ್ಯಕ್ಷ
- ಟಿ.ಎಸ್. ಸಿಂಗ್ ದೇವ್, ಸಂಚಾಲಕ
- ಸಿದ್ದರಾಮಯ್ಯ
- ಪ್ರಿಯಾಂಕಾ ಗಾಂಧಿ ವಾದ್ರಾ
- ಆನಂದ್ ಶರ್ಮಾ
- ಜೈರಾಮ್ ರಮೇಶ್
- ಡಾ. ಶಶಿ ತರೂರ್
- ಗೈಖಂಗಮ್
- ಗೌರವ್ ಗೊಗೊಯ್
- ಪ್ರವೀಣ್ ಚಕ್ರವರ್ತಿ
- ಇಮ್ರಾನ್ ಪ್ರತಾಪಗರ್ಹಿ
- ಕೆ. ರಾಜು
- ಓಂಕಾರ್ ಸಿಂಗ್ ಮಕ್ರಮ್
- ರಂಜೀತ್ ರಂಜನ್
- ಜಿಗ್ನೇಶ್ ಮೇವಾನಿ
- ಗುರುದೀಪ್ ಸಪ್ಪಲ್




