ಬಿ.ಬಿ.ಎಂ.ಪಿ.ಚುನಾವಣೆ ತತಕ್ಷಣ ಮಾಡಲು ಕ್ರಮ ಕೈಗೊಳ್ಳಬೇಕು: ಕಾಂಗ್ರೆಸ್ ಆಗ್ರಹ

4 years ago

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಬಿ.ಬಿ.ಎಂ.ಪಿ.ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಆದರೆ ಸುಪ್ರೀಂಕೋರ್ಟ್ ದಿನಾಂಕ 28ನೇ ತಾರೀಖು ಮಹತ್ವದ ಆದೇಶ ನೀಡಿ ಒಂದು ವಾರದೊಳಗೆ ಮೀಸಲಾತಿ ಪ್ರಕಟಣೆ ಮಾಡಿ, ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಹೇಳಿದೆ ಎಂದು ವಿಪಕ್ಷ ನಾಯಕ ಎಮ್.ಶಿವರಾಜು ಹೇಳಿದರು.
ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಬಿ.ಬಿ.ಎಂ.ಪಿ.ಚುನಾವಣೆ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತಾಡಿದ ಅವರು, ಅಧಿಕಾರ ವಿಕೇಂದ್ರೀಕರಣ ವಿರೋಧಿ ನಿಲುವು ಮತ್ತು ಬಿ.ಬಿ.ಎಂ.ಪಿ. ಚುನಾವಣೆ ಮುಂದೂಡಿಕೆ ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ವಾರ್ಡ್ ವಿಂಗಡಣೆ, ಮೀಸಲಾತಿ ಮಾಡಲು 8 ವಾರ ಗಡುವು ನೀಡಿದರು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಚುನಾವಣೆ ಸಂದರ್ಭದಲ್ಲಿ 1600 ಕೋಟಿ ರಾಜಕಾಲುವೆ ದುರಸ್ತಿಗೆ ಕೇವಲ ಬಿ.ಜೆ.ಪಿ. ಶಾಸಕರುಗಳಿಗೆ ಮಾತ್ರ ನೀಡಿದ್ದಾರೆ. ಬಿ.ಜೆ.ಪಿ. ಸಚಿವರು ಚುನಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಸುಪ್ರಿಂಕೋರ್ಟ್ ಆದೇಶ ನೀಡಿದರು ಚುನಾವಣೆ ಮಾಡಲು ಹಿಂದೇಟು ಹಾಕುತ್ತಿದೆ. ಚುನಾವಣೆ ಮುಂದೂಡಿಕೆ ಮಾಡಿದರೆ ಚುನಾವಣೆ ಆಯೋಗಕ್ಕೆ ಛೀಮಾರಿ ಖಚಿತ ಎಂದರು.

ಒಂಟಿ ಮನೆ ಯೋಜನೆಗೆ ಅನುದಾನವಿಲ್ಲ, ಕಲ್ಯಾಣ ಕಾರ್ಯಕ್ರಮಗಳು ನಿಂತಿವೆ. ಜನವಿರೋಧಿ ನಿಲುವುವಿನಿಂದ ಬೆಂಗಳೂರು ನಗರ, ಜನರು ನರಳುತ್ತಿದ್ದಾರೆ ಎಂದು ಹೇಳಿದರು.

ಅಬ್ದುಲ್ ವಾಜಿದ್ ಮಾತಾಡಿ, ಸುಪ್ರೀಂ ಕೋರ್ಟ್ ಒಂದು ವಾರ ಅವಕಾಶ ನೀಡಿ, ಮೀಸಲಾತಿ ಪಟ್ಟಿ ಪ್ರಕಟಣೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಆದರೆ ಸರ್ಕಾರ ಮುಂದೂಡಿಕೆಗೆ ತಂತ್ರ ರೂಪಿಸುತ್ತಿದೆ. ಬಿ.ಜೆ.ಪಿ.ಶಾಸಕರು ಹೇಳುವ ಮೀಸಲಾತಿ ಪಟ್ಟಿ ಮಾಡಬೇಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಾತಿ ಮಾಡಿ. ಬೆಂಗಳೂರು ನಗರದ 7 ಸಚಿವರು ಇದ್ದಾರೆ. ಅವರು ಬೆಂಗಳೂರು ನಗರದ ಅಭಿವೃದ್ಧಿ ಕಡೆ ಗಮನಹರಿಸುತ್ತಿಲ್ಲ ಎಂದರು.

ಎರಡು ವರ್ಷದ ಸರ್ಕಾರದ ಸಾಧನೆ ಶೂನ್ಯ. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಸಮರ್ಪಕ ತಲುಪಿಸುವಂತೆ ಮಾಡಲು ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಮುಖ್ಯ ಎಂದು ಹೇಳಿದರು.
ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಗಂಗಾಬಿಕೆ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಸತ್ಯನಾರಾಯಣ್, ಮೋಹನ್ ಕುಮಾರ್ ಪಾಲ್ಗೊಂಡಿದ್ದರು.

Leave a Reply